ಬೆಂಗಳೂರು:ಭವಿಷ್ಯದಲ್ಲಿ ರಾಜ್ಯದ ಶೈಕ್ಷಣಿಕ ದಿಕ್ಕು, ದೆಸೆಯನ್ನೇ ಬದಲಿಸಬಹುದಾದ ಐದು ಮಹತ್ವದ ಘೋಷಣೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ ಉನ್ನತ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ನೂತನ ಶಿಕ್ಷಣ ನೀತಿ ಅನುಷ್ಠಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೊಸ ಡಿಜಿಟಲೀಕರಣ ನೀತಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪರಿಷತ್ತು, ಎಂಟನೇ ತರಗತಿಯಿಂದಲೇ ಕಡ್ಡಾಯ ಕರಿಯರ್ ಗೈಡೆನ್ಸ್, ಪ್ರಥಮ ಪದವಿ ತರಗತಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಹಾಗೂ ಸಂಶೋಧನೆ- ಅಭಿವೃದ್ಧಿ ನೀತಿ ಜಾರಿಗೊಳಿಸುವುದಾಗಿ ಘೋಷಿಸಿದರು. ಶಿಕ್ಷಣ ನೀತಿಗೆ ಪೂರಕವಾಗಿ ಈ ಪ್ರಕಟಣೆ ಮಾಡಿದ ಅವರು ತೀರ್ವನದ ಹಿಂದಿರುವ ಕಾರಣಗಳನ್ನು ವಿವರಿಸಿದರು.
ಕಳೆದ 5-6 ವರ್ಷಗಳಿಂದ ಚರ್ಚೆಯಾಗುತ್ತಿದ್ದ ಹೊಸ ಶಿಕ್ಷಣ ನೀತಿ ಕೊನೆಗೂ ಸೋಮವಾರ ಜಾರಿಯಾಗಿದೆ. ಈ ಮೂಲಕ ಕರ್ನಾಟಕವು ದೇಶದಲ್ಲಿ ಹೊಸ ನೀತಿ ಅನುಷ್ಠಾನ ಆರಂಭಿಸಿದ ಮೊದಲ ರಾಜ್ಯ ಎನಿಸಿಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಚುವಲ್ ರೂಪದಲ್ಲಿ ಪಾಲ್ಗೊಂಡು 2021-22ನೇ ಸಾಲಿನ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಿದರು. ‘ರಾಷ್ಟ್ರೀಯ ಶಿಕ್ಷಣ ನೀತಿ ಕರ್ನಾಟಕ ಸಾಕಷ್ಟು ಮುಂದಿದೆ. ಈ ನೀತಿಯು ಹೊಸ ಜ್ಞಾನಾಧಾರಿತ ವ್ಯವಸ್ಥೆಯನ್ನು ರಚನೆ ಮಾಡಲಿದೆ. ಜತೆಗೆ ಅನುಷ್ಠಾನದಲ್ಲಿರುವ ಹಲವು ಸವಾಲುಗಳಿಗೆ ಸೂಕ್ಷ್ಮ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಶಿಕ್ಷಣದಲ್ಲಿರುವ ಜಡ್ಡುಗಟ್ಟಿದ ವ್ಯವಸ್ಥೆ ಮತ್ತು ನೀತಿಗೆ ಎನ್​ಇಪಿಯಿಂದ ಮುಕ್ತಿ ಸಿಗಲಿದೆ. ಶಿಕ್ಷಣಕ್ಕೆ ಇಂದು ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು, ಮುಂದಿನ ಪೀಳಿಗೆಗೂ ಇದು ಸ್ವಾತಂತ್ರ್ಯವೇ ಆಗಲಿದೆ. ಎನ್​ಇಪಿ ಯಶಸ್ವಿಯಾದಲ್ಲಿ ಪ್ರತಿವರ್ಷ ಆ. 23 ಶಿಕ್ಷಣ ದಿನವಾಗಿ ಆಚರಿಸುವ ದಿನ ಬರಲಿದೆ ಎಂದು ಹೇಳಿದರು.
ಬಹಳಷ್ಟು ಜನ ದೇಶ ಆಳಿದ್ದಾರೆ, ಆದರೆ ಆಮೂಲಾಗ್ರ ಬದಲಾವಣೆ ಮಾಡಲು ಇನ್ನೊಂದು ದಿಕ್ಕಿಗೆ ತೆಗೆದುಕೊಂಡು ಹೋಗುವ ಸಾಹಸ ಮಾಡಿಲ್ಲ. ಈ ದೇಶವನ್ನು 21ನೇ ಶತಮಾನಕ್ಕೆ ತಯಾರು ಮಾಡಬೇಕು, ಭಾರತ ವಿಶ್ವಮಾನ್ಯತೆ ಪಡೆದಿರುವ ವಿಶ್ವ ನಾಯಕನ ಸ್ಥಾನ ಪಡೆದುಕೊಳ್ಳಬೇಕೆಂದರೆ ಬದಲಾವಣೆ ಅವಶ್ಯಕತೆ ಇದೆ ಎಂಬ ದೂರದೃಷ್ಟಿಯ ಫಲವೇ ಹೊಸ ಶಿಕ್ಷಣ ನೀತಿ. ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿ ಹೊಂದಿದ ನಾಯಕರಾಗಿದ್ದು, ಶಿಕ್ಷಣ ವ್ಯವಸ್ಥೆಯ ಮೂಲಭೂತ ಬದಲಾವಣೆಗೆ ಎನ್​ಇಪಿ ಸಾಕ್ಷಿಯಾಗಲಿದೆ ಎಂದು ಹೇಳಿದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಐದು ವರ್ಷದ ಸುದೀರ್ಘ ಸಮಾಲೋಚನೆ, ಎಲ್ಲರಿಂದ ಮಾಹಿತಿ ಪಡೆದು ಹೊಸ ನೀತಿ ರಚಿಸಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯ ಜತೆಗೆ ಬೋಧನಾ ವಿಧಾನದಲ್ಲೂ ಬದಲಾಗಬೇಕು. ಉಪನ್ಯಾಸಕರು ಬದಲಾವಣೆಗೆ ಒಗ್ಗಿಕೊಳ್ಳಬೇಕು. ಸರ್ಕಾರವೂ ಇದಕ್ಕೆ ಬೇಕಾದ ಎಲ್ಲ ಸೌಲಭ್ಯವನ್ನು ಒದಗಿಸಲಿದೆ ಎಂದರು.
ಉನ್ನತ ಶಿಕ್ಷಣ ಇಲಾಖೆಯ ಪ್ರಭಾರ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ತಿಮ್ಮೇಗೌಡ ಇದ್ದರು. ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿರುವ ಡಾ.ಕೆ.ಕಸ್ತೂರಿ ರಂಗನ್, ಪೊ›.ಎಂ.ಕೆ.ಶ್ರೀಧರ್, ಡಾ. ತೇಜಸ್ವಿ ಕಟ್ಟಿಮನಿ, ಪೊ›.ಅನುರಾಗ್ ಬೇಹರ್ ಅವರನ್ನು ಸನ್ಮಾನಿಸಲಾಯಿತು.
ರಾಜ್ಯದ ಪ್ರತಿಯೊಬ್ಬನೂ ಜ್ಞಾನವಂತನಾಗಿರಬೇಕು. ಹೊಸ ಶಿಕ್ಷಣ ನೀತಿ ವಿದ್ಯಾರ್ಥಿಯ ಕ್ರಿಯಾಶೀಲತೆಗೆ ಹೆಚ್ಚು ಅವಕಾಶ ಕೊಡಲಿದೆ. ಉನ್ನತ ಶಿಕ್ಷಣದಲ್ಲಿ ಸ್ವಾತಂತ್ರ್ಯ ಸಿಗಲಿದೆ. ಶಿಕ್ಷಣ ನೀತಿಗೆ ಪೂರಕವಾಗಿ ಡಿಜಿಟಲೀಕರಣ ಹಾಗೂ ಆರ್​ಆಂಡ್​ಡಿ ಪಾಲಿಸಿ ತರಲಾಗುತ್ತದೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಗುಣಮಟ್ಟದ ಶಿಕ್ಷಣ ನೀಡಲು ಅಡ್ಡಿಯಾಗುತ್ತಿರುವ ಲೋಪದೋಷಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪರಿಹಾರ ಸಿಗಲಿದೆ.
|ಡಾ.ಸಿ.ಎನ್.ಅಶ್ವತ್ಥನಾರಾಯಣಉನ್ನತ ಶಿಕ್ಷಣ ಸಚಿವ
ಈವರೆಗೆ ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಿಲ್ಲ. ಎನ್​ಇಪಿಯಲ್ಲಿ ಮಕ್ಕಳ ಭಾವನೆ ಅರ್ಥೈಸಿಕೊಂಡು, ಮಾತೃಭಾಷಾ ಶಿಕ್ಷಣಕ್ಕೆ ಆದ್ಯತೆ ನೀಡಿ, ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಿದ್ದೇವೆ.
|ಬಿ.ಸಿ. ನಾಗೇಶ್ಶಿಕ್ಷಣ ಸಚಿವ
ಜ್ಞಾನಾಧಾರಿತ ಸದೃಢ ಸಮಾಜ ನಿರ್ವಣಕ್ಕೆ ಎನ್​ಇಪಿ ಸಹಕಾರಿಯಾಗಲಿದೆ. ವಿಶ್ವವಿದ್ಯಾಲಯ ವ್ಯವಸ್ಥೆಯಲ್ಲೂ ಒಂದಷ್ಟು ಬದಲಾವಣೆ ಬರಲಿದೆ. ಭವಿಷ್ಯದ ಶೈಕ್ಷಣಿಕ ಆದ್ಯತೆ ಆಧರಿಸಿ ಈ ನೀತಿ ರೂಪಿಸಲಾಗಿದೆ.
|ಡಾ. ಕಸ್ತೂರಿ ರಂಗನ್ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಅಧ್ಯಕ್ಷ
ಸಹಾಯವಾಣಿಗೆ ಚಾಲನೆ:ಕಾಲೇಜು ಶಿಕ್ಷಣ ಇಲಾಖೆ ರೂಪಿಸಿರುವ ಮಹತ್ವಾಕಾಂಕ್ಷಿ ಯೋಜನೆಯಾದ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಎಂಬ ವಿದ್ಯಾರ್ಥಿಗಳ ದಾಖಲಾತಿ ವ್ಯವಸ್ಥೆಗೂ ಮುಖ್ಯಮಂತ್ರಿ ಚಾಲನೆ ನೀಡಿದರು. ರಾಷ್ಟೀಯ ಶಿಕ್ಷಣ ನೀತಿಯ ಜಾರಿ ಸಂದರ್ಭದಲ್ಲಿ ಯಾವುದೇ ಗೊಂದಲ, ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ರೂಪಿಸಿರುವ ಶಿಕ್ಷಣ ನೀತಿಯ ವೆಬ್ಸೈಟ್ ಮತ್ತು ಸಹಾಯವಾಣಿಗೆ ಸಿಎಂ ಚಾಲನೆ ನೀಡಿದರು. 080-24486666 ಸಂಖ್ಯೆಯನ್ನು ಎಲ್ಲರೂ ಸಂಪರ್ಕ ಮಾಡಬಹುದು.
ಶೀಘ್ರ ಪ್ರಾಥಮಿಕ, ಪ್ರೌಢ ಹಂತ:ಹೊಸ ಶಿಕ್ಷಣ ನೀತಿಯನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲೂ ಅಳವಡಿಸಿಕೊಳ್ಳುವ ವಿಚಾರವನ್ನು ಸಿಎಂ ಬಹಿರಂಗಪಡಿಸಿದರು. ಕಲಬುರಗಿಯಲ್ಲಿ ಈ ಪ್ರಕ್ರಿಯೆಗೆ ಚಾಲನೆ ಕೊಡಲಾಗುತ್ತದೆ. ಉನ್ನತ ಶಿಕ್ಷಣದಲ್ಲಿ ಅನುಷ್ಠಾನಕ್ಕೆ ಟಾಸ್ಕ್ ಫೋರ್ಸ್ ಇರುವಂತೆ ಪ್ರಾಥಮಿಕ, ಪ್ರೌಢ ಹಂತಕ್ಕೂ ಒಂದು ಸಮಿತಿ ರಚಿಸಿ ಸಾಧಕ ಬಾಧಕ ಅವಲೋಕಿಸಿ ಅನುಷ್ಠಾನ ಮಾಡಲು ನಿರ್ಧರಿಸಲಾಗಿದೆ ಎಂದರು.
ದೇಶಾದ್ಯಂತ ನಡೆಯುತ್ತಾ ಜಾತಿ ಆಧಾರಿತ ಜನಗಣತಿ?; ಪ್ರಧಾನಿಯನ್ನು ಭೇಟಿ ಆಗಿ ಚರ್ಚಿಸಿದರು 11 ಪಕ್ಷಗಳ ಮುಖಂಡರು

ಫ್ರೀ ಕೊಟ್ರೂ ಊಟ-ತಿಂಡಿ-ನೀರು ಏನೂ ಬೇಡ ಎಂದು ಹೇಳಿ ಸಿಕ್ಕಿಬಿದ್ದ ಸ್ಮಗ್ಲರ್; ಹೊಟ್ಟೆಯಲ್ಲಿತ್ತು 11 ಕೋಟಿ ರೂ. ಮೌಲ್ಯದ ಡ್ರಗ್ಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
