ದಾವಣಗೆರೆ:ಬಟ್ಟೆ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಶಾಂತಿ-ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆ ನೀಡಿದ್ದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಆರೋಪದ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.ವಿನೋಬನಗರದ ಫಯಾಜ್ ಅಹ್ಮದ್, ಸೈಯದ್ ಅಪಾಪ್ ಅಹಮದ್ ಅಲಿಯಾಸ್ ಅಪು, ಇಮ್ತಿಯಾಜ್, ಮನ್ಸೂರ್, ಚಾಮರಾಜಪೇಟೆಯ ಖಾಲಿದ್ ಪೈಲ್ವಾನ್ ಬಂಧಿತರು.
ಹರಿಹರದ ಮತ್ತೊಂದು ಪ್ರಕರಣದಲ್ಲಿ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸೋಮವಾರ ತಿಳಿಸಿದ್ದಾರೆ.
ದಾವಣಗೆರೆಯ ಚೇತನಾ ಹೋಟೆಲ್ ರಸ್ತೆಯ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್, ವಿಜಯಲಕ್ಷ್ಮೀ ರಸ್ತೆ ಹತ್ತಿರದ ಮಲಬಾರ್ ಕಾಟನ್ಸ್ ಹಾಗೂ ಹರಿಹರದ ಹರಿಹರೇಶ್ವರ ದೇವಸ್ಥಾನ ಬಳಿಯ ನವೀನ್ ಕಟ್‌ಪೀಸ್ ಜವಳಿ ಅಂಗಡಿಗಳ ಎದುರು ಆರೋಪಿಗಳು ಹಿಂದೂಗಳ ಬಟ್ಟೆಯಂಗಡಿಗಳಲ್ಲಿ ಬಟ್ಟೆ ಖರೀದಿಸದಂತೆ ಮುಸ್ಲಿಂ ಮಹಿಳೆಯರಿಗೆ ನಿರ್ಬಂಧಿಸಿದ್ದರು. ಜತೆಗೆ ಸಾರ್ವಜನಿಕವಾಗಿ ಆತಂಕ ಮೂಡಿಸಿದ್ದರು. ಅಂಗಡಿ ಮಾಲೀಕರನ್ನು ಅವಾಚ್ಯವಾಗಿ ನಿಂದಿಸಿದ್ದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು.
ಇದನ್ನೂ ಓದಿ:ಗಂಡ ಹೆಂಡತಿಯಾಗಲು ಅಡ್ಡಿಯಾದ ಕರ್ನಾಟಕ-ಕೇರಳ ಬಾರ್ಡರ್!
ಅಕ್ರಮ ಕೂಟ, ಅದಕ್ಕೆ ವಿಧಿತವಾದ ದಂಡನೆ, ಕರೊನಾ ನಡುವೆಯೂ ಗುಂಪು ಸೇರಿರುವುದು, ವೈರತ್ವ ಬೆಳೆಸುವ ಹೇಳಿಕೆ ನೀಡಿರುವುದು, ಸಮಾನ ಮನಸ್ಕರು ಹೊಂದಿದ್ದ ಏಕೋದ್ದೇಶ, ಮತೀಯ ಸಾಮರಸ್ಯ ಕದಡಲು ಯತ್ನಿಸಿದ್ದರ ಆರೋಪಗಳಡಿ 143, 147, 269, 505(ಬಿ), 117, 153 (ಎ) ಹಾಗೂ ಭಾರತೀಯ ದಂಡ ಸಂಹಿತೆ 149ರ ಅಡಿಯಲ್ಲಿ ಕೆಟಿಜೆ ನಗರ, ಬಸವನಗರ, ಹರಿಹರ ನಗರ ಪೊಲಿಸ್​ ಠಾಣೆಗಳಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಹೇಳಿದ್ದಾರೆ.
ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ. ಇಂತಹ ವರ್ತನೆ ತೋರಿದರೆ ಸಹಿಸುವುದಿಲ್ಲ. ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ, ಪ್ರಚೋದನಾಕಾರಿ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಂದೇಶಗಳನ್ನು ಬಿತ್ತರಿಸುವ ವ್ಯಕ್ತಿಗಳ ಮೇಲೆ ನಿಗಾಯಿರಿಸಲು ಈಗಾಗಲೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಕಾರ್ಯ ನಿರ್ವಹಿಸುತ್ತಿದೆ. ಹಾಗಾಗಿ ಸಾರ್ವಜನಿಕರು ಇಂಥ ವಿಡಿಯೋಗಳನ್ನು ವೈರಲ್ ಮಾಡಬಾರದು. ಮತ್ತು ಹತ್ತಿರದ ಠಾಣೆಗೆ ತಿಳಿಸಬೇಕು. ವಿಡಿಯೋ ವೈರಲ್ ಮಾಡಿದ್ದಲ್ಲಿ ವಾಟ್ಸ್‌ಆ್ಯಪ್ ಅಡ್ಮಿನ್ ಹಾಗೂ ಸಂದೇಶ ರವಾನಿಸಿದವರ ಮೇಲೆ ಇಲಾಖೆಯು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕರೊನಾ ಸ್ಪ್ರೆಡರ್ಸ್​ ಎಂದು ಚುಡಾಯಿಸಿದ, ಪೊಲೀಸರಿಂದ ಅಂದರ್​ ಆದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − five =
Remember me
