ಬೆಂಗಳೂರು:ಪದವಿ ವ್ಯಾಸಂಗ ಮುಗಿಸಿದ ಮಕ್ಕಳು ಕೆಲಸಕ್ಕೆ ಸೇರಿ ಸಂಪಾದನೆಗೆ ತೊಡಗಿ ಮನೆಯ ಜವಾಬ್ದಾರಿ ಹೊರುತ್ತಾರೆಂಬ ಪಾಲಕರ ಕನಸಿಗೆ ಕೊಳ್ಳಿ ಇಟ್ಟು ಹೈಟೆಕ್ ಡ್ರಗ್ಸ್ ಪೆಡ್ಲರ್‌ಗಳಾಗಿದ್ದ ಐವರು ಪದವೀಧರ ವಿದ್ಯಾರ್ಥಿಗಳೀಗ ಪೊಲೀಸರ ಅತಿಥಿಗಳಾಗಿ ಕಂಬಿ ಎಣಿಸುತ್ತಿದ್ದಾರೆ! ವಿದೇಶದಿಂದ ಹೈಡ್ರೋ ಗಾಂಜಾ ಬೀಜ ತರಿಸಿಕೊಂಡು ಮನೆಯ ಟೆರೆಸ್ ಮೇಲಿನ ಹೂಕುಂಡದಲ್ಲಿ ಬೆಳೆಸುತ್ತಿದ್ದರೆಂಬ ಸಂಗತಿ ತನಿಖೆಯಲ್ಲಿ ಬಯಲಾಗಿದೆ.
ಓದುವ ಕಾಲೇಜು ಡ್ರಗ್ಸ್ ಮಾರ್ಕೆಟ್
2 ಸಾವಿರ ರೂ. ಗೆ 0.01 ಗ್ರಾಂ. ಎಲ್‌ಎಸ್‌ಡಿ ಸ್ಟ್ರಿಪ್ಸ್ ಖರೀದಿಸುತ್ತಿದ್ದ. ಅಂಚೆ ಚೀಟಿ ರೂಪದಲ್ಲಿ ವಿದೇಶದಿಂದ ಕೊರಿಯರ್ ಮೂಲಕ ಬರುತ್ತಿತ್ತು. 1 ಸ್ಟ್ಯಾಂಪ್‌ನಲ್ಲಿ 1 ಗ್ರಾಂ ತೂಕದ 100 ಎಲ್‌ಎಸ್‌ಡಿ ಸ್ಟ್ರಿಪ್ಸ್‌ಗಳಿವೆ. 3 ರಿಂದ 5 ಸಾವಿರ ರೂ. ಗೆ ಮಾರಾಟ ಮಾಡುತ್ತಿದ್ದ. ಈತ ಓದುತ್ತಿದ್ದ ಕಾಲೇಜನ್ನು ಡ್ರಗ್ಸ್ ಮಾರಾಟಕ್ಕೆ ಮಾರ್ಕೆಟ್ ಮಾಡಿಕೊಂಡಿದ್ದ.
ಜೆ.ಪಿ.ನಗರದ ಅತಿಥ್ಯಾ ವೋರಾ (23), ಜಯನಗರದ ಪ್ರಶಾಂತ್ (21), ಪುನೀತ್ ಕೊಠಾರಿ (22), ಬನಶಂಕರಿ ನಿವಾಸಿ ನಚಿಕೇತ್ (19) ಹಾಗೂ ನಾಗರಾಜ್‌ನನ್ನು (22) ಸೆ.4ರಂದು ತಿಲಕ್‌ನಗರ ಪೊಲೀಸರು ಬಂಧಿಸಿದ್ದಾರೆ. ಕೋರ್ಟ್ ಅನುಮತಿ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವು ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಪ್ರತಿಷ್ಠಿತ ಕಾಲೇಜುಗಳಲ್ಲಿ ಇಂಜಿನಿಯರಿಂಗ್, ಬಿ.ಕಾಂ ಹಾಗೂ ಬಿಸಿಎ ವ್ಯಾಸಂಗ ಮಾಡುತ್ತಿದ್ದರು. ಡಾರ್ಕ್‌ವೆಬ್ ಬಳಸಿ ಜರ್ಮನ್‌ನಿಂದ ಹೈಡ್ರೋ ಗಾಂಜಾ ಬೀಜ ಖರೀದಿಸಿ ತರಿಸಿದ್ದರು. ಮನೆಯ ಟೆರೆಸ್ ಮೇಲೆ ಹೂಕುಂಡದಲ್ಲಿ ಬೆಳೆಸಿ, ಡೆಲಿವರಿ ಬಾಯ್‌ಗಳ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಟೆಕ್ಕಿಗಳಿಗೆ ಪೂರೈಕೆ ಮಾಡುತ್ತಿದ್ದರು. ಎಂಡಿಎಂಎ ಮಾತ್ರೆ, ಎಲ್‌ಎಸ್‌ಡಿ ಸ್ಟ್ರಿಪ್ಸ್ ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನೂ ಕೂಡ ವಿದೇಶದಿಂದ ಕಳ್ಳ ಸಾಗಾಣೆ ಮಾಡಿಕೊಂಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ತಿಳಿಸಿದ್ದಾರೆ.
ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಓದುತ್ತಿರುವ ಅತಿಥ್ಯಾವೋರಾ, ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಬಗ್ಗೆ ಅಪಾರವಾದ ಜ್ಞಾನಹೊಂದಿದ್ದು, ಟಾರ್ ಬ್ರೌಸರ್ ಮೂಲಕ ಡಾರ್ಕ್‌ವೆಬ್ ಬಳಸುವುದನ್ನು ಕಲಿತಿದ್ದ. ಈತನು ಕಾಲೇಜಿನಲ್ಲಿ ಓದುವಾಗ ಪ್ರಶಾಂತ್, ಪುನೀತ್ ಕೊಠಾರಿ, ನಾಗರಾಜ್ ರಾವ್ ಹಾಗೂ ನಚಿಕೇತ್ ಸ್ನೇಹಿತರಾಗಿದ್ದರು. ‘ನಗರದಲ್ಲಿ ಡ್ರಗ್ಸ್‌ಗೆ ಹೆಚ್ಚಿನ ಬೇಡಿಕೆ ಇದೆ. ಪೂರೈಕೆ ಮಾಡಿದರೆ ಸುಲಭವಾಗಿ ಹಣ ಸಂಪಾದಿಸಬಹುದು. ಈ ಹಣದಲ್ಲಿ ಐಷಾರಾಮಿ ಜೀವನ ನಡೆಸಬಹುದು’ ಎಂಬ ಪ್ಲಾನ್ ಅತಿಥ್ಯಾ ತನ್ನ ಸ್ನೇಹಿತರ ಮುಂದಿಟ್ಟಿದ್ದ. ಆತನ ಮಾತಿಗೆ ಎಲ್ಲರು ಒಪ್ಪಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ಕಲಿತಿದ್ದಆನ್‌ಲೈನ್ ಮೂಲಕ ಹೈಡ್ರೊ ಗಾಂಜಾ ಬೆಳೆಯುವುದನ್ನು ಕಲಿತಿದ್ದ. 8 ರಿಂದ 10 ಕುಂಡಗಳಲ್ಲಿ ಬೀಜ ಹಾಕುತ್ತಿದ್ದರು. ಗೊಬ್ಬರ ಹಾಕಿ, 4 ರಿಂದ 5 ಅಡಿ ಎತ್ತರ ಬೆಳೆಸಿ ಕಟಾವು ಮಾಡುತ್ತಿದ್ದರು. ಎರಡು ತಿಂಗಳಿಗೆ ಗಾಂಜಾ ಬೆಳೆ ಕೈಗೆ ಸಿಗುತ್ತಿತ್ತು. ಕಟಾವು ಮಾಡಿದ ಹೈಡ್ರೋ ಗಾಂಜಾವನ್ನು ಒಣಗಿಸಿ, ಪ್ರಶಾಂತ್, ನಾಗರಾಜ್ ರಾವ್, ಪುನೀತ್, ನಚೀಕೇತ್‌ಗೆ ಕಡಿಮೆ ಬೆಲೆಗೆ ಮಾರುತ್ತಿದ್ದ. ಇವರೆಲ್ಲ ಖಾಯಂ ಗ್ರಾಹಕರನ್ನು ಮಾಡಿಕೊಂಡಿದ್ದು, ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಡ್ರಗ್ಸ್ ಸೇವನೆಗೆ ಬೆಣ್ಣೆ
ಅತಿಥ್ಯವೋರಾ ಜೆ.ಪಿ.ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಪ್ಲಾಟ್‌ನಲ್ಲಿ ಬಾಡಿಗೆಗೆ ನೆಲೆಸಿದ್ದು, ಇದೇ ಆತನ ಡ್ರಗ್ಸ್ ಚಟುವಟಿಕೆಯ ತಾಣವಾಗಿತ್ತು. ಈ ಮನೆಯಲ್ಲೇ ಪಾರ್ಟಿ ಮಾಡುತ್ತಿದ್ದರು. ಇದಕ್ಕೆ ‘ಸೆಷನ್’ಗೆ ಸೇರೋಣ ಎಂಬ ಕೋಡ್‌ವರ್ಡ್‌ನಿಂದ ವ್ಯಾಟ್ಸ್‌ಆ್ಯಪ್‌ನಲ್ಲಿ ಚರ್ಚಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ದಂಧೆಯಲ್ಲಿ ತೊಡಗಿದ್ದು, ಪಿಯುಸಿ ಓದುವಾಗ ಡ್ರಗ್ಸ್ ವ್ಯಸನಿಗಳಾಗಿದ್ದಾರೆ. 23 ವರ್ಷ ವಯಸ್ಸಿನ ನಾಗರಾಜ್ ರಾವ್‌ಗೆ ಶ್ವಾಸಕೋಶ ಸಮಸ್ಯೆ ಇದೆ. ಹೊಗೆರೂಪದಲ್ಲಿ ಡ್ರಗ್ಸ್ ಸೇವಿಸಲೂ ಆಗುವುದಿಲ್ಲ. ಹೀಗಾಗಿ ಬೆಣ್ಣೆಯಲ್ಲಿ ಡ್ರಗ್ಸ್ ಇಟ್ಟು ಸೇವನೆ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
