ಬೆಂಗಳೂರು:ನಗರಾಭಿವೃದ್ಧಿ ಇಲಾಖೆಯಲ್ಲಿ ಗುತ್ತಿಗೆ ಬಿಲ್ ಬಿಡುಗಡೆ ಮಾಡಿಸಿಕೊಡುವ ಆಮಿಷವೊಡ್ಡಿ ಸಾಲದ ರೂಪದಲ್ಲಿ ಪತ್ರಕರ್ತರ ಬಳಿ 40 ಲಕ್ಷ ರೂ. ಪಡೆದು ವಂಚಿಸಿದ ಆರೋಪದಡಿ ನಾಲ್ವರ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕರ್ನಾಟಕ ಹ್ಯೂಮನ್ ರೈಟ್ಸ್ ಡಿಫೆಂಡರ್ಸ್‌ ಪೇಪರ್‌ನ ಪತ್ರಕರ್ತ ಎಂ.ಆರ್. ರಾಜ್‌ಕುಮಾರ್ ದೂರು ನೀಡಿದ್ದಾರೆ. ಇದರ ಮೇರೆಗೆ ಆರೋಪಿಗಳಾದ ಅಂಬಿಕಾ ಅಲಿಯಾಸ್ ನಾಗಲಾಂಬಿಕೆ, ಎಂಎಸ್‌ಡಿ ಕಾಮತ್, ರಮೇಶ್‌ಕುಮಾರ್ ಮತ್ತು ಜಗದೀಶ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಎಂ.ಆರ್.ರಾಜಕುಮಾರ್ ಅವರ ಸ್ನೇಹಿತ ಗುತ್ತಿಗೆದಾರ ಗೋಪಾಲಕೃಷ್ಣಗೆ ಸರ್ಕಾರದಿಂದ 208.56 ಕೋಟಿ ರೂ. ಬಿಲ್ ಬಿಡುಗಡೆ ಆಗಬೇಕಿತ್ತು. 2021ರ ಜು.23ರಂದು ಸದಾಶಿವನಗರದ ಸ್ಯಾಂಕಿ ರಸ್ತೆ ಕಾಫಿ ಡೇನಲ್ಲಿ ರಾಜಕುಮಾರ್‌ಗೆ ಪರಿಚಯ ಆದ ರಮೇಶ್ ಕುಮಾರ್, ಎಂಎಸ್‌ಡಿ ಕಾಮತ್ ಗುತ್ತಿಗೆ ಹಣ ಬಿಡುಗಡೆ ಮಾಡಿಸಲು 30 ಕೋಟಿ ರೂ. ಲಂಚ ಕೊಟ್ಟರೆ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು.
ಕೆಲ ದಿನ ಬಿಟ್ಟು ಅಂಬಿಕಾ ಎಂಬಾಕೆಯನ್ನು ಆರೋಪಿಗಳು ಕರೆತಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರಿ ಅರುಣಾದೇವಿ ಅವರ ಪಾಲುದಾರರು ಎಂದು ರಾಜ್‌ಕುಮಾರ್‌ಗೆ ನಂಬಿಸಿದ್ದರು. ಇವರ ಮೂಲಕ ಬಾಕಿ ಬಿಲ್ ಬಿಡುಗಡೆ ಮಾಡಿಸುವುದಾಗಿ ಭರವಸೆ ಕೊಟ್ಟಿದ್ದರು. ಇದಾದ ಮೇಲೆ ಅಂಬಿಕಾ ಮತ್ತು ಕಾಮತ್ ಬಂದು ರಾಜಕುಮಾರ್ ಬಳಿ 40 ಲಕ್ಷ ರೂಪಾಯಿಯನ್ನು ಒಂದು ತಿಂಗಳ ಮಟ್ಟಿಗೆ ಸಾಲ ಪಡೆದು ವಾಪಸ್ ಕೊಡದೆ ವಂಚನೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತುಂಡಾದ ಕಾಲಿನೊಂದಿಗೆ ಆಸ್ಪತ್ರೆಗೆ ಬಂದ ಗಾಯಾಳು; ಯಶಸ್ವಿಯಾಗಿ ಜೋಡಿಸಿದ ವೈದ್ಯರು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + eight =
Remember me
