ಬೆಂಗಳೂರು:ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದ ಮೇಲೆ ಸಿಬಿಐನ ಬೆಂಗಳೂರು ಘಟಕದ ಡಿವೈಎಸ್‌ಪಿ ಬ್ರಜೇಶ್ ಕುಮಾರ್ ವಿರುದ್ಧ ಸಿಬಿಐ ಪ್ರಧಾನ ಕಚೇರಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬ್ರಜೇಶ್ ಕುಮಾರ್ ಅವರಿಗೆ 2018ರ ಸ್ಟೆಪ್ಟೆಂಬರ್‌ನಲ್ಲಿ 68,85,029 ರೂಪಾಯಿಯಿದ್ದ ಆಸ್ತಿ ಮೌಲ್ಯವು 2021 ಮೇ ತಿಂಗಳಲ್ಲಿ 2,78,61,451 ರೂಪಾಯಿಗೆ ಏರಿಕೆಯಾಗಿತ್ತು. 2018 ಸೆ.1 ರಿಂದ 2021ರ ಮೇ 31ರವರೆಗಿನ ಅವಧಿಯಲ್ಲಿ ಬೃಜೇಶ್ ಕುಮಾರ್ ಪಡೆದಿರುವ ವೇತನ, ಆದಾಯ, ಮಾಡಿರುವ ಖರ್ಚುಗಳಿಗೆ ಹೋಲಿಕೆ ಮಾಡಿದರೆ ಆದಾಯಕ್ಕಿಂತ 1.94 ಕೋಟಿ ರೂ. ಮೌಲ್ಯದ (ಶೇ. 302) ಅಧಿಕ ಆಸ್ತಿ ಹೊಂದಿರುವುದು ಗೊತ್ತಾಗಿದೆ.
ತಂದೆ ಶಯೋ ಯೋಗಿ ಸಿಂಗ್ ಹೆಸರಿನಲ್ಲಿ 2020ರಲ್ಲಿ ಯಲಹಂಕ ಬಳಿಯ ಆವಲಹಳ್ಳಿಯ ಪ್ರೆಸ್ಟೀಜ್ ರಾಯಲ್ ಗಾರ್ಡನ್ಸ್ ಅಪಾರ್ಟ್‌ಮೆಂಟ್‌ನಲ್ಲಿ 96.38 ಲಕ್ಷ ರೂಪಾಯಿ ಮೌಲ್ಯದ 1 ಫ್ಲ್ಯಾಟ್ ಖರೀದಿಸಿದ್ದಾರೆ. ಇದೇ ಅಪಾರ್ಟ್‌ಮೆಂಟ್‌ನಲ್ಲಿ 2020 ಡಿ.28ರಂದು ತಾಯಿ ಲಲಿತಾ ಸಿಂಗ್ ಹೆಸರಿನಲ್ಲಿ 95.29 ಲಕ್ಷ ರೂಪಾಯಿ ಮೌಲ್ಯದ ಫ್ಲ್ಯಾಟ್ ಖರೀದಿಸಿದ್ದರು. ಕಮ್ಮನಹಳ್ಳಿ ರಸ್ತೆಯ ಶುಭೋದಯ ಲಾರೆಲ್ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ಸ್ವೀಟಿ ಸಿಂಗ್ ಹೆಸರಿನಲ್ಲಿ 1 ಫ್ಲ್ಯಾಟ್ ಖರೀದಿಸಿದ್ದರು. ಆದರೆ, ಇಷ್ಟೊಂದು ದೊಡ್ಡ ಮೊತ್ತದ ಆಸ್ತಿ ಖರೀದಿಸಿದಾಗ ಬ್ಯಾಂಕ್‌ನಿಂದ ಯಾವುದೇ ಸಾಲ ಪಡೆದಿರಲಿಲ್ಲ ಎಂಬುದು ತಿಳಿದು ಬಂದಿದೆ.
ಡಿವೈಎಸ್‌ಬಿಯಾಗಿ ಬಡ್ತಿ:ಬ್ರಜೇಶ್ ಕುಮಾರ್ ಬಿಹಾರದ ಪಾಟ್ನಾ ನಿವಾಸಿಯಾದ್ದು, 2008ರಲ್ಲಿ ಸಿಬಿಐ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದರು. 2013ರಲ್ಲಿ ಇನ್ಸ್‌ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದು 2013ರಲ್ಲಿ ಡಿವೈಎಸ್‌ಪಿ ಹುದ್ದೆಗೆ ಬಡ್ತಿ ಹೊಂದಿದ್ದರು. ನಂತರ ಇವರು ಸಿಬಿಐ ಬೆಂಗಳೂರು ಘಟಕದ ಬ್ಯಾಂಕ್ ಭದ್ರತೆ ಹಾಗೂ ವಂಚನೆ ತಡೆ ವಿಭಾಗಕ್ಕೆ ನಿಯೋಜನೆಗೊಂಡಿದ್ದರು. 2020ರ ಜೂನ್‌ನಲ್ಲಿ ಸಿಬಿಐ ಬೆಂಗಳೂರು ವಿಭಾಗದ ಭ್ರಷ್ಟಾಚಾರ ನಿಯಂತ್ರಣ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಅವರು ದೊಡ್ಡವರು, ಕ್ಷಮಿಸಿಬಿಟ್ಟರು..’ ರಾಹುಲ್​ ಗಾಂಧಿ ವಿಚಾರದಲ್ಲಿ ತಾನು ಮಾಡಿದ ದೊಡ್ಡ ತಪ್ಪನ್ನು ಬಿಚ್ಚಿಟ್ಟ ರಮ್ಯಾ!

ಹೆರಿಗೆಯಾದ ಅಕ್ಕನನ್ನು ನೋಡಲು ಹೋದ ತಂಗಿಯನ್ನೇ ರೇಪ್ ಮಾಡಿದ ಭಾವ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 14 =
Remember me
