ಬಿಹಾರ: ಐದು ವರ್ಷದ ಬಾಲಕಿಯನ್ನು ಚಾಕಲೇಟ್ ಕೊಡಿಸುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದನೆನ್ನಲಾದ ವ್ಯಕ್ತಿಯೊಬ್ಬನಿಗೆ ಕೇವಲ ಐದು ಬಸ್ಕಿಯ ಶಿಕ್ಷೆ ನೀಡಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಬಿಹಾರದ ನೆವಾಡ ಜಿಲ್ಲೆಯಲ್ಲಿ ಸಮುದಾಯವೊಂದರ ಮುಖಂಡರು ಅತ್ಯಾಚಾರ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸದೇ ಪ್ರಕರಣವನ್ನು ಅಲ್ಲೇ ಮುಚ್ಚಿ ಹಾಕಲು ಯತ್ನಿಸಿದ್ದಾರೆ.
ಐದು ವರ್ಷದ ಬಾಲಕಿಯನ್ನು ಚಾಕಲೇಟ್  ಕೊಡುವುದಾಗಿ ಹೇಳಿ ಆರೋಪಿ ತನ್ನ ಕೋಳಿ ಫಾರ್ಮ್‌ಗೆ ಕರೆದುಕೊಂಡು ಹೋಗಿದ್ದ. ಇದನ್ನು ಕೆಲವರು ಗಮನಿಸಿ ಆತನನ್ನು ಪಂಚಾಯಿತಿ ಮುಂದೆ ತಂದು ಕೂರಿಸಿದ್ದರು. ಪಂಚಾಯಿತಿ ಮುಖಂಡರು ಬಾಲಕಿಯನ್ನು ಮತ್ತು ಅವಳ ಪಾಲಕರನ್ನು ವಿಚಾರಿಸಲಿಲ್ಲ. ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸುವ ಕೆಲಸವನ್ನು ಕೂಡ ಮಾಡಲಿಲ್ಲ. ಆತ ಅತ್ಯಾಚಾರವೆಸಗಿಲ್ಲ,  ಬಾಲಕಿಯನ್ನು ಕರೆದೊಯ್ದಿದ್ದಷ್ಟೇ ಎಂದು ನಿರ್ಧರಿಸಿದ ಪಂಚಾಯಿತಿ ಮುಖಂಡರು, ಐದು ಬಸ್ಕಿ ಹೊಡೆಯುವ ಸಣ್ಣ ಶಿಕ್ಷೆ ವಿಧಿಸಿ ಪ್ರಕರಣವನ್ನು ಅಂತ್ಯಗೊಳಿಸಿದ್ದಾರೆ. ಪಂಚಾಯಿತಿ ಸಭೆಯಲ್ಲಿ ಅತ್ಯಾಚಾರ ಆರೋಪಿ ಬಸ್ಕಿ ಹೊಡೆಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
Sign in to your account
Please enter an answer in digits:3 × 4 =
Remember me
