ಬೆಂಗಳೂರು:ರಾಜಧಾನಿ ಬೆಂಗಳೂರಿನ ಎಂಪೈರ್ ಹೋಟೆಲ್​ನಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದೆ. ನಗರದ ಚರ್ಚ್​ ಸ್ಟ್ರೀಟ್​ನಲ್ಲಿರುವ ಈ ಹೋಟೆಲ್​ನ ಲಾಡ್ಜ್​ ರೂಮ್​ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮಧ್ಯಾಹ್ನ 1.30ರ ಸುಮಾರಿಗೆ ಈ ಪ್ರಕರಣ ಸಂಭವಿಸಿದೆ.
ಎಂಪೈರ್ ಹೋಟೆಲ್​ನ ಲಾಡ್ಜ್​ ಕೋಣೆಯ ಗಾಜು ಒಡೆದುಹೋಗಿ ಹೊಗೆ ಹೊರಗೆ ಕಾಣಿಸಿಕೊಂಡಾಗ ಬೆಂಕಿ ಹೊತ್ತಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಇದೇ ಹೋಟೆಲ್​ನಲ್ಲಿ ಪುನೀತ್ ಫುಡ್​ ಫೆಸ್ಟಿವಲ್ ಕೂಡ ನಡೆಯುತ್ತಿದ್ದು, ಅದಕ್ಕೆ ಬಂದಿದ್ದ ಗ್ರಾಹಕರೂ ಇದ್ದರು.
ಒಟ್ಟು 32 ರೂಮ್​ಗಳನ್ನು ಹೊಂದಿರುವ ಎಂಪೈರ್ ಹೋಟೆಲ್​ನಲ್ಲಿ ಬೆಂಕಿ ಕಾಣಿಸಿಕೊಂಡ ವೇಳೆ 20 ರೂಮ್​ಗಳಲ್ಲಿ ಅತಿಥಿಗಳಿದ್ದು, 20ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು. ರೂಮ್​ ನಂ. 205ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಎಲ್ಲರನ್ನೂ ಹೊರಗೆ ಕಳುಹಿಸಲಾಗಿದೆ.
ರೂಮ್​ನಲ್ಲಿದ್ದ ಟಿವಿ ಬ್ಲಾಸ್ಟ್​ ಆಗಿ ಬೆಂಕಿ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲಿರುವ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸದ್ಯಕ್ಕೆ ಯಾವುದೇ ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ.
ಇದು ಭಾರತದ ಸಿನಿಮಾಗಳಲ್ಲೇ ಮಾಸ್ಟರ್​ಪೀಸ್​: ‘ಕಾಂತಾರ’ಕ್ಕೆ ಸೂಪರ್​ಸ್ಟಾರ್ ರಜನಿಕಾಂತ್ ಮೆಚ್ಚುಗೆ..

ರಸ್ತೆ ತುಂಬಾ ರಾಶಿ ರಾಶಿ ಮೀನು; ಹೊತ್ತು ಸಾಗುತ್ತಿದ್ದ ಲಾರಿಯೇ ಪಲ್ಟಿ!

ನಟಿ ರಮ್ಯಾ ಸಂಭ್ರಮ ಜೋರು​; ಕಾರಣ ಒಂದಲ್ಲ ಎರಡಲ್ಲ, ಮೂರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 8 =
Remember me
