ಬೆಂಗಳೂರು:ರಾಜ್ಯದಲ್ಲಿ ದಾಖಲೆ ಮಳೆ, ಪ್ರವಾಹ ಹಾಗೂ ಕರೊನಾ ಸಂಕಷ್ಟದ ನಡುವೆಯೂ ಸರ್ವತೋಮುಖ ಅಭಿವೃದ್ಧಿಯ ಕಲ್ಯಾಣ ರಾಜ್ಯವನ್ನು ಕಟ್ಟುವುದೇ ನಮ್ಮ ಗುರಿ. ರೈತರ ಅಭ್ಯುದಯಕ್ಕಾಗಿ 14.50 ಸಾವಿರ ಕೋಟಿ ರೂ. ಬೆಳೆ ಸಾಲ ನೀಡುವ ಗುರಿ ಹೊಂದಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಶನಿವಾರ ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕರೊನಾ ಪಿಡುಗು ಆರೋಗ್ಯ ಕ್ಷೇತ್ರವಲ್ಲದೆ, ಎಲ್ಲ ಕ್ಷೇತ್ರವನ್ನೂ ಬಾಧಿಸುತ್ತಿದೆ. ನಾನು ಸಹ ಸೋಂಕಿನಿಂದ ಬಾಧಿತನಾಗಿ, ವೈದ್ಯಕೀಯ ಶುಶ್ರೂಷೆಯಿಂದ ಗುಣಮುಖನಾಗಿದ್ದೇನೆ. ಸೋಂಕಿನ ಬಗ್ಗೆ ಆತಂಕ ಪಡದೆ ಜಾಗರೂಕತೆಯಿಂದ ಜೀವನ ನಡೆಸಬೇಕು ಎಂದರು.
ಉದ್ದಿಮೆ, ವ್ಯಾಪಾರ ಮತ್ತು ವಹಿವಾಟುಗಳು ಸ್ಥಗಿತಗೊಂಡಾಗ ವಲಸೆ ಕಾರ್ವಿುಕರು ಹಾಗೂ ಕೂಲಿ ಕಾರ್ವಿುಕರು, ರೈತರು, ನೇಕಾರರು, ಮೀನುಗಾರರು, ಕಟ್ಟಡ ಕಾರ್ವಿುಕರು, ಕ್ಷೌರಿಕರು, ಅಗಸರು, ಟ್ಯಾಕ್ಸಿ ಮತ್ತು ಆಟೋ ಚಾಲಕರು ಸೇರಿ ವಿವಿಧ ವಲಯಗಳ ಅಸಂಘಟಿತ ಕಾರ್ವಿುಕರಿಗೆ 3,187 ಕೋಟಿ ರೂ. ಪರಿಹಾರದ ಪ್ಯಾಕೇಜ್ ಘೊಷಿಸಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ 1.31 ಕೋಟಿಗೂ ಅಧಿಕ ಜನರಿಗೆ ಆರೋಗ್ಯ ಕಾರ್ಡ್ ವಿತರಿಸಲಾಗಿದ್ದು, ಈವರೆಗೆ 8.5 ಲಕ್ಷ ಫಲಾನುಭವಿಗಳಿಗೆ 1,694 ಕೋಟಿ ರೂ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ:ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!
ಕರೊನಾ ವಾರಿಯರ್ಸ್ ಯೋಧರಿಗೆ ಸಮಾನ:ಕರೊನಾ ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ವೈದ್ಯರು, ಶುಶ್ರೂಷಕರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರ ವಿಮಾ ಸೌಲಭ್ಯ ಘೊಷಿಸಿದೆ. ಅಂಗನವಾಡಿ ಕಾರ್ಯಕರ್ತರು, ಪೌರ ಕಾರ್ವಿುಕರು, ಪೊಲೀಸರು ಹಾಗೂ ಎಲ್ಲ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕರೊನಾ ವಾರಿಯರ್ಸ್ ಎಂದು ಪರಿಗಣಿಸಿ, ಅವರ ಅನಾರೋಗ್ಯಕ್ಕೆ ಉಚಿತ ಚಿಕಿತ್ಸೆ ಮತ್ತು ಮೃತಪಟ್ಟಲ್ಲಿ ಅವರ ಕುಟುಂಬಸ್ಥರಿಗೆ 30 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ದೇಶದ ಗಡಿ ಕಾಯುವ ಯೋಧರಷ್ಟೇ ಸಮರ್ಥವಾಗಿ ಕರೊನಾ ವಾರಿಯರ್ಸ್ ಸೇವೆ ಸಲ್ಲಿಸುತ್ತಿದ್ದು,ಅವರನ್ನು ಸ್ಮರಿಸಲಾಗುವುದು ಎಂದರು.ಇದನ್ನೂ ಓದಿ:ತ್ರಿವಳಿ ರಂಗಿನಲ್ಲಿ ಮಿಂದೆದ್ದ ತ್ರಿಷಾ; ಸ್ವಾತಂತ್ರ್ಯ ದಿನಕ್ಕೆ ವಿಶೇಷ ಫೋಟೋ
14.50 ಸಾವಿರ ಕೋಟಿ ರೂ. ಬೆಳೆ ಸಾಲ ಗುರಿ:ರಾಜ್ಯದಲ್ಲಿ 10 ಲಕ್ಷ ರೈತರಿಗೆ 6,500 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ. 2020-21ನೇ ಸಾಲಿನಲ್ಲಿ ರೈತರ ಕೃಷಿ ಕಾರ್ಯಕ್ಕೆ 14.50 ಸಾವಿರ ಕೋಟಿ ರೂ. ಬೆಳೆ ಸಾಲ ನೀಡುವ ಗುರಿ ಹಾಕಿಕೊಂಡಿದೆ. ಬೆಂಬಲ ಬೆಲೆ ಯೋಜನೆಯಡಿ 3,175 ಕೋಟಿ ರೂ. ಕೃಷಿ ಉತ್ಪನ್ನಗಳನ್ನು 5.82 ಲಕ್ಷ ರೈತರಿಂದ ಖರೀದಿಸಲಾಗಿದೆ. ಅಂತರ್ಜಲ ನೀರಿನ ಸುಸ್ಥಿರ ನಿರ್ವಹಣೆಗೆ 1,200 ಕೋಟಿ ರೂ. ವೆಚ್ಚದ ‘ಅಟಲ್ ಭೂ ಜಲ್ ಯೋಜನೆ’ಗೆ, ಅನುಮೋದನೆ ನೀಡಲಾಗಿದೆ. ನಮ್ಮ ರಾಜ್ಯ ಈ ಯೋಜನೆ ಅನುಷ್ಠಾನ ಮಾಡುತ್ತಿರುವ ಮೊದಲ ರಾಜ್ಯವಾಗಿದ್ದು, ಕೇಂದ್ರ ಸರ್ಕಾರ ಮತ್ತು ವಿಶ್ವ ಬ್ಯಾಂಕ್ ಕೂಡ ಅಭಿನಂದನೆ ಪ್ರಶಂಸೆ ವ್ಯಕ್ತಪಡಿಸಿವೆ ಎಂದು ತಿಳಿಸಿದರು.ಇದನ್ನೂ ಓದಿ:ಮಾಹಿ…ನಿಮ್ಮ ಹೆಲಿಕಾಪ್ಟರ್​ ಶಾಟ್​​ನ್ನು ಕ್ರಿಕೆಟ್​ ಲೋಕ ಮಿಸ್​ ಮಾಡಿಕೊಳ್ಳಲಿದೆ: ಅಮಿತ್​ ಷಾ
ಕೃಷಿ ಉತ್ಪನ್ನ ಮಾರಾಟ ಶುಲ್ಕ ಶೇ.0.35ಕ್ಕೆ ಇಳಿಕೆ:ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನೀತಿ’ಯಲ್ಲಿ ಮಾರ್ಪಾಡು ತರಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಉತ್ಪನ್ನಗಳಿಗೆ ವಿಧಿಸುತ್ತಿದ್ದ ಮಾರಾಟ ಶುಲ್ಕವನ್ನು ಶೇ.1.50 ರಿಂದ ಶೇ.0.35 ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ರೈತೆರ ಬೆಳೆಗಳಿಗೆ ನ್ಯಾಯಯುತ ಬೆಲೆ ದೊರೆಯಲಿದೆ ಎಂದು ಹೇಳಿದರು.
ಕೈಗಾರಿಕಾಭಿವೃದ್ಧಿಗೆ ಆದ್ಯತೆ:ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿ ಸುಗಮಗೊಳಿಸುವ ಕಾಯ್ದೆ ಮೂಲಕ ಉದ್ಯಮಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಭೂಮಿ ಖರೀದಿ ನಿಯಮಾವಳಿ ನಿಯಮ ಸರಳೀಕರಣಗೊಳಿಸಿ ರೈತರು ಹಾಗೂ ಉದ್ಯಮಿಗಳಿಗೆ ಲಾಭ ದೊರೆಯುವಂತೆ ಅವಕಾಶ ಕಲ್ಪಿಸಲಾಗಿದೆ. ದಾವೋಸ್​ನಲ್ಲಿ ನಡೆದ ಅಂತಾರಾಷ್ಟ್ರೀಯ ಎಕನಾಮಿಕ್ ಫೋರಂ ಸಮಾವೇಶದಲ್ಲಿ ನಡೆದ ಮಾತುಕತೆ ಅನುಸಾರ 40 ಕ್ಕೂ ಹೆಚ್ಚು ಕಂಪನಿಗಳು 27,000 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿವೆ. ಇದರಿಂದ 101 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.ಇದನ್ನೂ ಓದಿ:ಧ್ವಜಾರೋಹಣದ ವಿಚಾರಕ್ಕೆ ಗಲಾಟೆ; ಬಿಜೆಪಿ ಕಾರ್ಯಕರ್ತನ ಹತ್ಯೆ
ಸರಳ ಆಚರಣೆ:ಕೋವಿಡ್ ಸೋಂಕು ತೀವ್ರವಾಗಿ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಕೋವಿಡ್ ನಿಯಮ ಪಾಲನೆಯೊಂದಿಗೆ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು. 75 ಕರೊನಾ ವಾರಿಯರ್ಸ್ ಮತ್ತು 25 ಕೋವಿಡ್ ಸೋಂಕಿನಿಂದ ಗುಣಮುಖರಾದವರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿ 500 ಅತಿಥಿಗಳಿಗೆ ಅವಕಾಶ ನೀಡಲಾಗಿತ್ತು. ಬಿಎಸ್​ಎಫ್, ಕೆಎಸ್​ಆರ್​ಪಿ, ಸಿಎಆರ್, ನಾಗರೀಕ ಸೇವೆ, ಸಂಚಾರಿ ದಳ ಮತ್ತು ಕೆಎಸ್​ಐಎಸ್​ಎಫ್ ವಿಭಾಗ ಸೇರಿ 16 ತುಕಡಿಗಳು ಭಾಗವಹಿಸಿದ್ದು, ಮಾರ್ಚ್​ಫಾಸ್ಟ್ ನಡೆಯಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅವಕಾಶವಿರಲಿಲ್ಲ.
ಉಡುಪಿ:ಜಿಲ್ಲಾಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮೂರು ವರ್ಷದ ಪುಟಾಣಿ ಪೊಲೀಸ್ ಮಯೂರಿ ಎಲ್ಲರ ಗಮನ ಸೆಳೆದಳು.
ಪೊಲೀಸ್ ಸಮವಸ್ತ್ರ ತೊಟ್ಟು ಅತ್ತಿಂದಿತ್ತ ಓಡಾಡುತ್ತಿದ್ದ ಮಗುವನ್ನು ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್ ಮುದ್ದಿನಿಂದ ಮಾತನಾಡಿಸಿದರು. ಕಾರ್ಯಕ್ರಮ ಪೂರ್ತಿ ಮಗು ಪೊಲೀಸರೊಂದಿಗಿತ್ತು.
ಮಯೂರಿಗೆ ಪೊಲೀಸ್- ಮಿಲಿಟರಿ ಅಂದರೆ ಅಚ್ಚುಮೆಚ್ಚು. ಪೊಲೀಸ್ ಸಮವಸ್ತ್ರಕ್ಕೆ ಪಟ್ಟು ಹಿಡಿದಿದ್ದಳು. ಹಾಗಾಗಿ ಪೊಲೀಸ್ ಡ್ರೆಸ್ ಹಾಕಿಸಿ ಕರೆದುಕೊಂಡು ಬಂದೆ ಎಂದು ಮಗುವಿನ ತಂದೆ, ಉಡುಪಿ ಪ್ರಧಾನ ಅಂಚೆ ಕಚೇರಿಯ ಪೋಸ್ಟ್​ಮನ್ ಕುಂದಾಪುರ ಬೆಳ್ವೆಯ ರಾಘವೇಂದ್ರ ಪ್ರಭು ತಿಳಿಸಿದರು.
ಮಗ ಬಿಜೆಪಿ ಸೇರಿದರೆ ಏನ್ಮಾಡ್ತೀರಾ? ಕಾಂಗ್ರೆಸ್​ ಹಿರಿಯ ಮುಖಂಡ, ಮಾಜಿ ಸಿಎಂ ದಿಗ್ವಿಜಯ್​ ಉತ್ತರವೇನು ಗೊತ್ತೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
