ಬಾಗಲಕೋಟೆ:ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ನಸುಕಿನ ವೇಳೆ ಭಾರಿ ಅಗ್ನಿದುರಂತ ಸಂಭವಿಸಿದ್ದು, ಬೈಕ್ ಗ್ಯಾರೇಜ್​, ಫರ್ನಿಚರ್ ಅಂಗಡಿ, ಹೋಟೆಲ್​ಗಳು ಸುಟ್ಟುಭಸ್ಮವಾಗಿವೆ. ಲಕ್ಷಾಂತರ ರೂಪಾಯಿ ನಾಶ ನಷ್ಟ ಸಂಭವಿಸಿದ್ದು, ಹಾನಿ ಪ್ರಮಾಣ ಇನ್ನಷ್ಟೇ ಅಂದಾಜಿಸಬೇಕಾಗಿದೆ.
ನಸುಕಿನ ಮೂರು ಗಂಟೆ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ದುರಂತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ದುರಂತದಲ್ಲಿ ಅಲ್ಲಾಭಕ್ಷ ಹೆಬ್ಬಳ್ಳಿ ಎಂಬುವರ ಬೈಕ್ ಗ್ಯಾರೇಜ್, ಹೂವಪ್ಪ ಕಲಾಲ ಅವರಿಗೆ ಸೇರಿದ ಹೋಟೆಲ್, ಭೀಮಸಿ ಬಡಿಗೇರ ಎಂಬುವರಿಗೆ ಸೇರಿದ ಫರ್ನೀಚರ್ ಅಂಗಡಿ ಸುಟ್ಟುಹೋಗಿವೆ.
ಇದನ್ನೂ ಓದಿ:ಮತತಂತ್ರ ಬಿಜೆಪಿ ನವಸೂತ್ರ: ಕೋರ್ ಕಮಿಟಿ ಸಭೆಯಲ್ಲಿ ಕಮಲ ನಾಯಕರ ನಿರ್ಣಯ
ಬಾದಾಮಿ ಅಗ್ನಿ ಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಕೆಲವು ನಿಮಿಷಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದ ಅಗ್ನಿಶಾಮಕ ಸೇವೆ ಸಿಬ್ಬಂದಿ ಶೀಘ್ರವೇ ಅದನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಟ್ಟಿಂಗ್ ಜೂಜು- 2 ಲಕ್ಷ ರೂಪಾಯಿ, 2 ಮೊಬೈಲ್ ವಶಕ್ಕೆ; ಇಬ್ಬರ ಬಂಧನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 2 =
Remember me
