ಬೆಂಗಳೂರು:ಆರ್ಥಿಕ ನಷ್ಟದಲ್ಲಿರುವ ಬಿಎಂಟಿಸಿಯನ್ನು ಖಾಸಗೀಕರಣ ಮಾಡುವುದಕ್ಕೆ ಒಂದೊಂದೇ ಹೆಜ್ಜೆ ಇಡಲಾಗುತ್ತಿದೆ. ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ಇದೀಗ ಡೀಸೆಲ್ ಬಸ್‌ಗಳನ್ನು ಖಾಸಗಿಯವರಿಂದ ಪಡೆಯಲು ಬಿಎಂಟಿಸಿ ಕ್ರಮ ಕೈಗೊಳ್ಳುತ್ತಿದೆ.
ಕೇಂದ್ರ ಸರ್ಕಾರದ ಫೇಮ್ ಇಂಡಿಯಾ-2ರ ಅನುದಾನದ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ 300 ಎಲೆಕ್ಟ್ರಿಕ್ ಬಸ್‌ಗಳನ್ನು ಬಿಎಂಟಿಸಿಗೆ ಸೇರ್ಪಡೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅದಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಜತೆಗೆ ಇದೀಗ 1,500 ಡೀಸೆಲ್ ಬಸ್‌ಗಳನ್ನು ಖಾಸಗಿಯವರಿಂದ ಪಡೆಯಲು ನಿರ್ಧರಿಸಲಾಗಿದೆ. ಅದಕ್ಕಾಗಿ ಆಸಕ್ತ ಸಂಸ್ಥೆಗಳಿಂದ ಬಿಡ್ ಸಲ್ಲಿಸಲು ಸೂಚಿಸಲಾಗಿದೆ. ಆ ಮೂಲಕ ಬಿಎಂಟಿಸಿಯಲ್ಲಿ ಖಾಸಗಿ ಸೇವೆ ತರಲು ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ:ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ
ಕಿಲೋಮೀಟರ್​ ಲೆಕ್ಕದಲ್ಲಿ ಹಣ ಪಾವತಿ:ಬಿಎಂಟಿಸಿ ಖಾಸಗಿಯವರಿಂದ ಬಸ್‌ಗಳನ್ನು ಪಡೆದರೆ, ಅವುಗಳಿಗೆ ನಿಗಮದ ಇತರ ಬಸ್‌ಗಳಿಗಿರುವಂತೆ ಬಣ್ಣಗಳನ್ನು ಬದಲಿಸಲಾಗುತ್ತದೆ. ಜತೆಗೆ ಪ್ರತಿ ಬಸ್‌ಗೆ ಕಿಲೋಮೀಟರ್​ ಲೆಕ್ಕದಲ್ಲಿ ಹಣ ಪಾವತಿಸಲಾಗುತ್ತದೆ. ಎಷ್ಟು ಹಣ ನೀಡಬೇಕು ಎಂಬುದು ಇನ್ನೂ ನಿರ್ಧರಿಸಿಲ್ಲ. ಖಾಸಗಿ ಸಂಸ್ಥೆಗಳು ಸಲ್ಲಿಸುವ ಬಿಡ್ ಆಧರಿಸಿ ಮುಂದೆ ಹಣ ನಿಗದಿ ಮಾಡಲಾಗುತ್ತದೆ. ಬಸ್ ಪೂರೈಸುವ ಸಂಸ್ಥೆಯೇ ಅವುಗಳ ನಿರ್ವಹಣೆ ಮಾಡಬೇಕಿದೆ. ಆದರೆ, ಬಸ್ ಸೇವೆಯಿಂದ ಸಂಗ್ರಹವಾಗುವ ಪ್ರಯಾಣ ಶುಲ್ಕವನ್ನು ಬಿಎಂಟಿಸಿ ಪಡೆಯಲಿದೆ.
ಈ ಮೊದಲು ವಿಫಲ:ಖಾಸಗಿ ಬಸ್‌ಗಳ ಮೂಲಕ ಸೇವೆ ನೀಡುವ ವಿಚಾರ ಈ ಹಿಂದೆಯೂ ಅನುಷ್ಠಾನಗೊಳಿಸಲಾಗಿತ್ತು. ಕಳೆದ 15 ವರ್ಷಗಳ ಹಿಂದೆಯೇ ಈ ರೀತಿಯ ಪ್ರಯೋಗ ಮಾಡಲಾಗಿತ್ತು. ಒಂದು ಸಾವಿರಕ್ಕೂ ಹೆಚ್ಚಿನ ಖಾಸಗಿ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದು, ಸೇವೆ ನೀಡಲಾಗಿತ್ತು. ಆದರೆ, ಈ ಕ್ರಮದಿಂದ ಬಿಎಂಟಿಸಿ ಮತ್ತು ಖಾಸಗಿ ಸಂಸ್ಥೆಗಳಿಗೆ ಯಾವುದೇ ಲಾಭವಾಗಿರಲಿಲ್ಲ. ಹೀಗಾಗಿ ಅದನ್ನು ರದ್ದು ಮಾಡಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಬಸ್‌ಗಳನ್ನು ಖಾಸಗಿ ಸಂಸ್ಥೆಗಳಿಂದ ಪಡೆಯಲಾಗುತ್ತಿದೆ.
ಇದನ್ನೂ ಓದಿ:ಮೈಮೇಲೇ ಲಾರಿ ಚಲಿಸಿ 3 ವರ್ಷದ ಮಗು ಸ್ಥಳದಲ್ಲೇ ಸಾವು; ಪುತ್ರಿಯೊಂದಿಗೆ ದಂಪತಿ ಸಾಗುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ
ನೌಕರರಿಗೆ ಬುದ್ಧಿ ಕಲಿಸುವ ಯತ್ನ?:ಹಿಂದೆ ಖಾಸಗಿ ಸಂಸ್ಥೆಯಿಂದ ಬಸ್‌ಗಳನ್ನು ಪಡೆದಾಗ ಚಾಲಕ ಖಾಸಗಿ ಸಂಸ್ಥೆಯವರಾಗಿದ್ದರೆ, ನಿರ್ವಾಹಕರನ್ನು ಮಾತ್ರ ಬಿಎಂಟಿಸಿ ನೇಮಕ ಮಾಡುತ್ತಿತ್ತು. ಇದೀಗ ಮತ್ತೆ ಅದೇ ಮಾದರಿಯನ್ನು ಅನುಸರಿಸುವ ಸಾಧ್ಯತೆಗಳಿವೆ. ಅಲ್ಲದೆ, ಬಿಎಂಟಿಸಿ ನೌಕರರು ಪದೇಪದೆ ಮುಷ್ಕರಕ್ಕೆ ಮುಂದಾಗುತ್ತಿರುವ ಕಾರಣ, ಅವರಿಲ್ಲದಿದ್ದರೂ, ಖಾಸಗಿಯವರಿಂದ ಸೇವೆ ನೀಡುತ್ತೇವೆ ಎಂದು ಸಂದೇಶ ನೀಡಲು ಬಿಎಂಟಿಸಿ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಖಾಸಗೀಕರಣ?:ಕರೊನಾ ಸೋಂಕು, ಡೀಸೆಲ್ ಬೆಲೆ ಏರಿಕೆ ಸೇರಿ ಇನ್ನಿತರ ಕಾರಣಗಳಿಂದ ಬಿಎಂಟಿಸಿ 2 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟದಲ್ಲಿದೆ. ಇದೀಗ ನೌಕರರ ವೇತನ ಹೆಚ್ಚಳ ಸೇರಿ ಇನ್ನಿತರ ಕಾರಣಗಳಿಂದ ನಿಗಮಕ್ಕೆ ಮತ್ತಷ್ಟು ಹೊರೆ ಬೀಳಲಿದೆ. ಈ ಎಲ್ಲದರಿಂದ ಉಂಟಾಗುತ್ತಿರುವ ಆರ್ಥಿಕ ಸಂಷ್ಟದಿಂದ ಹೊರಬರಲು ಸರ್ಕಾರದ ನೆರವು ಅಗತ್ಯ. ಆದರೆ, ಈಗಾಗಲೆ ನೂರಾರು ಕೋಟಿ ರೂ. ನೆರವು ನೀಡಿರುವ ಸರ್ಕಾರ, ಮತ್ತೆ ಅನುದಾನ ನೀಡುವುದಕ್ಕೆ ಮುಂದಾಗುವುದು ಅನುಮಾನ. ಹೀಗಾಗಿ ಖಾಸಗಿಯವರ ನೆರವು ಪಡೆಯಲು ಬಿಎಂಟಿಸಿ ನಿರ್ಧರಿಸಿದೆ. ಆ ಮೂಲಕ ಹಂತಹಂತವಾಗಿ ಖಾಸಗೀಕರಣ ಮಾಡುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ನೌಕರ ಸಂಘಟನೆ ಮುಖಂಡರು ಹೇಳುತ್ತಿದ್ದಾರೆ.
ಇದನ್ನೂ ಓದಿ:ಎರಡನೇ ಮದ್ವೆ ಆಗಲು ಹೊರಟವನನ್ನು ಸ್ಥಳಕ್ಕೇ ತೆರಳಿ ತಡೆದ ಪತ್ನಿ; ಠುಸ್ ಆಯ್ತು ಒಬ್ಳಿಗೆ ಕೈಕೊಟ್ಟು ಇನ್ನೊಬ್ಬಳ ಕೈಹಿಡಿಯೋ ಯತ್ನ
ಸಂಬಳ ಕೇಳಲು ಬಂದ ನೌಕರನ ಕೊಲೆ! ಬಿಜೆಪಿ ಮಾಜಿ ಶಾಸಕನ ಮಗನ ವಿರುದ್ಧ ದೂರು

ಎಲ್ಲರಿಗೂ ಒಂದೇ ನಿಯಮ: ಮಾಸ್ಕ್​ ಧರಿಸದ ಸರ್ಕಲ್​ ಇನ್ಸ್​ಪೆಕ್ಟರ್​ಗೆ ದಂಡ ವಿಧಿಸಿದ ಎಸ್​ಪಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
