ಕೊಡಗು:ಉದ್ಯಮಿಯೊಬ್ಬರ ಮನೆ ಮೇಲೆ ಗುಂಡಿನ ದಾಳಿಯಾಗಿದ್ದು, ಅದೇ ಸಮಯದಲ್ಲಿ ಅಂಗಳದಲ್ಲಿ ಆಡುತ್ತಿದ್ದ ಪುತ್ರ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರೆ, ಸಾಕುನಾಯಿಗಳಿಗೆ ಗುಂಡು ತಗುಲಿ ಒಂದು ಶ್ವಾನ ಸಾವಿಗೀಡಾಗಿದೆ.
ಕೊಡಗು ಜಿಲ್ಲೆಯ ಟಿ. ಶೆಟ್ಟಿಗೇರಿ ಸಮೀಪ ಇಂದು ಸಂಜೆ ಐದು ಗಂಟೆಯ ಸುಮಾರಿಗೆ ಈ ಪ್ರಕರಣ ನಡೆದಿದೆ. ಉದ್ಯಮಿ ಅನೀಶ್ ಮಾದಪ್ಪ ಎಂಬವರ ಮನೆ ಮೇಲೆ ಈ ದಾಳಿ ನಡೆದಿದೆ. ಮನೆಯಂಗಳಲ್ಲಿ ಆಡುತ್ತಿದ್ದ ಪುತ್ರ ಆಯುಷ್ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ನಾಯಿಗೂಡಿನಲ್ಲಿದ್ದ ಶ್ವಾನಗಳಿಗೆ ಗುಂಡು ತಗುಲಿದ್ದು, ಒಂದು ಶ್ವಾನ ಸಾವಿಗೀಡಾದರೆ ಇನ್ನೆರಡು ಗಂಭೀರವಾಗಿ ಗಾಯಗೊಂಡಿವೆ.
ಇದನ್ನೂ ಓದಿ:ಪತ್ತೆ ಆಯ್ತು ಅನುಮಾನಾಸ್ಪದ ಬುತ್ತಿ; ಟಿಫನ್​ ಬಾಕ್ಸ್​ನಲ್ಲಿ ಸ್ಫೋಟಕ ವಸ್ತು ಇರುವ ಶಂಕೆ!
ಮನೆಯಲ್ಲಿ ಅನೀಶ್ ಮಾದಪ್ಪ ಪತ್ನಿ ಮತ್ತು ಪುತ್ರ ಇದ್ದಾಗ ಈ ಗುಂಡಿನ‌ ದಾಳಿ ನಡೆದಿದ್ದು, ಪುತ್ರ ತೀರಾ ಆಘಾತಕ್ಕೆ ಒಳಗಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎ.ಟಿ.ಸೋಮಣ್ಣ ಎಂಬವರ ಮೇಲೆ ಅನೀಶ್​ ಮಾದಪ್ಪ ಪತ್ನಿ ಪಾರ್ವತಿ ಕೊಲೆಯತ್ನ ದೂರು ದಾಖಲಿಸಿದ್ದಾರೆ. ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಅಬ್ಬಬ್ಬಾ.. ಇದೇನಿದು ‘ಸರ್ಪ’ರೈಸ್!: ದೇವರಕೋಣೆಯಲ್ಲಿ ಕಾಳಿಂಗ ಸರ್ಪ, ಸ್ಕೂಲ್​ಬ್ಯಾಗ್​ನಲ್ಲಿ ನಾಗರಹಾವು!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nineteen + thirteen =
Remember me
