ಯಾದಗಿರಿ:ಪರಸ್ಪರ ಅಗ್ನಿಸಾಕ್ಷಿಯಾಗಿ ಮದುವೆ ಮಾಡಿಕೊಂಡು ಮೂರು ವರ್ಷ ಸುಖವಾಗಿ ದಾಂಪತ್ಯ ಜೀವನ ಸಾಗಿಸಿದ್ದವ, ಮತ್ತೊಂದು ಹೆಣ್ಣಿನ ಸಹವಾಸಕ್ಕೆ ಸಿಲುಕಿ ಆಕೆಯನ್ನೂ ಮದುವೆಯಾಗಿದ್ದಾನೆ. ಇದೀಗ ಕಂಗೆಟ್ಟ ಪತ್ನಿ, ತನ್ನ ಗಂಡನನ್ನು ನನಗೆ ಕೊಡಿಸಿ ಎಂದು ಅಂಗಲಾಚಿದ್ದಾಳೆ.
ಏನಿದು ಘಟನೆ?:ಕಲಬುರಗಿ ನಗರದ ಶರಣಪ್ಪ ಭಜಂತ್ರಿ ಎಂಬಾತನೊಂದಿಗೆ ಯಾದಗಿರಿಯ ಅಂಬಿಕಾಳ ಜತೆ 2018ರಲ್ಲಿ ಮದುವೆಯಾಗಿತ್ತು. ನಗರದ ಖಾಸಗಿ ಡಯಾಗ್ನೋಸ್ಟಿಕ್ ಲ್ಯಾಬ್​ನಲ್ಲಿ ಕೆಲಸ ಮಾಡುತ್ತಿದ್ದ ಶರಣಪ್ಪಗೆ ಕಲಬುರಗಿಯಿಂದ ನಿತ್ಯ ಅದೇ ಲ್ಯಾಬ್​ಗೆ ಕೆಲಸಕ್ಕಾಗಿ ಬರುತ್ತಿದ್ದ ಸುಮನ್ ಆಫ್ರಿನ್ ಎಂಬಾಕೆ ಜತೆ ಸ್ನೇಹ ಬೆಳೆದಿತ್ತು. ಸುಮನ್ ಆಫ್ರಿನ್​ಗೆ ಬೇರೋಬ್ಬನ ಜತೆ ಮದುವೆ ಆಗಿ ಮೂರು ಮಕ್ಕಳಿದ್ದರು. ಕೌಟುಂಬಿಕ ಕಲಹದಿಂದ ಗಂಡನಿಂದ ದೂರವಾಗಿದ್ದಳು.
ಶರಣಪ್ಪನ ಪತ್ನಿ ಅಂಬಿಕಾ, ಹೆರಿಗೆಗಾಗಿ 2019ರಲ್ಲಿ ತವರು ಮನೆಗೆ ಹೋಗಿದ್ದರು. ಆ ವೇಳೆ ಸುಮನ್ ಆಫ್ರಿನ್, ಮತ್ತು ಶರಣಪ್ಪನ ನಡುವೆ ಆತ್ಮೀಯತೆ ಬೆಳೆದು ಪ್ರೀತಿಗೆ ತಿರುಗಿದೆ. ಇಬ್ಬರೂ ಮದುವೆ ಆಗಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಅಂಬಿಕಾ, ‘ನಾನು ಹೆರಿಗೆಗೆ ಹೋಗಿದ್ದೆ. ಆ ವೇಳೆ ಸುಮನ್​, ನನ್ನ ಗಂಡನನ್ನು ಬಲೆಗೆ ಬೀಳಿಸಿಕೊಂಡು ಮದುವೆಯಾಗಿದ್ದಾಳೆ. ನನಗೆ ಹೆಣ್ಣು ಮಗು ಆಯಿತು. ಮುದ್ದಾದ ಮಗು ನೋಡಲು ಬನ್ನಿ ಅಂತ ನನ್ನ ಗಂಡನಿಗೆ ಹಲವು ಬಾರಿ ಕರೆ ಮಾಡಿದೆ. ಆದರೆ ಅವರು ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದೇನೆ ಎಂದು ಸುಳ್ಳು ಹೇಳಿ ದಿನ ದೂಡುತ್ತಿದ್ದರು. ಅನುಮಾನ ಬಂದು ನನ್ನ ತಂದೆ-ತಾಯಿ ಇಬ್ಬರೂ ಹೋಗಿ ಪರಿಶೀಲಿಸಿದಾಗ ಸುಮನ್​ ಮತ್ತು ನನ್ನ ಗಂಡ ಮದುವೆ ಆಗಿರುವ ವಿಚಾರ ಗೊತ್ತಾಯಿತು ಎಂದು ವಿವರಿಸಿದರು.
ನನ್ನ ಗಂಡ ನನ್ನೊಂದಿಗೆ ಇದ್ದ ವೇಳೆಯೂ ಸುಮನ್ ಆಫ್ರಿನ್ ಆಗಾಗ ರಾತ್ರಿ ವೇಳೆ ವಿಡಿಯೋ ಕಾಲ್ ಮಾಡುತ್ತಿದ್ದಳು. ಇದು ನನ್ನ ಗಮನಕ್ಕೆ ಬಂದಾಗ ಸರಿಯಲ್ಲ ಎಂದು ಆಕೆಗೆ ಸಾಕಷ್ಟು ಬಾರಿ ಹೇಳಿದ್ದೆ. ಆದರೆ ಒಂದು ದಿನ ನಿನ್ನ ಪತಿಯನ್ನು ನಾನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಸಹ ಹಾಕಿದ್ದಳು. ಇದಾದ ಬಳಿಕ ಶರಣಪ್ಪ, ಕೆಲ ದಿನಗಳಿಂದ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದ. ನನ್ನ ಕುಟುಂಬಸ್ಥರು ಬೆಂಗಳೂರಿನ ಮಾನಸಿಕ ಪರಿವರ್ತನಾ ಕೇಂದ್ರಕ್ಕೆ ನನ್ನ ಗಂಡನನ್ನು ಕರೆದುಕೊಂಡು ಹೋದಾಗ ಗೊತ್ತಾಯಿತು ಮತ್ತೊಂದು ಆಘಾತಕಾರಿ ವಿಷಯ. ‘2020ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಲ್ಲದೆ, ತನ್ನ ಹೆಸರನ್ನು ಸುಮೈರ್ ಉಜ್ ಝೈನ್ ಎಂದು ಬದಲಾಯಿಸಿಕೊಂಡಿದ್ದೇನೆ’ ಎಂದು ನನ್ನ ಗಂಡ ತಿಳಿಸಿದ್ದಾನೆ. ದಯವಿಟ್ಟು ನನ್ನ ಗಂಡನನ್ನು ನನಗೆ ಕೊಡಿಸಿ ಎಂದು ಅಂಬಿಕಾ ಕಣ್ಣೀರಿಟ್ಟರು.
ಕಳೆಗಟ್ಟಿದೆ ಬಸವನಗುಡಿ ಕಡಲೆಕಾಯಿ ಪರಿಷೆ: ಭಕ್ತರಿಗೆ ಕಡಲೆಕಾಯಿ ಪ್ರಸಾದ, ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ

ತಮಿಳು ಮಕ್ಕಳ ಕನ್ನಡ ಪ್ರೀತಿ! ಸ್ವಗ್ರಾಮದಲ್ಲಿ ತಮಿಳು ಶಾಲೆ ಇದ್ದರೂ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲೇ ಓದುತ್ತಿದ್ದಾರೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + nine =
Remember me
