ಬೆಂಗಳೂರು:ಸಂಚಾರ ನಿಯಮ ಪಾಲಿಸುವಂತೆ ಮಾಡುವ ಹಾಗೂ ರಸ್ತೆ ಅಪಘಾತ ತಗ್ಗಿಸುವ ಹಿನ್ನೆಲೆಯಲ್ಲಿ ಆಗಾಗ ನಿಯಮಗಳು ಪರಿಷ್ಕೃತವಾಗುತ್ತಿದ್ದು, ಇದೀಗ ಸೀಟ್​ಬೆಲ್ಟ್​ ಧರಿಸದ್ದಕ್ಕೆ ವಿಧಿಸುವ ದಂಡದಲ್ಲೂ ಪರಿಷ್ಕರಣೆ ಆಗಿದೆ. ಹೊಸ ಆದೇಶದ ಪ್ರಕಾರ ಈ ಹಿಂದಿನದ್ದಕ್ಕಿಂತ ದುಪ್ಟಟ್ಟು ದಂಡ ವಿಧಿಸಲಾಗುವುದು.
ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆ ಪ್ರಕಾರ ರಾಜ್ಯ ಪೊಲೀಸರು ಈ ಹೊಸ ಆದೇಶ ಹೊರಡಿಸಿದ್ದಾರೆ. ಮೈಸೂರು ನಗರ, ಹುಬ್ಬಳ್ಳಿ-ಧಾರವಾಡ ನಗರ, ಮಂಗಳೂರು ನಗರ, ಬೆಳಗಾವಿ ನಗರ ಮತ್ತು ಕಲಬುರಗಿ ನಗರ ಪೊಲೀಸ್ ಆಯುಕ್ತರಿಗೆ ಮತ್ತು ಬೆಂಗಳೂರ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ಹಾಗೂ ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್​ ಅಧೀಕ್ಷರಿಗೆ ಈ ಹೊಸ ಆದೇಶವನ್ನು ಹೊರಡಿಸಲಾಗಿದೆ.
ಹೊಸ ಆದೇಶದ ಪ್ರಕಾರ ಸೀಟ್​ಬೆಲ್ಟ್​ ಧರಿಸದೆ ಸಿಕ್ಕಿಹಾಕಿಕೊಂಡರೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಈ ಹಿಂದೆ ಇದು 500 ರೂ. ಇದ್ದು, ಈಗ ಪರಿಷ್ಕೃತ ಆದೇಶದಲ್ಲಿ ದುಪ್ಪಟ್ಟುಗೊಳಿಸಲಾಗಿದೆ. ಟಾಟಾ ಗ್ರೂಪ್ ಚೇರ್ಮನ್​ ಸೈರಸ್ ಮಿಸ್ತ್ರಿ ಇತ್ತೀಚೆಗೆ ಕಾರು ಅಪಘಾತದಲ್ಲಿ ಮೃತಪಟ್ಟಾಗ ಸೀಟ್​​ಬೆಲ್ಟ್ ವಿಚಾರ ಮುನ್ನೆಲೆಗೆ ಬಂದು ಸಾಕಷ್ಟು ಚರ್ಚೆ ಆಗಿತ್ತು.
‘ಕಾಂತಾರ’ ಭರ್ಜರಿ ಯಶಸ್ಸು; ಕುತೂಹಲ ಕೆರಳಿಸಿದೆ ಇವರಿಬ್ಬರ ಮೌನ!

ಬೈಕ್​ನಲ್ಲಿ ಹೋಗುತ್ತಿದ್ದಾಗಲೇ ಸಾವು!; ದ್ವಿಚಕ್ರವಾಹನ ಚಲಾಯಿಸುತ್ತಿರುವಾಗ ಬಡಿದ ಸಿಡಿಲು..

ಈತ ನಿಮ್ಮಲ್ಲಿಗೂ ಬಂದಿರಬಹುದು!; ಗಸ್ತು ಪೊಲೀಸರ ಕೈಗೆ ಸಿಕ್ಕಿಬಿದ್ದ ನಕಲಿ ಆದಾಯ ತೆರಿಗೆ ಅಧಿಕಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − seven =
Remember me
