ಬೆಂಗಳೂರು:ಮೆಜೆಸ್ಟಿಕ್​ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನ ಇಂಜಿನ್​ನಲ್ಲಿ ದಿಢೀರ್ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್​ ಭಾರೀ ದುರಂತವೊಂದು ತಪ್ಪಿದೆ
ರೇಲ್ವೇ ಇಂಜಿನ್​ನಿಂದ ಹೊರಬಂದ ದಟ್ಟ ಹೊಗೆಯನ್ನು ನೋಡಿ ಪ್ರಯಾಣಿಕರು ಆತಂಕಗೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಉದ್ಯಾನ್​ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ರೈಲ್ವೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ.
ಈಗಾಗಲೇ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯಿಂದ ಮೆಜೆಸ್ಟಿಕ್ ಸುತ್ತಮುತ್ತ ದಟ್ಟ ಹೊಗೆ ಆವರಿಸಿಕೊಂಡಿತು. ಇದನ್ನು ನೋಡಿ ಜನರು ಒಂದು ಕ್ಷಣ ಗಾಬರಿಯಾದರು.
ಇದನ್ನೂ ಓದಿ:ಹೈಕಮಾಂಡ್ ವಿರುದ್ಧ ಅಸಂತೋಷ: ಶಾಸಕರ ಸಭೆ ನಡೆಸಿದ ಬಿಎಸ್​ವೈ; ಎಸ್​ಟಿಎಸ್, ಬೈರತಿ, ಸೋಮಣ್ಣ ಗೈರು
ಇನ್ನು ರೈಲಿನ ಬೋಗಿಗಳಲ್ಲಿಯೂ ಬೆಂಕಿ ಕಾಣಿಸಿಕೊಂಡಿದೆ. ಈ ಉದ್ಯಾನ್ ಎಕ್ಸ್‌ಪ್ರೆಸ್‌ ರೈಲು‌ ಮುಂಬೈನಿಂದ ಆಗಮಿಸಿತ್ತು. ರೈಲು ನಿಲುಗಡೆಯಾದ ಬಳಿಕ ಈ ಅಗ್ನಿ ಅವಘಡ ಸಂಭವಿಸಿದೆ. ಚಾಲನೆಯಲ್ಲಿ ಇರುವಾಗ ಸಂಭವಿಸಿದ್ದರೆ ಅನಾಹುತ ನಡೆಯುವ ಸಾಧ್ಯತೆ ಇತ್ತು.
ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿಯನ್ನು ನಂದಿಸಿವೆ. ರೈಲಿನ ಎರಡು ಸ್ಲೀಪರ್ ಕೋಚ್​ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಯಾಣಿಕರು ಇಳಿದು ಹೋದ ಬಳಿಕ ಈ ಅವಘಡ ನಡೆದಿದೆ.
ಬೆಳಗ್ಗೆ 6ಗಂಟೆ ಸುಮಾರಿಗೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ನಿಲ್ದಾಣಕ್ಕೆ ಉದ್ಯಾನ್​ ಟ್ರೈನ್​ ಮುಂಬೈನಿಂದ ಬಂದಿತು. ಮೊದಲು ಎಸಿ ಕೋಚ್​ನಲ್ಲಿ ಬೆಂಕಿ ಕಾಣಿಸಿಕೊಂಡಿತು. B1-B2 ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ನಿನ್ನೆ ರಾತ್ರಿ 8.10ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್​ನಿಂದ ಉದ್ಯಾನ್​ ರೈಲು ಹೊರಟಿತ್ತು. ಇಂದು ಬೆಳಗ್ಗೆ 5.40 ರಿಂದ 6 ಗಂಟೆ ಒಳಗಡೆ ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ಬಂದು ತಲುಪಿತು. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಎಸಿ ಕೋಚ್​ನಿಂದಲೇ ಮೊದಲು ಬೆಂಕಿ ಹೊತ್ತಿಕೊಂಡಿರೋ ಮಾಹಿತಿ ಇದೆ.(ದಿಗ್ವಿಜಯ ನ್ಯೂಸ್​)
ಮುಂಬರುವ ಮಧ್ಯಪ್ರದೇಶ ಚುನಾವಣೆಗೂ ಕರ್ನಾಟಕದ ಸೂತ್ರ: ಈಗಾಗಲೇ ಗ್ಯಾರಂಟಿ ಘೋಷಣೆ ಮಾಡಿರುವ ಪ್ರಿಯಾಂಕಾ

ದಂಡಬಡ್ಡಿ ವಿಧಿಸುವಂತಿಲ್ಲ: ಬ್ಯಾಂಕ್​ಗಳಿಗೆ ಆರ್​ಬಿಐ ನಿರ್ದೇಶನ; ಜನವರಿಯಿಂದ ಜಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
