ಕಲಬುರಗಿ:ವಿಕೃತ ಕಾಮುಕನನ್ನು ಕೊಚ್ಚಿ ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಲ್ಲಿನಾಥ್, ಪತ್ನಿ ನಾಗಮ್ಮ, ಬಸವರಾಜ್, ಹನುಮಂತ ಮತ್ತು ಗಾಂಧಾರಿಬಾಯಿ ಎಂದು ಗುರುತಿಸಲಾಗಿದೆ. ಆಳಂದ ತಾಲ್ಲೂಕಿನ ಹಿರೋಳ್ಳಿ ಗ್ರಾಮದ ನಾಗಪ್ಪ ವಾಡೇದ್​ (40) ಎಂಬಾತನನ್ನು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಕರೆದೊಯ್ದು ಐವರು ಬರ್ಬರವಾಗಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಮಹಾರಾಷ್ಟ್ರದ ಸೊಲ್ಲಾಪುರದ ಅಕ್ಕಲಕೋಟೆಯ ತೋಟದಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆನ್ನಲಾಗಿದೆ. ಕೊಲೆಯಾದ ನಾಗಪ್ಪ‌ ವಾಡೇದ್ ಹೆಂಡತಿ ಆರು ತಿಂಗಳ ಹಿಂದೆ ಸಾವನ್ನಪ್ಪಿದ್ದಳು. ಬಳಿಕ ವಾಡೇದ್​ ವಿಕೃತ ಕಾಮಿಯಾಗಿದ್ದ. ಮತ್ತೊಂದು ಮದುವೆ ಮಾದುವುದಾಗಿ ಹುಡಿಗಿ ತೋರಿಸುತ್ತೇನೆಂದು ಆತನ ಸಂಬಂಧಿ ಮಹಿಳೆ ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿದ್ದಳು.
ಇದನ್ನೂ ಓದಿರಿ:ತುಂಡಾಗಿದ್ದ ಮರ್ಮಾಂಗವನ್ನು ಮರಳಿ ಪಡೆದ ವ್ಯಕ್ತಿ: ಮತ್ತೆ ಸಿಕ್ಕಿತು ಶಾಶ್ವತವಾಗಿ ಕಳೆದುಕೊಳ್ತಿದ್ದ ಸೆಕ್ಸ್​ ಲೈಫ್​​!

ಮಾರ್ಚ್ 29ರಂದು ಹುಡುಗಿಯನ್ನು ತೋರಿಸುವದಾಗಿ ಅಕ್ಕಲಕೋಟೆಗೆ ಗಾಂಧಾರಿಬಾಯಿ ಕರೆದುಕೊಂಡು ಹೋದಾಗ ಅಕ್ಕಲಕೋಟೆಯ ತೋಟದಲ್ಲಿ ಮೊದಲೇ ಹೊಂಚು ಹಾಕಿ ಕುಳಿತಿದ್ದ ಮಲ್ಲಿನಾಥ್, ಪತ್ನಿ ನಾಗಮ್ಮ, ಬಸವರಾಜ್ ಮತ್ತು ಹನುಮಂತ ಕತ್ತು ಕೊಯ್ದು ಕೊಲೆ ಮಾಡಿದ್ದರು.
ಕೊಲೆ ಬಳಿಕ ಮೃತದೇಹವನ್ನು ಚೀಲದಲ್ಲಿ ಹಾಕಿ ಬಾವಿಗೆ ಬಿಸಾಕೋಕೆ ಮುಂದಾಗಿದ್ದರು. ಆದರೆ, ಚೀಲದಲ್ಲಿ ಶವ ಹಿಡಿಯದೆ ಹೋದಾಗ ದೇಹವನ್ನು ಎರಡು ಭಾಗ ಮಾಡಿ ಮೂಟೆ ಕಟ್ಟಿ ಬಾವಿಗೆ ಎಸೆದಿದ್ದರು. ಇದೀಗ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಸಂಬಂಧ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಕಬ್ಜ ಶೂಟಿಂಗ್​ ವೇಳೆ ನಟ ಉಪೇಂದ್ರ ತಲೆಗೆ ಬಡಿಯಿತು ಸಹ ನಟ ಬೀಸಿದ ರಾಡ್..!

Web Exclusive | ತಾಯಿ ಮಡಿಲು ಸೇರುವುದೇ ಮರಿ ಹುಲಿ?: ಅರಣ್ಯದಲ್ಲಿ ಬೇರ್ಪಟ್ಟು, ಮೈಸೂರು ಮೃಗಾಲಯದಲ್ಲಿ ಆಶ್ರಯ

ಪತ್ನಿಯ ಕರೆ ಬಂದಿಲ್ಲ ಅಂತ ಮನೆಗೆ ಬೆಂಕಿಯಿಟ್ಟ ಪತಿ: ಆರು ಮಂದಿ ಸಜೀವ ದಹನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + eighteen =
Remember me
