ಬೆಂಗಳೂರು:ಹುಟ್ಟುಹಬ್ಬದ ವೇಳೆ ತಲ್ವಾರ್​ನಲ್ಲಿ ಕೇಕ್ ಕತ್ತರಿಸಿದ ನಟ ದುನಿಯಾ ವಿಜಯ್​ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸಾರ್ವಜನಿಕರ ಸಂಚಾರಕ್ಕೆ ಅಡ್ಡಪಡಿಸಿದ ಆರೋಪದಡಿ ಗಿರಿನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.
ಹುಟ್ಟು ಹಬ್ಬದ ದಿನ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಮಾಡಿದ್ದಾರೆ ಎಂದು ಆರೋಪಿಸಿ ಗಸ್ತು ಪೇದೆ ಮಧುಸೂದನ್ ದೂರು ನೀಡಿದ್ದಾರೆ. ಜ.20ರ ರಾತ್ರಿ 12 ಗಂಟೆಯಲ್ಲಿ ಗಸ್ತು ಮಾಡುತ್ತಿದ್ದಾಗ ಬನಶಂಕರಿ 3ನೇ ಹಂತ 7ನೇ ಬ್ಲಾಕ್​ನಲ್ಲಿ ದುನಿಯಾ ವಿಜಯ್, ಮನೆ ಮುಂದೆ ರಸ್ತೆಯಲ್ಲಿ ಪೆಂಡಾಲ್ ಹಾಕಿ ಜನ ಸೇರಿಸಿದ್ದಾರೆ ಎಂಬ ಮಾಹಿತಿ ಬಂತು. ವಿಜಯ್ ತಮ್ಮ ಅಭಿಮಾನಿಗಳ ಜತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ತಲ್ವಾರ್ ಕೇಕ್ ಕಟ್ ಮಾಡುತ್ತಿದ್ದರು.
ಅವಧಿಗೆ ಮೀರಿ ಲೌಡ್​ಸ್ಪೀಕರ್ ಉಪಯೋಗಿಸುತ್ತಿದ್ದರಲ್ಲದೆ ಸಾರ್ವಜನಿಕ ರಸ್ತೆಯಲ್ಲಿ ಪೆಂಡಾಲ್ ಹಾಕಿ ವಾಹನ ಸಂಚಾರ ಮತ್ತು ಜನರ ಓಡಾಟಕ್ಕೆ ಅಡ್ಡಿವುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಗಸ್ತು ಸಿಬ್ಬಂದಿ ಉಲ್ಲೇಖಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fifteen =
Remember me
