ಬೆಂಗಳೂರು :ವಿದ್ಯುತ್ ಬಿಲ್ ಸ್ಥಿರ ಶುಲ್ಕ ರಿಯಾಯಿತಿಯನ್ನು ಹೊಟೇಲ್ ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳಿಗೆ ವಿಸ್ತರಿಸಬೇಕು. ಈಗಾಗಲೇ ಹೆಚ್ಚಳ ಮಾಡಿರುವ ವಿದ್ಯುತ್ ದರವನ್ನು ವಾಪಸ್ ಪಡೆಯಬೇಕು. ಇನ್ನೂ ಎರಡು ಮೂರು ವರ್ಷ ದರ ಹೆಚ್ಚಿಸಬಾರದು ಎಂದು ಎಫ್​​ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಶೇಕಡ 5 ರಷ್ಡು ಆಸ್ತಿ ತೆರಿಗೆ ವಿನಾಯಿತಿಯನ್ನು ಜೂನ್ ಅಂತ್ಯದವರೆಗೂ ಸರ್ಕಾರ ವಿಸ್ತರಿಸಿದೆ. ವಾಣಿಜ್ಯ ತೆರಿಗೆ ಪಾವತಿ ಅವಧಿಯನ್ನೂ ಜೂನ್ ಅಂತ್ಯದವರೆಗೆ ವಿಸ್ತರಿಸಿದೆ. ಸರ್ಕಾರದ ಈ ನಿರ್ಧಾರಗಳನ್ನು ಎಫ್​​ಕೆಸಿಸಿಐ ಸ್ವಾಗತಿಸಿದೆ ಎಂದಿರುವ ಸುಂದರ್​, ವಿದ್ಯುತ್ ತೆರಿಗೆಯನ್ನು ಶೇಕಡ 9 ರಿಂದ 3 ಕ್ಕೆ ಇಳಿಸುವಂತೆ ಮತ್ತು ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಶೇಕಡ 15 ರಷ್ಟು ಕಡಿಮೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಆರೋಗ್ಯ ಕ್ಷೇತ್ರಕ್ಕೆ ₹8ಕೋಟಿ ಸಿಎಸ್‌ಆರ್ ನಿಧಿ: ಜಿಲ್ಲೆಯ ವಿವಿಧ ಪ್ರಾಧಿಕಾರಗಳ ಕೊಡುಗೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಾಹಿತಿ
ಲಾಕ್ಡೌನ್ ಸಮಯದಲ್ಲಿ ವಾಣಿಜ್ಯ ಚಟುವಟಿಕೆ ಸ್ಥಗಿತಗೊಂಡಿದ್ದರಿಂದ 75 ಸಾವಿರ ತೆರಿಗೆದಾರರಿಗೆ ನಷ್ಟವಾಗಿದೆ. ಎಂಎಸ್ಎಂಇಗಳಿಗೆ 20 ಸಾವಿರ ಕೋಟಿ ರೂ. ಆರ್ಥಿಕ ಪರಿಹಾರ ನೀಡುವಂತೆ ಕೋರಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಶುಲ್ಕವನ್ನು ಶೇಕಡ 50 ರಷ್ಟು ವಿನಾಯಿತಿ ನೀಡಬೇಕು. ವ್ಯಾಪಾರದ ಪರವಾನಗಿ ಲೈಸನ್ಸ್ ನವೀಕರಣವನ್ನು ಒಂದು ವರ್ಷ ಮುಂದೂಡಬೇಕು ಎಂದು ಮನವಿ ಮಾಡಿದ್ದಾರೆ.
ಹಾರ್ಡ್ ವೇರ್, ಕಬ್ಬಿಣದಂಗಡಿ, ವಿದ್ಯುತ್ ಉಪಕರಣ ಅಂಗಡಿಗಳಿಗೆ ಮಾರಾಟ ಮಾಡಲು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೂ ಅವಕಾಶ ನೀಡಬೇಕು. ಬೆಂಗಳೂರು ನಗರದಲ್ಲಿ ಕೂಡಲೇ ಬಸ್​​ಗಳ ಸಂಚಾರ ಆರಂಭಿಸಬೇಕು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಉಚಿತ ಕರೊನಾ ಲಸಿಕೆ ನೀಡಬೇಕು ಎಂದು ಸುಂದರ್ ಆಗ್ರಹಿಸಿದ್ದಾರೆ.
ಕುಂಭ ಮೇಳದ ವೇಳೆ ನಕಲಿ ಕರೊನಾ ಪರೀಕ್ಷಾ ವರದಿ : ತನಿಖೆ ಆರಂಭ

ಮಲಗಿದ್ದ ಮಗುವಿನ ಗಂಟಲು ಕೊಯ್ದ ಕರೊನಾ ರೋಗಿ! ತಡರಾತ್ರಿ ನಡೆಯಿತು ದುರಂತ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 3 =
Remember me
