ಬೆಂಗಳೂರು:ಪ್ರಥಮ ವರ್ತಮಾನ ವರದಿ (ಎಫ್​​ಐಆರ್​) ಎಂದರೆ ವಿಶ್ವಕೋಶ (ಎನ್​ಸೈಕ್ಲೋಪಿಡಿಯಾ) ಅಲ್ಲ. ಅಪರಾಧಕ್ಕೆ ಸಂಬಂಧಿಸಿದ ಪ್ರತಿ ವಿಚಾರವನ್ನೂ ಅದರಲ್ಲಿ ವಿವರಿಸಬೇಕೆಂಬ ನಿಯಮವಿಲ್ಲ ಎಂದಿರುವ ಹೈಕೋರ್ಟ್​, ಎಫ್​ಐಆರ್​ನಲ್ಲಿ ತನ್ನ ಹೆಸರಿಲ್ಲದ ಕಾರಣ ಜಾಮೀನು ನೀಡಬೇಕೆಂದು ಕೋರಿ ಕೊಲೆ ಆರೋಪಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಹೆಣ್ಣೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಅರ್ಜುನ್​ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್​ ಹರೀಶ್​ ಕುಮಾರ್​ ಅವರಿದ್ದ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ಆರೋಪಿ ಪರ ವಕೀಲರು ವಾದ ಮಂಡಿಸಿ, ಮೃತನ ಸಹೋದರಿಯ ಹೇಳಿಕೆ ಆಧರಿಸಿ ಎಫ್​ಐಆರ್​ ದಾಖಲಿಸಲಾಗಿದೆ. ಎಫ್​ಐಆರ್​ನಲ್ಲಿ ಅರ್ಜಿದಾರರ ಹೆಸರು ಉಲ್ಲೇಖಿಸಲಾಗಿಲ್ಲ. ಪ್ರತ್ಯಕ್ಷದರ್ಶಿಗಳು ಎನ್ನಲಾಗಿರುವ ವ್ಯಕ್ತಿಗಳು ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅರ್ಜಿದಾರರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಾಧಾರವಿಲ್ಲ. ಆದ್ದರಿಂದ ಜಾಮೀನು ನೀಡಬೇಕೆಂದು ಕೋರಿದ್ದರು.
ಈ ವಾದವನ್ನು ತಳ್ಳಿಹಾಕಿರುವ ಹೈಕೋರ್ಟ್​, ಎಫ್​ಐಆರ್​ನಲ್ಲಿ ಅಪರಾಧದ ಪ್ರತಿಯೊಂದು ವಿವರವೂ ಇರಬೇಕು ಎಂಬ ನಿಯಮವಿಲ್ಲ. ಅದು ಎನ್​ಸೈಕ್ಲೋಪಿಡಿಯಾ ಅಲ್ಲ. ಕೃತ್ಯದ ಮಾಹಿತಿ ಇದ್ದರೆ ಸಾಕು. ಪ್ರತ್ಯಕ್ಷ್ಯದರ್ಶಿಗಳು ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದಾದರೆ, ಅವರನ್ನು ನ್ಯಾಯಾಲಯದ ವಿಚಾರಣೆ ವೇಳೆ ಪಾಟೀ ಸವಾಲಿಗೆ ಒಳಪಡಿಸಲು ಅವಕಾಶವಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.
ನಾನು ಮಾಜಿ ಡಿಸಿಎಂ ಅಣ್ಣನ ಮಗಳು… ಮದುವೆ ಆಗದಿದ್ರೆ ರೇಪ್​ ಕೇಸ್​ ಹಾಕ್ತೀನಿ: ಬೆಚ್ಚಿಬೀಳಿಸುತ್ತೆ ಆಕೆಯ ಹಿಸ್ಟರಿ

ಆಟವಾಡುತ್ತಲೇ ಲಿಫ್ಟ್​ ಗುಂಡಿಗೆ ಬಿದ್ದು ಪ್ರಾಣಬಿಟ್ಟ 2 ವರ್ಷದ ಮಗು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 14 =
Remember me
