ಶಿವಮೊಗ್ಗ:ಮನೆಯಲ್ಲಿ ವಿದ್ಯುತ್ ಶಾರ್ಟ್​ಸರ್ಕಿಟ್​ನಿಂದ ಉಂಟಾದ ಅಗ್ನಿಅವಘಡದಲ್ಲಿ ಕರುಳಕುಡಿಯನ್ನು ರಕ್ಷಿಸಿ ಉದ್ಯಮಿಯೊಬ್ಬರು ಜೀವತೆತ್ತ ಹೃದಯವಿದ್ರಾವಕ ಘಟನೆ ಭಾನುವಾರ ಬೆಳಗಿನಜಾವ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ನಡೆದಿದೆ.
ಉದ್ಯಮಿ ಶರತ್ ಭೂಪಾಳಂ(39) ಮೃತ ದುರ್ದೈವಿ. ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಎದುರು ಇರುವ ಬಂಗಲೆಯಲ್ಲಿ ಎಸಿ(ಹವಾನಿಯಂತ್ರಿತ)ಗೆ ಅಳವಡಿಸಿದ್ದ ಸ್ಟಪ್ಲೇಜರ್ ಸ್ಫೋಟಗೊಂಡು ಭಾನುವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಮಾತ್ರದಲ್ಲಿ ದಟ್ಟಹೊಗೆ ಮನೆಯಲ್ಲಿ ಆವರಿಸಿದೆ. ಶರತ್ ಅವರು ತಮ್ಮ ಕೋಣೆಯಿಂದ ಮಗ ಸಂಚಿತ್‌ನನ್ನು ರಕ್ಷಣೆ ಮಾಡಿದ್ದಾರೆ. ಈ ಸಂದರ್ಭ ದೇಹ ಸೇರಿದ್ದ ಹೊಗೆಯಿಂದ ತೀವ್ರ ಉಸಿರಾಟದ ತೊಂದರೆಯಾಗಿದೆ. ತಕ್ಷಣ ಅವರನ್ನು ಪಕ್ಕದಲ್ಲಿಯೇ ಇರುವ ನಂಜಪ್ಪ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತ್ತಾದರೂ ಫಲಿಸಲಿಲ್ಲ.
ಅಗ್ನಿಅವಘಡದಲ್ಲಿ ಮನೆಯ ಕೊಠಡಿಯೊಂದು ಸಂಪೂರ್ಣ ಭಸ್ಮವಾಗಿದೆ. ಮನೆಯಲ್ಲಿದ್ದ ಶಶಿಧರ್ ಸೇರಿದಂತೆ ನಾಲ್ವರು ಪ್ರಾಣಾಪಾದಿಂದ ಪಾರಾಗಿದ್ದಾರೆ. ತನ್ನ ಮಕ್ಕಳನ್ನು ರಕ್ಷಣೆ ಮಾಡಿದ ಶರತ್ ಬದುಕುಳಿದಿಲ್ಲ.
ಸ್ವಾತಂತ್ರ್ಯ ಸೇನಾನಿ ಭೂಪಾಳಂ ಚಂದ್ರಶೇಖರಯ್ಯ ಕುಟುಂಬಕ್ಕೆ ಸೇರಿದ್ದ ಶರತ್, ಮಾಚೇನಹಳ್ಳಿಯಲ್ಲಿ ಕೈಗಾರಿಕೆ ನಡೆಸುತ್ತಿದ್ದರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯಲ್ಲೊಂದು ನಿಜ ಕಾಂತಾರ? ಕೋಲ ನಡೆಯುವಾಗಲೇ ಸಾವು! ಕೋರ್ಟ್ ಮೆಟ್ಟಿಲೇರಿದವನ ತೀರ್ಮಾನ ದೈವ ಮಾಡಿತೇ!

ಸ್ಯಾಂಟ್ರೋ ರವಿ ‘ಪಿಂಪ್’ ಮಾತ್ರವಲ್ಲ… ಬಗೆದಷ್ಟೂ ಬಯಲಾಗ್ತಿದೆ ಈತನ ಕರಾಳ ಮುಖ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + twenty =
Remember me
