ಬೆಂಗಳೂರು:ವೀರಲೋಕ ಬುಕ್ಸ್​ನ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಐದು ನೂತನ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ‘ಕವಚ’ ಕಾದಂಬರಿ ವೀರಲೋಕದ ನೂರನೇ ಕೃತಿಯಾಗಿದ್ದು, ಡಾ. ಎಂ.ವೆಂಕಟಸ್ವಾಮಿಯವರ ‘ಜಗತ್ತಿನ ಭೀಕರ ಯುದ್ಧಗಳು’, ನೌಶಾದ್ ಜನ್ನತ್ ಅವರ ‘ಬೇವಾಚ್’, ಸಂದ್ಯಾರಾಣಿಯವರ ‘ನಾತಿಚರಾಮಿ’, ಡಾ. ಶೈಲೇಶ್ ಕುಮಾರ್ ಅವರ ‘ಸುಪ್ತ ಸಾಗರದಾಚೆ’ ಕೃತಿಗಳು ಬಿಡುಗಡೆಯಾದವು.
ನಗರದ ಖಾಸಗಿ ಹೊಟೇಲ್​ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿದರು. ವೀರಲೋಕ ಪ್ರಕಾಶನ ಸಂಸ್ಥೆಯು ಅಜ್ಞಾತ ಓದುಗರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎಲ್ಲೋ ತಮ್ಮ ಪಾಡಿಗೆ ತಾವು ಬರೆದುಕೊಂಡಿದ್ದು, ಪ್ರಕಾಶಕರು ಸಿಗದೆ ಪರದಾಡುತ್ತಿದ್ದ ಅನೇಕ ಉದಯೋನ್ಮುಖ ಬರಹಗಾರರಿಗೆ ವೀರಲೋಕ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎಂದು ಗಣ್ಯರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಮಲ್ಲೇಪುರಂ ಜಿ. ವೆಂಕಟೇಶ್, ಮಂಡ್ಯ ರಮೇಶ್, ನಿರ್ದೇಶಕ ಮಂಸೋರೆ, ಮಾಸ್ತಿ, ಮಹೇಶ ಅರಬಳ್ಳಿ, ಭಾರತಿ ಬಿ.ವಿ, ಪೂರ್ಣಿಮಾ ಮಾಳಗಿಮನೆ, ಶೋಭಾ ರಾವ್, ನವೀನ್ ಸಾಗರ್, ಜೋಗಿ, ಸಂತೋಷ್ ಹಾನಗಲ್, ದಿವ್ಯಾ ಆಲೂರು, ಹರಿವು ರತೀಶ್, ಕಾನ್ಕೇವ್ ನಂದೀಶ, ಪ್ರಕಾಶ್ ಕಂಬತ್ತಳ್ಳಿ, ಷಡಕ್ಷರಿ, ವಿ ನಾಗೇಂದ್ರ ಪ್ರಸಾದ, ವೀರಲೋಕದ ವೀರಕಪುತ್ರ ಶ್ರೀನಿವಾಸ್ ಮತ್ತಿತ್ತರು ಉಪಸ್ತಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
