ಚಾಮರಾಜನಗರ:ಬೆಂಕಿ ಅವಘಡಗಳಿಂದಾಗುವ ಪ್ರಾಣಹಾನಿ, ನಷ್ಟ ತಡೆಯಲು ಜೀವ ಒತ್ತೆಯಿಟ್ಟು ದುಡಿಯುವ ಅಗ್ನಿಶಾಮಕದಳ ಸಿಬ್ಬಂದಿ ಕರೊನಾ ಮಹಾಮಾರಿ ವಿರುದ್ಧ ಎಲೆಮರೆಕಾಯಿಯಂತೆ ಸದ್ದಿಲ್ಲದೆ ಹೋರಾಡುತ್ತಿದ್ದಾರೆ. ಸೋಂಕು ತಡೆಗಾಗಿ ರಾಜ್ಯದ ಪ್ರತಿ ಜಿಲ್ಲೆಗಳ ಸಾರ್ವಜನಿಕ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಸೋಡಿಯಂ ಹೈಪೋಕ್ಲೋರೈಡ್ (ಸೋಂಕು ನಿವಾರಕ ದ್ರಾವಣ) ಸಿಂಪಡಿಸುವ ಕಾರ್ಯಕ್ಕೆ ಅಗ್ನಿಶಾಮಕ ದಳ ಹೆಗಲು ಕೊಟ್ಟಿದೆ.
ಇಲಾಖೆಯ ವಾಹನ, ಸಾಮಗ್ರಿಗಳನ್ನು ಬಳಸಿಕೊಂಡು ಕಾರ್ಯಾಚರಣೆಗಿಳಿದಿರುವ ಸಿಬ್ಬಂದಿ ಉರಿಬಿಸಿಲನ್ನೂ ಲೆಕ್ಕಿಸದೆ ಕಾರ್ಯಪ್ರವೃತ್ತ ರಾಗಿದ್ದಾರೆ. ಸೋಂಕಿತರು ಓಡಾಡಿದ ಸ್ಥಳಗಳಲ್ಲಿ ಅಡ್ಡಾಡುವುದು ಅಪಾಯಕರವಾದ್ದರಿಂದ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗಳಲ್ಲೂ ಜನನಿಬಿಡ ಪ್ರದೇಶಗಳಾದ ಮಾರುಕಟ್ಟೆ, ವಾಣಿಜ್ಯ ಮಳಿಗೆಗಳಿರುವ ರಸ್ತೆಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಅಗ್ನಿಶಾಮಕ ದಳಕ್ಕೆ ಸೂಚನೆ ನೀಡಿದೆ. ಆಮೇರೆಗೆ ರಾಜ್ಯದ ಪ್ರತಿ ಜಿಲ್ಲೆಗಳ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹೈಪೋಕ್ಲೋರೈಡ್ ಸಿಂಪಡಿಸಲಾಗುತ್ತಿದೆ.
ರಕ್ಷಣಾ ಕರೆಗೂ ಸ್ಪಂದನೆ:ಕರೊನಾ ವಿರುದ್ಧದ ಸಮರದಲ್ಲಿ ಭಾಗಿಯಾಗುವ ಜತೆಯಲ್ಲೇ ಬೆಂಕಿ ಮತ್ತು ರಕ್ಷಣಾ ಕರೆಗಳಿಗೂ ಅಗ್ನಿಶಾಮಕ ದಳ ಸ್ಪಂದಿಸುತ್ತಿವೆ. ಬೇಸಿಗೆಯಲ್ಲಿ ಅಗ್ನಿ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಅಗ್ನಿ ಅವಘಡ ಎದುರಿಸಲು ಅಗತ್ಯ ವಾಹನ, ಸಿಬ್ಬಂದಿ ಕಾಯ್ದಿರಿಸಿ ಉಳಿದ ಸಿಬ್ಬಂದಿಯನ್ನು ಸೋಂಕು ನಿವಾರಕ ದ್ರಾವಣ ಸಿಂಪಡಣೆಗೆ ನಿಯೋಜಿಸುವ ಮೂಲಕ ಅಗ್ನಿ ಶಾಮಕ ದಳ ಕರ್ತವ್ಯಪ್ರಜ್ಞೆ ಮೆರೆಯುತ್ತಿದೆ.
24X7 ಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಒಂದೆಡೆ ಕರೊನಾ ತಡೆಗಟ್ಟುವ ಕೆಲಸ ಮತ್ತೊಂದೆಡೆ ಬೆಂಕಿ ಹಾಗೂ ರಕ್ಷಣಾ ಕರೆಗಳಿಗೆ ಸ್ಪಂದಿಸುವ ಕರ್ತವ್ಯವನ್ನು ಬದ್ಧತೆಯಿಂದ ನಿರ್ವಹಿಸುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಮಾರ್ಚ್​ನಿಂದ ಈವರೆಗೆ ಒಟ್ಟು 80 ಅಗ್ನಿ ಮತ್ತು 10 ರಕ್ಷಣಾ ಕರೆಗಳಿಗೆ ಸ್ಪಂದಿಸಲಾಗಿದೆ.
| ಕಿರಣ್ ಮಾದರಹಳ್ಳಿ

ಕರೊನಾ ತಡೆಗಟ್ಟಲು ಅಗ್ನಿಶಾಮಕ ದಳ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಬಿಬಿಎಂಪಿ ಸೇರಿ ಇತರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ನೇತೃತ್ವದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುತ್ತಿದ್ದೇವೆ. ಇದೊಂದು ಜವಾಬ್ದಾರಿ ಯುತ ಕಾರ್ಯ. ಜೀವರಕ್ಷಣೆ ನಮ್ಮ ಕರ್ತವ್ಯ.| ಶಿವಕುಮಾರ್ ನಿರ್ದೇಶಕ, ರಾಜ್ಯ ಅಗ್ನಿಶಾಮಕ ದಳ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
