ಬೆಂಗಳೂರು:ಮೂರು ಮಕ್ಕಳ ವೃದ್ಧತಾಯಿ ಒಂಟಿಯಾಗಿ ವಾಸವಿದ್ದು, ನಿನ್ನೆ ಕೋಣೆಯಲ್ಲಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವಿಶೇಷ ತಂಡಗಳನ್ನು ಪೊಲೀಸರು ರಚಿಸಿದ್ದಾರೆ. ಮಹಾಲಕ್ಷ್ಮೀ ಬಡಾವಣೆಯ ನಾಗಪುರದಲ್ಲಿ ಈ ಕೊಲೆ ನಡೆದಿತ್ತು.
ಮಹಾಲಕ್ಷ್ಮೀ ಬಡಾವಣೆ ನಿವಾಸಿ ಕಮಲಮ್ಮ (82) ಎಂಬವರನ್ನು ಆರೋಪಿಗಳು ಶನಿವಾರ ರಾತ್ರಿ ಕೈ, ಕಾಲು ಕಟ್ಟಿ ಹಾಕಿ ಹತ್ಯೆಗೈದು, ಮೈಮೇಲಿದ್ದ ಹಾಗೂ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಮಹತ್ವದ ಸುಳಿವು ಸಿಕ್ಕಿದ್ದು, ಆರೋಪಿಗಳ ಮಾಹಿತಿ ಪತ್ತೆಯಾಗಿದೆ. ಘಟನಾ ಸ್ಥಳದ ಸಮೀಪದಲ್ಲಿರುವ ಸಿಸಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲಿಸಿದಾಗ ಕೆಲವೊಂದು ಮಾಹಿತಿ ಸಿಕ್ಕಿದೆ. ಅದರ ಆಧಾರದ ಮೇಲೆ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಪತಿಗಿಂತ ಪತ್ನಿಗೇ ಹೆಚ್ಚು ಸಂಪಾದನೆ; ಜೀವನಾಂಶ ನೀಡಲಾಗದು ಎಂಬುದನ್ನು ಎತ್ತಿ ಹಿಡಿದ ಕೋರ್ಟ್
ಕಮಲಮ್ಮ ಅವರಿಗೆ ಮೂವರು ಮಕ್ಕಳು. ಈ ಪೈಕಿ ಮಗ ಗುರುಪ್ರಸಾದ್ ವಿವಾಹವಾಗಿ ಪತ್ನಿ ಮತ್ತು ಮಕ್ಕಳೊಂದಿಗೆ ವೈಟ್‌ಫೀಲ್ಡ್​​ನಲ್ಲಿ ನೆಲೆಸಿದ್ದಾರೆ. ಇಬ್ಬರು ಪುತ್ರಿಯರು ಮದುವೆಯಾಗಿ ಬೇರೆಡೆ ವಾಸವಾಗಿದ್ದಾರೆ. ಕಮಲಮ್ಮ ಅವರ ಪತಿ 2022ರ ಅಕ್ಟೋಬರ್‌ನಲ್ಲಿ ಮೃತಪಟ್ಟಿದ್ದರು. ನಂತರ ಕಮಲಮ್ಮ ಅವರೊಬ್ಬರೇ ನಾಗಪುರದ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಕೊನೆಯ ಬಾರಿಗೆ ಕಮಲಮ್ಮ ಅವರನ್ನು ನೆರೆಹೊರೆಯವರು ನೋಡಿದ್ದರು. ಬಳಿಕ ರಾತ್ರಿ 7 ಗಂಟೆಯಾದರೂ ಕಮಲಮ್ಮ ಅವರ ಮನೆಯಲ್ಲಿ ಲೈಟ್ ಹಾಕದೆ ಕತ್ತಲಿನಲ್ಲಿ ಇರುವುದನ್ನು ಗಮನಿಸಿ ಅನುಮಾನಗೊಂಡ ನೆರೆಹೊರೆಯವರು ಮನೆಗೆ ಹೋಗಿ ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮಲಗುವ ಕೋಣೆಯಲ್ಲಿ ಕಮಲಮ್ಮ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಅವರ ಕೈ ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ನಂತರ ಅವರ ಮೈ ಮೇಲಿದ್ದ ಚಿನ್ನದ ಸರ ಹಾಗೂ ಬಳೆಗಳು ಸೇರಿ ಸುಮಾರು 60 ಗ್ರಾಂ ಆಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:VIDEO | ಸಿನಿಮೀಯ ಅಪಘಾತ: ವಿಡಿಯೋ ಮಾಡುತ್ತಿದ್ದಾಗಲೇ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು
ಹಂತಕರು ಬಲ ಪ್ರಯೋಗಿಸಿ ಮನೆಯೊಳಗೆ ಹೋಗಿಲ್ಲ. ಬದಲಿಗೆ ಕಮಲಮ್ಮ ಅವರಿಂದಲೇ ಬಾಗಿಲು ತೆಗೆಸಿಕೊಂಡು ಒಳ ಹೋಗಿ ಕೃತ್ಯ ಎಸಗಿರುವ ಶಂಕೆ ಇದೆ. ಕಮಲಮ್ಮ ಒಬ್ಬರೇ ಮನೆಯಲ್ಲಿ ವಾಸವಾಗಿರುವ ಸಂಗತಿ ತಿಳಿದಿದ್ದ ಪರಿಚಿತ ವ್ಯಕ್ತಿಗಳೇ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ. ಮನೆಯ ಸುತ್ತಮುತ್ತ ಇರುವ ಸಿ.ಸಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿ ಆಧರಿಸಿ ತನಿಖೆ ಮುಂದುವರಿಸಿದ್ದೇವೆ. ಜತೆಗೆ, ಕಮಲಮ್ಮ ಮೊಬೈಲ್ ಕರೆಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದೇವೆ. ಕಮಲಮ್ಮ ಅವರ ಮನೆಗೆಲಸದಾಕೆಯ ವಿಚಾರಣೆ ನಡೆಸಿದ್ದೇವೆ. ಹಂತಕರ ಬಗ್ಗೆ ಮಹತ್ವದ ಸುಳಿವು ಸಿಕ್ಕಿದ್ದು, ಆರೋಪಿಗಳನ್ನು ಸದ್ಯದಲ್ಲೇ ಬಂಧಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + one =
Remember me
