ಬೆಂಗಳೂರುನೃಪತುಂಗ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ಸಮಾರಂಭವು ಇದೇ 21ರಂದು ಅರಮನೆ ರಸ್ತೆಯಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ.
ಮೊದಲ ಘಟಿಕೋತ್ಸವಕ್ಕೆ ಬಾಹ್ಯಾಕಾಶ ವಿಜ್ಞಾನಿಯಾಗಿ ಚಂದ್ರಯಾನದಲ್ಲಿ ಅನುಪಮ ಕೊಡುಗೆಗಳನ್ನು ನೀಡಿರುವ ನಂದಿನಿ ಹರಿನಾಥ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ಸ್‌ನ ಡಾ. ರಾಮಸ್ವಾಮಿ ಬಾಲಸುಬ್ರಮಣಿಯನ್ ಮತ್ತು ಇನ್ಫೋಸಿಸ್ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಕೆ. ದಿನೇಶ್ ಅವರಿಗೆ ಗೌರವ ಡಾಕ್ಟೆರೇಟ್ ನೀಡುತ್ತಿದೆ.
ಈ ಕುರಿತು ಸೋಮವಾರ ವಿಶ್ವವಿದ್ಯಾಲಯದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿ ಕುಲಪತಿ ಪ್ರೊ. ಶ್ರೀನಿವಾಸ ಎಸ್. ಬಳ್ಳಿ, ಆ.21ರಂದು ಬೆಳಗ್ಗೆ 11 ಗಂಟೆಗೆ ಸಮಾರಂಭ ನಡೆಯಲಿದ್ದು, ವಿಶ್ವವಿದ್ಯಾಲಯಗಳ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಪ್ರೊ. ಜನಗದೀಶ್‌ಕುಮಾರ್ ಘಟಿಕೋತ್ಸವದ ಮುಖ್ಯ ಭಾಷಣ ಮಾಡಲಿದ್ದಾರೆ. ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರಚಂದ್ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಭಾಗವಹಿಸಲಿದ್ದಾರೆ ಎಂದರು.

792 ವಿದ್ಯಾರ್ಥಿಗಳಿಗೆ ಪದವಿ:
ವಿಶ್ವವಿದ್ಯಾಲಯವು ಆರಂಭವಾದ 2020-22ರ ಅವಧಿ ಮತ್ತು 2022-24ರ ಅವಧಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ತಲಾ 169 ಸೇರಿ 338 ವಿದ್ಯಾರ್ಥಿಗಳು ಹಾಗೂ 2020-23ರ ಅವಧಿಯಲ್ಲಿ ಸ್ನಾತಕ ಪದವಿ ಪೂರೈಸಿದ 454 ವಿದ್ಯಾರ್ಥಿಗಳು ಸೇರಿ 792 ಮಂದಿ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
16 ಮಂದಿಗೆ ಚಿನ್ನದ ಪದಕ
ಎಂಎಸ್ಸಿಯಲ್ಲಿ 7 ವಿಷಯಗಳಿಗೆ ವಿಷಯವಾರು ಒಂದು ಚಿನ್ನದ ಪದಕ ನೀಡಲಾಗಿದೆ. 2 ಶೈಕ್ಷಣಿಕ ವರ್ಷಗಳಿಗೆ 14 ಚಿನ್ನದ ಪದಕ ಮತ್ತು ಬಿಎಸ್ಸಿ ಹಾಗೂ ಬಿಸಿಎ ವಿಷಯಗಳಲ್ಲಿ 2 ಸೇರಿ ಒಟ್ಟು 16 ಚಿನ್ನದ ಪದಕಗಳನ್ನು ನೀಡಲಾಗುತ್ತಿದೆ. 16 ಚಿನ್ನದಲ್ಲಿ 12 ಚಿನ್ನದ ಪದಕ ಮಹಿಳೆಯರ ಪಾಲಾಗಿದೆ. 20 ಗ್ರಾಂ. ಬೆಳ್ಳಿಗೆ 1.2 ಗ್ರಾಂ. ಚಿನ್ನವನ್ನು ಒಳಗೊಂಡ ಪದಕ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಶಿವಾನಂದ ಬ. ಕರಾಳೆ ಹಾಗೂ ಮೌಲ್ಯಮಾಪನ ಕುಲಸಚಿವೆ ಪ್ರೊ. ಎ.ಸಿ. ಮಂಜುಳಾ ಉಪಸ್ಥಿತರಿದ್ದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − sixteen =
Remember me
