ಬೆಂಗಳೂರು:ಆನ್​ಲೈನ್​ ಫುಡ್​ ಆರ್ಡರ್​ ಮಾಡಿ, ನಂತರ ಡೆಲಿವರಿ ಬಾಯ್​ ಹಲ್ಲೆ ಮಾಡಿದ ಎಂದು ಆರೋಪಿಸಿದ್ದ ಇನ್​ಸ್ಟಾಗ್ರಾಂ ಇನ್​ಫ್ಲೂಯೆನ್ಸರ್​ ಹಿತೇಶಾ ಚಂದ್ರಾಣಿ ಮೇಲೆ ಎಫ್​ಐಆರ್​ ದಾಖಲಾಗಿದೆ. ಚಪ್ಪಲಿ ಎಸೆದು ಹಲ್ಲೆ ಮಾಡಿದ್ದ ಹಿನ್ನೆಲೆಯಲ್ಲಿ ಎಫ್​ಐಆರ್​ ಹಾಕಲಾಗಿದೆ.
ಹಿತೇಶಾ ಚಂದ್ರಾಣಿ ಹೆಸರಿನ ಯುವತಿ ಇತ್ತೀಚೆಗೆ ಜೊಮ್ಯಾಟೋದಲ್ಲಿ ಊಟ ಆರ್ಡರ್​ ಮಾಡಿದ್ದಳು. 3.30ಕ್ಕೆ ಬರಬೇಕಿದ್ದ ಊಟವನ್ನು ಡೆಲಿವರಿ ಬಾಯ್​ ಕಾಮರಾಜ್​ ಒಂದು ಗಂಟೆ ಲೇಟಾಗಿ ತಂದುಕೊಟ್ಟಿದ್ದ. ಆ ಹಿನ್ನೆಲೆಯಲ್ಲಿ ಅವರಿಬ್ಬರ ನಡುವೆ ಜಗಳವಾಗಿದೆ. ಕಾಮರಾಜ್​ ನನ್ನ ಮುಖಕ್ಕೆ ಪಂಚ್​ ಮಾಡಿದ ಎಂದು ಯುವತಿ ಕಣ್ಣೀರಿಡುತ್ತ ವಿಡಿಯೋ ಮಾಡಿ ಹರಿಬಿಟ್ಟಿದ್ದಳು. ಎಲೆಕ್ಟ್ರಾನಿಕ್​ ಸಿಟಿ ಪೊಲೀಸ್​ ಠಾಣೆಯಲ್ಲಿ ಕಾಮರಾಜ್​ ವಿರುದ್ಧ ದೂರು ನೀಡಿದ್ದಳು. ಆದರೆ ಕಾಮರಾಜ್​ ಈ ಆರೋಪವನ್ನು ಸುಳ್ಳು ಎಂದು ಹೇಳಿದ್ದು, ಆಕೆಯೇ ತನ್ನ ಮೇಲೆ ಹಲ್ಲೆ ಮಾಡಿದ್ದಾಗಿ ಹೇಳಿದ್ದ. ಚಪ್ಪಲಿ ಎಸೆದು ಹಲ್ಲೆ ಮಾಡಿದ್ದಳು ಎಂದು ತಿಳಿಸಿದ್ದ.
ಅದೇ ವಿಚಾರವಾಗಿ ಈಗ ಕಾಮರಾಜ್​ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ. ಚಪ್ಪಲಿಯಿಂದ ಹಲ್ಲೆ ಮಾಡಿರುವ ಬಗ್ಗೆ ಮತ್ತು ಸುಳ್ಳು ಆರೋಪ ಮಾಡಿರುವ ಬಗ್ಗೆ ದೂರು ನೀಡಿದ್ದಾನೆ. ಈ ಸಂಬಂಧ ಎಲೆಕ್ಟ್ರಾನಿಕ್​ ಸಿಟಿ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ಸದ್ಯ ಪ್ರಕರಣ ತನಿಖಾ ಹಂತದಲ್ಲಿದೆ.
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಬೆಂಗಳೂರಿನ ಜೊಮ್ಯಾಟೋ ಡೆಲಿವರಿ ಬಾಯ್​ ಪರ ನಿಂತ ಬಾಲಿವುಡ್​ ತಾರೆ!

ಊಟ ಡೆಲಿವರಿ ಲೇಟಾಗಿದ್ದಕ್ಕೆ ಮುಖಕ್ಕೆ ಪಂಚ್​ ಹೊಡೆಸಿಕೊಂಡ ಯುವತಿ! ಇನ್​​ಫ್ಲೂಯೆನ್ಸರ್​ ಕಥೆ ಕೇಳೋರ್ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
