ಬೆಂಗಳೂರು:ಮೀನು ಸಸ್ಯಾಹಾರವೇ? ಇಂತಹದ್ದೊಂದು ಪ್ರಶ್ನೆ ಕುರಿತಾಗಿ ವಿಧಾನಸಭೆಯಲ್ಲಿ ಸೋಮವಾರ ಸ್ವಾರಸ್ಯಕರ ಚರ್ಚೆ ನಡೆಯಿತು.
ಮೀನುಗಾರಿಕೆ ಸಮಸ್ಯೆ ಕುರಿತು ಸದನದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಾತಾನಡುತ್ತಿದ್ದರು. ಈ ವೇಳೆ ಎದ್ದುನಿಂತ ಡಿಸಿಎಂ ಗೋವಿಂದ ಕಾರಜೋಳ, ”ಮೀನು ಸಸ್ಯಾಹಾರ” ಎಂದರು. ಕಾರಜೋಳ ಹೇಳಿಕೆಯನ್ನು ಅಲ್ಲಗೆಳೆದ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ, ‘ಈ ಬಗ್ಗೆ ಚರ್ಚೆಯಾಗಬೇಕು’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಎ.ಎಸ್.ಪಾಟೀಲ್ ನಡಹಳ್ಳಿ, ”ಎಲ್ಲರೂ ತಿನ್ನಬಹುದಾದ ವಸ್ತು ಅಂದರೆ ಅದು ಮೀನು” ಎಂದರು. ಇದಕ್ಕೆ ಉತ್ತರಿಸಿದ ಸ್ಪೀಕರ್ ಕಾಗೇರಿ, ”ಇಲ್ಲ ಇಲ್ಲ. ಈ ಬಗ್ಗೆ ಚರ್ಚೆಯಾಗಬೇಕು” ಎಂದರು. ಚರ್ಚೆಗೆ ಧ್ವನಿಗೂಡಿಸಿದ ಜಗದೀಶ ಶೆಟ್ಟರ್, ”ಮೀನನ್ನು ಸೊಪ್ಪಿನ ರೀತಿ ತಿನ್ನೋಕ್ಕಾಗುತ್ತಾ?” ಎಂದು ಪ್ರಶ್ನಿಸಿದರು.ಇದನ್ನೂ ಓದಿರಿಕೇಂದ್ರ ಬಜೆಟ್​| ಚುನಾವಣೆ ನಡೆಯುವ ಈ 4 ರಾಜ್ಯಗಳಿಗೆ ಮಾತ್ರ ಬಂಪರ್​ ಅನುದಾನ
ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ”ಮೀನಿಗೆ ಸಂಬಂಧ ಇಲ್ಲದವರೇ ಯಾಕೆ ಚರ್ಚೆ ಮಾಡ್ತೀರಿ? ಸ್ಪೀಕರ್​ಗೂ ಇದಕ್ಕೂ ಸಂಬಂಧವಿಲ್ಲ, ಶೆಟ್ಟರ್​ಗೂ ಸಂಬಂಧವಿಲ್ಲ” ಎಂದರು. ”ನೀವೇಲ್ಲ ಹೀಗೆ ಚರ್ಚೆ ಮಾಡಿಯೇ ಮೀನಿನ ರೇಟ್ ಜಾಸ್ತಿಯಾಗ್ತಿರೋದು” ಎಂದು ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದರು. ”ಅದನ್ನೇ ನಾನು ಹೇಳಿದ್ದು. ಮೀನು ಸಸ್ಯಾಹಾರವೇ ಅನ್ನೋ ಬಗ್ಗೆ ಚರ್ಚೆಯಾಗಬೇಕಿದೆ” ಎನ್ನುವ ಮೂಲಕ ಚರ್ಚೆಗೆ ಕಾಗೇರಿ ಅಂತ್ಯ ಹಾಡಿದರು.
ಮಾಜಿ ಸಿಎಂ ದಿ. ಧರ್ಮಸಿಂಗ್​‌ ಸಂಬಂಧಿ ಕೊಲೆ, 10 ದಿನದ ಬಳಿಕ ಪ್ರಕರಣ ಬಯಲು

ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

ಕೇಂದ್ರ ಬಜೆಟ್​| ಚುನಾವಣೆ ನಡೆಯುವ ಈ 4 ರಾಜ್ಯಗಳಿಗೆ ಮಾತ್ರ ಬಂಪರ್​ ಅನುದಾನ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:nineteen + 16 =
Remember me
