ಬೆಂಗಳೂರು:‘ನನ್ನ ಮಗನಿಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿ ಇಲ್ಲ, ನನ್ನೊಂದಿಗೇ ಸಂಸಾರ ಮಾಡು ಬಾ’ ಎಂದು ಸೊಸೆಗೆ ಪೀಡಿಸುತ್ತಿದ್ದ ಮಾವನ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇನ್ನು ತನಗೆ ಮಕ್ಕಳೇ ಆಗಲ್ಲ ಎಂದು ಗೊತ್ತಿದ್ದರೂ ವಿಷಯ ಮುಚ್ಚಿಟ್ಟು ಮದುವೆಯಾಗಿದ್ದಲ್ಲದೆ, ಗರ್ಭಕೋಶಕ್ಕೆ ಹಾನಿಯಾಗುವ ಮಾತ್ರೆ ನುಂಗಿಸಿ ವಿಕೃತಿ ಮೆರೆದ ಗಂಡನ ವಿರುದ್ಧವೂ ಪತ್ನಿ ಠಾಣೆ ಮೆಟ್ಟಿಲೇರಿದ್ದು, ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ವರದಕ್ಷಿಣೆ ಕಿರುಕುಳ, ಮಾನಸಿಕ ಕಿರುಕುಳ ಆರೋಪದಡಿ ಅತ್ತೆ-ಮಾವ ಸೇರಿ ಗಂಡನ ಕುಟುಂಬದ ವಿರುದ್ಧ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿರಿಆಸ್ಪತ್ರೆಗಳಿಗೆ ಅಲೆದರೂ ಚಿಕಿತ್ಸೆ ಸಿಗದೆ ಮಗು ಸಾವು; ಸಿಎಂ ಮನೆ ಬಳಿ ತಂದೆ ಹೋರಾಟ
ಆಗಿದ್ದೇನು?:ಸಂತ್ರಸ್ತ ಮಹಿಳೆ ಕೊಟ್ಟಿರುವ ದೂರಿನಂತೆ ಈ ಮಾಹಿತಿ. ‘2014ರ ಮಾರ್ಚ್​ 9ರಂದು ಬೆಂಗಳೂರಿನ ಸುಂಕದಕಟ್ಟೆಯ ಎಸ್​ಪಿಕೆ ಕಲ್ಯಾಣ ಮಂಟಪದಲ್ಲಿ ಬಿಇಎಲ್​ ಲೇಔಟ್​ ನಿವಾಸಿ ರಾಮಯ್ಯ ಮತ್ತು ಗಂಗಮ್ಮ ಅವರ ದ್ವಿತೀಯ ಪುತ್ರ ಯೋಗೇಶ್ ಜತೆ ನನ್ನ ಮದದುವೆ ನೆರವೇರಿತ್ತು. ಮದುವೆಯಾದ ಮೊದಲರಾತ್ರಿ ಗಂಡ ನನ್ನನ್ನು ಮುಟ್ಟಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಲಿಂಗ ದೌರ್ಬಲ್ಯ ಇರುವುದು ಗೊತ್ತಾಯಿತು. ಚಿಕಿತ್ಸೆ ಪಡೆದರೆ ಸರಿ ಆಗಬಹುದೆಂದು ರಾಜಾಜಿನಗರದ ಆಸ್ಪತ್ರೆಯೊಂದಕ್ಕೆ ಗಂಡನನ್ನು ಕರೆದೊಯ್ದು ತಪಾಸಣೆ ಮಾಡಿಸಿದಾಗ ಶಸ್ತ್ರಚಿಕಿತ್ಸೆ ಮಾಡುವಂತೆ ವೈದ್ಯರು ತಿಳಿಸಿದರು. ಅತ್ತೆ-ಮಾವನಿಗೆ ಹೇಳಿ ಗಂಡನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ ಬಳಿಕವೂ ಮಕ್ಕಳು ಆಗಿಲ್ಲ’.
‘ಇನ್ನು ಶಸ್ತ್ರಚಿಕಿತ್ಸೆ ಬಳಿಕವೂ ಮಕ್ಕಳು ಆಗದ ಅವಮಾನಕ್ಕೆ ಸಿಟ್ಟಾದ ಪತಿ, ನನಗೆ ಚಿತ್ರಹಿಂಸೆ ಕೊಡಲು ಆರಂಭಿಸಿದ್ದ. ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಐವಿಎಫ್ ಟ್ರೀಟ್​ಮೆಂಟ್​ ನೆಪದಲ್ಲಿ ದುರುದ್ದೇಶದಿಂದ ಗರ್ಭಕೋಶಕ್ಕೆ ಹಾನಿಯಾಗುವಂತೆ ಮಾಡಿದ್ದ. ಗಂಡನ ಅಪ್ಪನಿಂದಲೂ ನನಗೆ ಮಾನಸಿಕ ಹಿಂಸೆಯಾಗಿದೆ. ”ನನ್ನ ಮಗನಿಗೆ ಮಗು ಆಗಲ್ಲ. ನನ್ನ ಜೊತೆಯೇ ಸಂಸಾರ ಮಾಡು ಬಾ” ಎಂದು ಮಾವ ಪೀಡಿಸುತ್ತಿದ್ದ’ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿರಿಲೇಡೀಸ್ ಜತೆ ಸೆಕ್ಸ್ ಜಾಬ್​! ಕೆಲಸಕ್ಕೆ ಸೇರಿದ ಟೆಕ್ಕಿ ಕಥೆ ಏನಾಯ್ತು?
‘ಮದುವೆ ಸಂದರ್ಭದಲ್ಲಿ ನನ್ನ ಪಾಲಕರು 6 ಲಕ್ಷ ರೂ., 104 ಗ್ರಾಂ ಚಿನ್ನ ಕೊಟ್ಟು ಮದುವೆ ಮಾಡಿದ್ದರು. ಮತ್ತಷ್ಟು ವರದಕ್ಷಿಣೆ ಬೇಕೆಂದು ಎಂದು ಗಂಡನ ಮನೆಯವರು ಕಿರುಕುಳ ಕೊಡುತ್ತಿದ್ದರು. ಮನೆ ಕೆಲಸ ಮಾಡುತ್ತಲೇ ಇರಬೇಕು ಎಂದೆಲ್ಲ ಕಂಡಿಷನ್​ ಹಾಕಿದ್ದರು. ಅಲ್ಲದೇ ಮನೆಯಲ್ಲಿ ಸರಿಯಾಗಿ ಊಟವೂ ಕೊಡುತ್ತಿರಲಿಲ್ಲ. ಕುಂತರೂ ಕಷ್ಟ- ನಿಂತರೂ ಕಷ್ಟ ಎಂಬಂತೆ ವರ್ತಿಸುತ್ತಿದ್ದರು ಎಂದು ಸಂತ್ರಸ್ತ ಮಹಿಳೆಯು ಗಂಡ ಯೋಗೇಶ್, ಅತ್ತೆ-ಮಾವ, ಭಾವ-ವಾರಗಿತ್ತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
video/ ‘ರಮ್’ ಕುಡಿದ್ರೆ ಕರೊನಾ ಬರಲ್ಲ; ಕೌನ್ಸಿಲರ್ ರವಿಚಂದ್ರ ಗಟ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − nine =
Remember me
