ನೆಲಮಂಗಲ:ಪ್ರೀತಿಸಿ ವಿವಾಹವಾಗಿರುವುದನ್ನೇ ಮುಚ್ಚಿಟ್ಟು ಮತ್ತೋರ್ವ ಯುವತಿಯನ್ನು ವಿವಾಹವಾಗಿ ಮೊದಲ ರಾತ್ರಿಗೆ ಸಜ್ಜಾಗಿದ್ದ ಪತಿರಾಯನನ್ನು ಮೊದಲ ಪತ್ನಿ ಜೈಲಿಗೆ ಕಳುಹಿಸಿದ್ದಾಳೆ.
ದೊಡ್ಡಬಳ್ಳಾಪುರ ತಾಲೂಕು ಬೀರಯ್ಯನಪಾಳ್ಯದ ಮಧುಸೂದನ್ (27) ಬಂಧಿತ. ಮೊದಲ ಪತ್ನಿ ಪುಷ್ಪಲತಾ, ಪತಿಯಿಂದ ಮೋಸ ಹೋದವಳು. ಒಂದೇ ಗ್ರಾಮದರಾದ ಇಬ್ಬರೂ 4 ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೇಯಸಿಯನ್ನು ಮದá-ವೆಯಾಗುವುದಾಗಿ ಹೇಳುತ್ತಿದ್ದ ಮಧುಸೂದನ್, ಮನೆ ಬಿಟ್ಟು ಬರುವಂತೆ ಆಕೆಯನ್ನು ಹಲವು ಬಾರಿ ಪುಸಲಾಯಿಸಿದ್ದ. ಆದರೆ, ಮನೆಯವರ ಒಪ್ಪಿಗೆ ಪಡೆದೇ ಮದುವೆಯಗುವುದಾಗಿ ಪುಷ್ಪಾಲತಾ ಹೇಳಿದ್ದಳು. ಪ್ರೀತಿಯ ವಿಚಾರವನ್ನು ತಿಳಿಸಿದಾಗ ಕುಟುಂಬದವರು ಒಪ್ಪಿರಲಿಲ್ಲ. ಪುಷ್ಪಲತಾ ತಾಯಿ ಕೂಡ ಮದುವೆ ನಿರಾಕರಿಸಿದ್ದರು. ಕಳೆದ ಜ.20ರಂದು ತಮ್ಮ ಹಾಗೂ ಸಂಬಂಧಿಗಳ ಜತೆ ಪ್ರವಾಸಕ್ಕೆ ತೆರಳುವ ನೆಪದಲ್ಲಿ ಪ್ರೇಯಸಿಯನ್ನು ಸವದತ್ತಿಗೆ ಕರೆದೊಯ್ದಿದ್ದ ಮಧು, ದೇಗುಲದಲ್ಲಿ ಮದುವೆಯಾಗಿದ್ದ. ಬಳಿಕ ಬೆಂಗಳೂರಿನ ತೋಟದಗುಡ್ಡದಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಸಂಸಾರ ಹೂಡಿದ್ದರು.
ಆಸ್ತಿ, ಹಣಕ್ಕಾಗಿ ಕಿರುಕುಳ:6 ತಿಂಗಳ ಬಳಿಕ ತೋಟದಗುಡ್ಡದ ಹಳ್ಳಿಯ ಮನೆ ಬಿಡಿಸಿ ಮಧುಸೂದನನನ್ನು ಬೀರಯ್ಯನಪಾಳ್ಯಕ್ಕೆ ಕರೆದುಕೊಂಡು ಹೋಗಿದ್ದ ಆತನ ಪಾಲಕರು, ತವರುಮನೆಯಿಂದ ಆಸ್ತಿ, ಹಣ ತರುವಂತೆ ಕಿರುಕುಳ ನೀಡಲಾರಂಭಿಸಿದರು. ಪಾಲಕರು ಹಣ, ಆಸ್ತಿ ಕೊಡದಿದ್ದಾಗ, ನಮ್ಮಿಬ್ಬರನ್ನೂ ಮನೆಯಿಂದ ಹೊರಹಾಕಿದ್ದರು. ನಂತರ ಮತ್ತೆ ತೋಟದಗುಡ್ಡದಹಳ್ಳಿಯಲ್ಲಿ ಮತ್ತೆ ಬಾಡಿಗೆ ಮನೆಯಲ್ಲಿ ಜೀವನ ನಡೆಸಲಾರಂಭಿಸಿದ್ದೆವು ಎಂದು ಪುಷ್ಪಲತಾ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ನೆಪ ಹೇಳಿ ದಿಢೀರ್ ಮದುವೆ
ಪೂರ್ವಯೋಜನೆಯಂತೆ ಮಧುಸೂದನ್ ಮತ್ತು ಆತನ ಮನೆಯವರು ಪುಷ್ಪಾಗೆ ಗೊತ್ತಿಲ್ಲದಂತೆ ಗೌರಿಬಿದನೂರಿನ ಯುವತಿಯೊಂದಿಗೆ ಡಿ. 2ರಂದು ಮದುವೆ ನಿಶ್ಚಯಿಸಿದ್ದರು. ಆ ಯುವತಿಯ ಪಾಲಕರಿಗೆ ನೆಪ ಹೇಳಿ ನ.25ರಂದೇ ವಿಧುರಾಶ್ವತ್ಥದಲ್ಲಿ ಸರಳವಾಗಿ ಮದುವೆ ಮಾಡಿಸಿದ್ದರು. ಮಧುಸೂದನ್ ಮತ್ತೊಂದು ವಿವಾಹವಾಗಿರುವ ವಿಷಯ ತಿಳಿದ ಪುಷ್ಪಲತಾ ಡಿ.6ರಂದು ಗೌರಿಬಿದನೂರಿನ ಗಂಗಾನಗರದಲ್ಲಿನ 2ನೇ ಪತ್ನಿ ಮನೆಗೆ ಹೋದಾಗ, ಪ್ರಸ್ತಕ್ಕೂ ಮುನ್ನ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿರುವುದು ಗೊತ್ತಾಗಿತ್ತು. ಪುಷ್ಪಾ ಕೂಡಲೇ ಮಾದನಾಯಕನಹಳ್ಳಿ ಠಾಣೆಗೆ ತೆರಳಿ ಪೊಲೀಸರಿಗೆ ವಿಷಯ ತಿಳಿಸಿ ಪತಿಯನ್ನು ಜೈಲಿಗೆ ಕಳಿಸಿದ್ದಾಳೆ.
ಮೊಬೈಲ್ ನಂಬರ್ ಬದಲಿಸಿದ
ನ.14ರಂದು ತೋಟದಗುಡ್ಡದಹಳ್ಳಿಯ ಮನೆ ತೊರೆದು ಊರು ಸೇರಿದ್ದ ಮಧುಸೂದನ್, ಮೊಬೈಲ್ ಸಂಖ್ಯೆ ಬದಲಿಸಿದ್ದ. ಅನುಮಾನಗೊಂಡ ಪುಷ್ಪಲತಾ ನ.16ರಂದು ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿ, ಪತಿ ಮತ್ತೊಂದು ವಿವಾಹ ಮಾಡಿಕೊಳ್ಳಲು ಸಜ್ಜಾಗಿರುವುದಾಗಿ ತಿಳಿಸಿದ್ದರು. ಠಾಣೆಗೆ ಹಾಜರಾಗಿದ್ದ ಮಧಸೂದನ್, ತಾನು ಮತ್ತೊಂದು ವಿವಾಹವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದ.
ವಾಟ್ಸ್​ಆ್ಯಪ್​ ಸ್ಟೇಟಸ್​ನಿಂದ ಬಯಲಾಯ್ತು ಮುಚ್ಚಿಟ್ಟಿದ್ದ ರಹಸ್ಯ: ಮರುಗಳಿಗೆಯಲ್ಲೇ ಮಹಿಳೆ ನೇಣಿಗೆ ಶರಣು!

ಪಕ್ಕದ್ಮನೆ ಆಂಟಿಗೆ ಗಂಡ ಸುಖಕೊಡಲ್ವಂತೆ- ಸದಾ ಪೀಡಿಸುತ್ತಿದ್ದಾಳೆ: ಹೇಗೆ ತಪ್ಪಿಸಿಕೊಳ್ಳಲಿ?

ಗಂಡನ ರಾಸಲೀಲೆ ವೃತ್ತಾಂತ ಬಿಚ್ಚಿಟ್ಟ ಹೆಂಡತಿ! ಈತನ ಚಾನ್ಸ್​ ಆಸೆಗೆ ಬಲಿಯಾದ್ರೆ ಬದುಕೇ ನರಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 6 =
Remember me
