ಬೆಂಗಳೂರು:ಯಲಹಂಕ ಅನಿಲ್ ಆಧಾರಿತ ವಿದ್ಯುತ್ ಸ್ಥಾವರ ( ವೈಸಿಸಿಪಿಪಿ)ದಲ್ಲಿ ಶುಕ್ರವಾರ ನಸುಕಿನ ಜಾವ ಅಗ್ನಿ ಅವಘಡ ಸಂಭವಿಸಿ, 15 ಇಂಜಿನಿಯರ್​ಗಳು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಗಾಯಾಳುಗಳನ್ನು ತಕ್ಷಣವೇ ಸಮೀಪದ ಕೊಲಂಬಿಯಾ ಏಷಿಯಾ, ಮಲ್ಲಿಗೆ ಇನ್ನಿತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಪಿಸಿಎಲ್​ನ 11, ಬಿಎಚ್​ಇಎಲ್ ಹಾಗೂ ಜಿಇ ಕಂಪನಿಯ ತಲಾ ಇಬ್ಬರು ಇಂಜಿನಿಯರ್​ಗಳು ಗಾಯಾಳುಗಳ ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ:ಮುನಿರತ್ನ ವಿರುದ್ಧ ಕಣಕ್ಕಿಳಿಯಲು ಕೈ ನಾಯಕರ ಹಿಂದೇಟು: ಡಿ.ಕೆ. ರವಿ ಪತ್ನಿಗೆ ಒಲಿಯುತ್ತಾ ಅದೃಷ್ಟ?
370 ಮೆಗಾ ವಾಟ್ ಉತ್ಪಾದನಾ ಸಾಮರ್ಥ್ಯದ 1 ಘಟಕವನ್ನು ಕಾರ್ಯಾಚರಣೆಗೆ ಅಣಿಗೊಳಿಸುವ ವೇಳೆ, ಟರ್ಬೈನ್ ಬಳಿ ನಸುಕು 3.30ರ ಸುಮಾರಿಗೆ ಅಗ್ನಿ ಅನಾಹುತ ಘಟಿಸಿದೆ.
ಗಾಯಾಳು ಎಂಜಿನಿಯರ್​ಗಳುಮರಿಸ್ವಾಮಿ, ಅಶ್ವತ್ಥ ನಾರಾಯಣ, ಕೆ.ಪಿ.ರವಿ, ಡಿ.ಪಿ.ಶ್ರೀನಿವಾಸ ಮೂರ್ತಿ, ಬಿ.ಶ್ರೀನಿವಾಸ, ಅಕ್ವಲ್ ರಘುರಾಮ್, ಅಶೋಕ್, ಕೃಷ್ಣಭಟ್, ಬಾಲರಾಜ್, ಎಚ್.ಎನ್.ಶ್ರೀನಿವಾಸ, ಮಂಜಪ್ಪ, ನರಸಿಂಹ ಮೂರ್ತಿ, ಹರೀಶ್, ನಿತೀಶ್ ಮತ್ತು ಮನೋಜ್.
ಮಹಿಳೆಯೆಂದು ಸಾಬೀತುಮಾಡುವವರೆಗೂ ವಿಮಾನ ಏರಲು ಬಿಡಲಿಲ್ಲ- ನೋವು ತೋಡಿಕೊಂಡ ವಿಶ್ವ ಚಾಂಪಿಯನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
