ಹಾವೇರಿ:ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಲಿಂಗದಹಳ್ಳಿಯ ಹಿರೇಮಠದಲ್ಲಿನ ಸ್ಫಟಿಕ ಲಿಂಗ ಕಳವಾಗಿ ವಾರವಾಗುತ್ತ ಬಂದರೂ ಇನ್ನೂ ಪತ್ತೆಯಾಗದ್ದರಿಂದ ಅಸಮಾಧಾನಗೊಂಡಿರುವ ವಿಶ್ವ ಹಿಂದು ಪರಿಷತ್, ಲಿಂಗ ಪತ್ತೆಯಾಗದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ದಕ್ಷಿಣ ಭಾರತದ ಪುರಾತನ ಸ್ಫಟಿಕ ಲಿಂಗ ಎನಿಸಿಕೊಂಡಿರುವ ಇದು ಇದೇ ತಿಂಗಳ 7ರಂದು ಕಳವಾಗಿದ್ದು, ಈ ಕುರಿತು ರಾಣೆಬೆನ್ನೂರು ಠಾಣೆ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಕುರಿತು ಮಠದ ಶ್ರೀಗಳು ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸಲಾಗಿದ್ದು, ಮಠಾಧೀಶ ಶಿವಾಚಾರ್ಯ ಸ್ವಾಮೀಜಿ ಅವರಿಂದ ತನಿಖಾ ತಂಡ ಮಹತ್ವದ ಹೇಳಿಕೆಯನ್ನು ಪಡೆದಿತ್ತು.
ಸ್ಥಳೀಯರ ಸಹಾಯದಿಂದ ಅನ್ಯ ಜಿಲ್ಲೆಯ ಅಥವಾ ಅನ್ಯರಾಜ್ಯದವರಿಂದ ಕಳ್ಳತನವಾಗಿರುವ ಶಂಕೆ ಇದ್ದು, ಹಲವು ಅನುಮಾನಿತ ವ್ಯಕ್ತಿಗಳ ಬೆರಳು ಗುರುತನ್ನು ಪೊಲೀಸರು ಪಡೆದಿರುತ್ತಾರೆ. ಐದಾರು ಜನರು ಸೇರಿ ಹೊರಗಿನವರಿಂದ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಸಂಬಂಧ ಶ್ರೀಗಳು ಇಂದು ಎಸ್​ಪಿ ಹನುಮಂತರಾಯ್ ಅವರನ್ನು ಭೇಟಿಯಾಗಿದ್ದು, ಇನ್ನು ಒಂದು ವಾರದಲ್ಲಿ ಸ್ಫಟಿಕ ಲಿಂಗ ಪತ್ತೆ ಮಾಡಿ ಕೊಡುವುದಾಗಿ ಅವರು ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಎಸ್​ಪಿ ಅವರನ್ನು ಭೇಟಿಯಾಗಿ ಮಂದಗತಿಯಲ್ಲಿರು ತನಿಖೆಯನ್ನು ಚುರುಕುಗೊಳಿಸಿ ಶೀಘ್ರದಲ್ಲೇ ಲಿಂಗ ಪತ್ತೆ ಮಾಡುವಂತೆ ಆಗ್ರಹಿಸಿದೆ. ಅಲ್ಲದೆ ಲಿಂಗ ಪತ್ತೆ ಆಗದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದೆ.
ಲಿಂಗದಹಳ್ಳಿಯ ಹಿರೇಮಠದಲ್ಲಿದ್ದ 8ನೇ ಶತಮಾನದ ಸ್ಪಟಿಕಲಿಂಗ ಕಳ್ಳತನ

ರಾಜ್ಯಸಭೆ ‘ಅಡ್ಡ’ಪರಿಣಾಮ: ಶಾಸಕರ ತಿಥಿ ಪೋಸ್ಟರ್​ಗೆ ಪ್ರತಿಯಾಗಿ ಮಾಜಿ ಸಿಎಂ ಕೈಲಾಸ ಸಮಾರಾಧನೆ ಪೋಸ್ಟರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 7 =
Remember me
