ಬೆಂಗಳೂರು:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಯಲಹಂಕ – ದೇವನಹಳ್ಳಿ ನಡುವೆ ನಿಮಿರ್ಸಲಾಗಿರುವ ರೈಲು ಹಾಲ್ಟ್​ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಮತ್ತು ಆಗಮನದ ವೇಳಾಪಟ್ಟಿಯೂ ಪ್ರಕಟಿಸಲಾಗುತ್ತದೆ.
ನೈಋತ್ಯ ರೈಲ್ವೆ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆ (ಬಿಐಎಎಲ್​) ಸಹಯೋಗದಲ್ಲಿ ವಿಮಾನನಿಲ್ದಾಣದ ಬಳಿ 3 ಕೋಟಿ ರೂ. ವೆಚ್ಚದಲ್ಲಿ ಈ ನಿಲ್ದಾಣ ನಿರ್ಮಿಸಲಾಗಿದೆ. ನೂತನ ರೈಲು ನಿಲ್ದಾಣ ಕೆಐಎಯಿಂದ 4.5 ಕಿ.ಮೀ. ದೂರದಲ್ಲಿದೆ. ನೂತನ ರೈಲು ನಿಲ್ದಾಣ ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ, ರೈಲ್ವೆ ಇಲಾಖೆಯಿಂದ ಅನುಮತಿ ದೊರೆಯದ ಕಾರಣ ಜನರ ಸೇವೆಗೆ ಲಭ್ಯವಾಗಿಲ್ಲ. ಹೀಗೆ ನಿಮಿರ್ಸಲಾಗಿರುವ ರೈಲು ನಿಲ್ದಾಣದಲ್ಲಿ ಹಲವು ಸೇವೆಗಳು ದೊರೆಯಲಿದ್ದು, ಪ್ರಮುಖವಾಗಿ ವಿಮಾನಗಳ ಹಾರಾಟ ಮತ್ತು ಆಗಮನದ ಸಮಯದ ವಿವರಗಳನ್ನು ಪ್ರಕಟಿಸಲಾಗುತ್ತದೆ. ಆಮೂಲಕ ವಿಮಾನಯಾನ ಮಾಡುವವರು ಸಮಯವನ್ನು ನೋಡಿಕೊಂಡು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುತ್ತಿದೆ.
ಇನ್ನಿತರ ವ್ಯವಸ್ಥೆ:ಕೆಐಎ ನಿಲ್ದಾಣದಲ್ಲಿ ರೈಲು ನಿಲುಗಡೆ ಆರಂಭದ ನಂತರ ಪ್ರಯಾಣಿಕರು 10ರಿಂದ 15 ನಿಮಿಷದಲ್ಲಿ ವಿಮಾನ ನಿಲ್ದಾಣಕ್ಕೆ ತಲುಪಬಹುದಾಗಿದೆ. ಅದಕ್ಕಾಗಿ ಬಿಎಂಟಿಸಿಯಿಂದ ಶೆಟಲ್​ ಬಸ್​ ಸೇವೆಯನ್ನೂ ಆರಂಬಿಸಲು ಚಚಿರ್ಸಲಾಗುತ್ತಿದೆ. ಅದರ ಜತೆಗೆ ರೈಲು ನಿಲ್ದಾಣದ ಪ್ಲಾಟ್​ಫಾಮ್​ರ್ನಲ್ಲಿ ಟಿಕೆಟ್​ ಕೌಂಟರ್​, ರ್ಯಾಂಪ್​, ಓಪನ್​ ಪಾಕಿರ್ಂಗ್​, 10 ನೀರಿನ ಟಕ, 10 ಬೆಂಚ್​ಗಳು, ಶೌಚಗೃಹ ಸೇರಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
29 ಸಾವಿರ ಸಿಬ್ಬಂದಿಗೆ ಅನುಕೂಲ: ಕೆಐಎ ರೈಲು ನಿಲ್ದಾಣದಿಂದ ವಿಮಾನನಿಲ್ದಾಣ ಹಾಗೂ ಅಲ್ಲಿನ ಮಳಿಗೆಗಳ ಸಿಬ್ಬಂದಿಗೆ ಅನುಕೂಲವಾಗಲಿದೆ. ಒಟ್ಟಾರೆ 29 ಸಾವಿರ ಸಿಬ್ಬಂದಿಗಳು ಪ್ರತಿದಿನ ವಿಮಾನನಿಲ್ದಾಣಕ್ಕೆ ಬೇರೆ ಬೇರೆ ಕಡೆಗಳಿಂದ ಬರುತ್ತಾರೆ. ಅವರುಗಳು ರೈಲಿನ ಮೂಲಕ ಪ್ರಯಾಣಿಸಬಹುದಾಗಿದೆ. ಯಲಹಂಕ, ದೊಡ್ಡಜಾಲ ಮತ್ತು ಜಿಕ್ಕಜಾಲ ಕಡೆಯಿಂದ ಬರುವವರು ರೈಲು ಪ್ರಯಾಣ ಮಾಡಿ, ಕೆಐಎ ನಿಲ್ದಾಣದ ಮೂಲಕ ವಿಮಾನನಿಲ್ದಾಣಕ್ಕೆ ತಲುಪಬಹುದಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
