ವಿಜಯಪುರ:ಈತನ ಕೆಲಸ ಬೆಂಕಿ ನಂದಿಸುವುದು. ಫೈರ್​ಮ್ಯಾನ್​ ಆಗಿ ಕಾರ್ಯನಿರ್ವಹಿಸುತ್ತಿರುವ ಈತ, ನಾಲ್ಕು ವರ್ಷ ಪ್ರೀತಿಸಿ, ಅನುಭೋಗಿಸಿ ಯುವತಿಯೋರ್ವಳಿಗೆ ಕೈಕೊಟ್ಟಿದ್ದಾನೆ.
ಈತನ ಹೆಸರು ಸಚಿನ್​ ರಾಠೋಡ್​ ಎಂದು. ಈತ ಭಟ್ಕಳ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದೇವರ ಹಿಪ್ಪರಗಿ ಠಾಣೆ ವ್ಯಾಪ್ತಿಯಲ್ಲಿ ಬರುವ ಯುವತಿಯೋರ್ವಳಿಗೆ ಮೋಸ ಮಾಡಿದ್ದಾನೆ.
ಇವರಿಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನಿನ್ನನ್ನೇ ಮದುವೆಯಾಗುವುದಾಗಿ ಎಂದು ಹೇಳುತ್ತಾ ಯುವತಿಯನ್ನು ನಂಬಿಸಿದ್ದ ಈತ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ. ಮೊದಮೊದಲು ಸಚಿನ್​, ತನಗೆ ಪ್ರಮೋಷನ್ ಆದ ತಕ್ಷಣ ಮದುವೆ ಆಗುವುದಾಗಿ ಹೇಳಿ ನಂಬಿಸಿದ್ದ.
ಆದರೆ ಇತ್ತಿಚೆಗೆ ‘ನೀನು ನನಗೆ ಬರೇ ಟೈಂ ಪಾಸ್. ಬೇಕಿದ್ದರೆ ಒಂದಿಷ್ಟು ಹಣ ಕೊಡುತ್ತೇನೆ’ ಎಂದು ಸಚಿನ್​ ಹೇಳಿದ್ದಾನೆ. ಅಷ್ಟೇ ಅಲ್ಲದೇ, ಈತನ ಮಾತಿಗೆ ಆತನ ಕುಟುಂಬಸ್ಥರೂ ಬೆಂಬಲ ನೀಡಿದ್ದಾರೆ! ಈ ಯುವತಿ ಮಾತ್ರ ನನಗೆ ಹಣ ಬೇಡ, ಸಚಿನ್​ ಜತೆಗೆ ಮದುವೆ ಮಾಡಿಸಿ ಎನ್ನುತ್ತಿದ್ದಾಳೆ. ತನಗಾದ ಅನ್ಯಾಯದ ಕುರಿತು ನೊಂದ ಯುವತಿ ಜಿಲ್ಲಾಧಿಕಾರಿ ಬಳಿ ಮೊರೆ ಹೋಗಿದ್ದು ವಿಜಯಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪ್ರೀತಿಯ ಹುಟ್ಟಿನಿಂದ ಅಂತ್ಯ: ಆಗಿದ್ದು ಹೇಗೆ?
ದೇವರಹಿಪ್ಪರಗಿ ತಾಲೂಕಿನ ಹಿಟ್ನಳ್ಳಿಗೆ ಯುವತಿಯ ಅಕ್ಕನನ್ನು ಮದುವೆ ಮಾಡಿ ಕೊಡಲಾಗಿತ್ತು. ಅಕ್ಕನ ಊರಿಗೆ ಹೋಗಿದ್ದ ವೇಳೆ ಅದೇ ಊರಿನ ಸಚಿನ್​ ರಾಠೋಡ್​ ಪರಿಚಯವಾಗಿದ್ದ. ಬಳಿಕ ಸ್ನೇಹ ಪ್ರೀತಿಗೆ ತಿರುಗಿದ್ದು, ಯುವ ಜೋಡಿ ಎಲ್ಲೆಂದರಲ್ಲಿ ಸ್ವಚ್ಚಂದವಾಗಿ ತಿರುಗಾಡಿತ್ತು.
ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಚಿನ್, ತನಗೆ ಪ್ರಮೋಷನ್ ಆಗುತ್ತದೆ. ಅದಾದ ಬಳಿಕ ಮದುವೆ ಆಗುತ್ತೇನೆ ಎಂದು ತಿಳಿಸಿದ್ದ. ಅಷ್ಟೇ ಅಲ್ಲದೆ ಈತ, ನಾನಾ ಕಾರಣಗಳನ್ನು ಹೇಳಿ ಯುವತಿಯ ಬಳಿಯಿಂದ ಸಾಕಷ್ಟು ಹಣವನ್ನೂ ಪಡೆದಿದ್ದಾನೆ. ಆದರೆ ಎಲ್ಲ ಮುಗಿದ ಬಳಿಕ ಇದೀಗ ಈ ಫೈರ್​ಮನ್​ ಕೈ ಬಿಟ್ಟಿದ್ದು ಯುವತಿಯ ಬಾಳಿಗೆ ಬೆಂಕಿ ಹಚ್ಚಿದ್ದಾನೆ.
ಕಳೆದ ನಾಲ್ಕು ವರ್ಷಗಳಲ್ಲಿ ಲಾಡ್ಜ್​ಗೆ ಹಾಗೂ ಭಟ್ಕಳಕ್ಕೆ ಕರೆಸಿಕೊಂಡು ಸಾಕಷ್ಟು ಬಾರಿ ದೈಹಿಕ ಸಂಪರ್ಕ ಕೂಡ ಈ ಸಚಿನ್​ ಮಾಡಿದ್ದು ಈಗ ಮಾತ್ರ ವರಸೆ ಬದಲಾಯಿಸಿ ಕೈ ಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ಯುವತಿಗೆ ನೇರವಾಗಿ ನೀನು ಬರೆ ಟೈಂ ಪಾಸ್​ ಎಂದಿದ್ದು ಹಣ ನೀಡಲು ಮುಂದಾಗಿದ್ದಾನೆ. ದೂರು ದಾಖಲಿಸಿದರೂ ಪೊಲೀಸರು ಆತನನ್ನು ಬಂಧಿಸಿಲ್ಲ ಎಂದು ಯುವತಿ ಆರೋಪಿಸಿದ್ದು ಇದೀಗ ಆಕೆ ನ್ಯಾಯಕ್ಕಾಗಿ ವಿಜಯಪುರ ಡಿಸಿ ಕಚೇರಿ ಬಳಿ ಕುಳಿತಿದ್ದಾಳೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twelve =
Remember me
