ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಡಿ ಟರ್ಬೆ ಮೆಘಾ ಏರ್​ವೇಸ್​ನಿಂದ ಬೆಂಗಳೂರು ಮತ್ತು ಬೀದರ್ ನಡುವೆ ವೈಮಾನಿಕ ಸೇವೆ ಶುಕ್ರವಾರ ಆರಂಭವಾಗಲಿದೆ. ಸಿಎಂ ಯಡಿಯೂರಪ್ಪ ಬೆಳಗ್ಗೆ 9.50ಕ್ಕೆ ಬೆಂಗಳೂರಿನಿಂದ ಟ್ರೂಜೆಟ್ ವಿಮಾನದಲ್ಲಿ ಹೊರಟು 11.30ಕ್ಕೆ ಬೀದರ್ ಏರ್​ಪೋರ್ಟ್​ಗೆ ಬಂದಿಳಿ ಯಲಿದ್ದಾರೆ. ಬಳಿಕ ಇಲ್ಲಿಂದ ಆರಂಭವಾಗುತ್ತಿರುವ ನಾಗರಿಕ ವಿಮಾನ ಸೇವೆಗೆ ಚಾಲನೆ ನೀಡಲಿದ್ದಾರೆ.
ಪ್ರತಿನಿತ್ಯ ಬೆಳಗ್ಗೆ 11.25ಕ್ಕೆ ಬೆಂಗಳೂರಿನಿಂದ ಹೊರಡ ಲಿರುವ ವಿಮಾನ ಮಧ್ಯಾಹ್ನ 1.05ಕ್ಕೆ ಬೀದರ್ ತಲುಪಲಿದೆ. ಮ.1.35ಕ್ಕೆ ಬೀದರ್ ನಿಂದ ಹೊರಟು 3.15ಕ್ಕೆ ಬೆಂಗಳೂರಿಗೆ ಮರಳಲಿದೆ.
ಟ್ರೂಜೆಟ್ ಸಂಸ್ಥೆ: ‘ಉಡೇ ದೇಶ್ ಕಾ ಆಮ್ ನಾಗರಿಕ್’ ಘೊಷವಾಕ್ಯದೊಂದಿಗೆ ಉಡಾನ್ ಹೆಸರಿನ ಮೂಲಕ ದೇಶದ ಪ್ರಾದೇಶಿಕ ನಗರಗಳನ್ನು ಸಂರ್ಪಸುವ ಪ್ರಧಾನಿ ನರೇಂದ್ರ ಮೋದಿ ಕನಸನ್ನು ನನಸಾಗಿಸುತ್ತಿರುವ ಟ್ರೂಜೆಟ್ ಉಡಾನ್-1, 2 ಮತ್ತು 3ರ ಅಡಿಯಲ್ಲಿ ತನಗೆ ವಹಿಸಿರುವ ಎಲ್ಲ ಮಾರ್ಗಗಳಲ್ಲೂ ವೈಮಾನಿಕ ಸೇವೆ ಒದಗಿಸುತ್ತಿರುವ ಏಕಮೇವ ಸಂಸ್ಥೆಯಾಗಿ ಹೊರಹೊಮ್ಮಿದೆ. ತನ್ನ ಜಾಲದ 24ನೇ ಕೇಂದ್ರವಾಗಿ ಬೀದರ್​ಗೆ ಟ್ರೂಜೆಟ್ ವೈಮಾನಿಕ ಸೇವೆಯನ್ನು ಆರಂಭಿಸುತ್ತಿದೆ. 2015ರ ಜು.12ರಂದು ಕಾರ್ಯಾಚರಣೆ ಆರಂಭಿಸಿದ ಸಂಸ್ಥೆಯು
ಪ್ರಮುಖ ಮತ್ತು ಸಣ್ಣ ನಗರಗಳ ನಡುವಿನ ಸಂಪರ್ಕ ಸಾಧಿಸುವ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ದೇಶದ ಜತೆಗೂಡಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆ ನಿರ್ದೇಶಕ ಕೆ.ಪಿ.ಪ್ರದೀಪ್ ತಿಳಿಸಿದ್ದಾರೆ.
ಬಸ್​ನಲ್ಲಿ ಬೆಂಗಳೂರಿಂದ ಬೀದರ್​ಗೆ 12 ಗಂಟೆ ಪ್ರಯಾಣ ಮಾಡಬೇಕಿತ್ತು. ತುರ್ತಾಗಿ ಬೆಂಗಳೂರಿಗೆ ಬರಲು ಹೈದರಾಬಾದ್​ಗೆ ತೆರಳಿ ಅಲ್ಲಿಂದ ವಿಮಾನದಲ್ಲಿ ಬರಬೇಕಿತ್ತು. ಆದರೀಗ ಈ ವೈಮಾನಿಕ ಸೇವೆಯಿಂದ 1 ಗಂಟೆ 40 ನಿಮಿಷದಲ್ಲಿ ಬೆಂಗಳೂರಿಂದ ಬೀದರ್​ಗೆ ತಲುಪಬಹುದೆಂದು ಸಂಸ್ಥೆ ಸಿಇಒ ಎಲ್.ಎಸ್.ಎನ್.ಮೂರ್ತಿ ವಿವರಿಸಿದ್ದಾರೆ.
ಟಿಕೆಟ್ ಬುಕಿಂಗ್
www.trujet.com ವೆಬ್​ಸೈಟ್​ನಲ್ಲಿ ಕಾಲ್​ಸೆಂಟರ್ ಸಂಖ್ಯೆ
+914040904090, ಪ್ರವಾಸಿ ಏಜೆಂಟ್​ಗಳ ಮೂಲಕ ಟ್ರೂಜೆಟ್ ಟಿಕೆಟ್​ಗಳನ್ನು ಬುಕ್ ಮಾಡಬಹುದು. ಒಂದು ವಾರ ಮುಂಚಿತವಾಗಿ ಟಿಕೆಟ್ ಬುಕ್ ಮಾಡಿದವರಿಗೆ ಎಲ್ಲ ಕರ ಸೇರಿ 1299-1499 ರೂ. ದರವಿದೆ. ಇದು 14 ತಾಸು ಸಂಚಾರದ ಬಸ್ಸಿಗೆ ಕೊಡುವ ದರಕ್ಕೆ ಸಮ ಎಂಬುದು ಗಮನಾರ್ಹ.
24 ಕೇಂದ್ರಗಳಲ್ಲಿ ಸೇವೆ
ಹೈದರಾಬಾದ್ ಮೂಲದ ಟರ್ಬೆ ಮೆಘಾ ಏರ್​ವೇಸ್ ಪ್ರೈ.ಲಿ. ತನ್ನ ಜಾಲಕ್ಕೆ 24 ಕೇಂದ್ರಗಳನ್ನು ಸೇರ್ಪಡೆಗೊಳಿಸಿಕೊಂಡಿದ್ದು, ಹೈದರಾಬಾದ್, ಅಹ್ಮದಾಬಾದ್ ಮತ್ತು ಚೆನ್ನೈನಿಂದ ಔರಂಗಾಬಾದ್, ಬೆಳಗಾವಿ, ಬೆಂಗಳೂರು, ಬೀದರ್, ಕಡಪ, ಗೋವಾ, ಇಂದೋರ್, ಜೈಸಲ್ಮೆರ್, ಜಲಗಾವ್, ಖಾಂಡ್ಲಾ, ಕೊಲ್ಹಾಪುರ, ಮುಂಬೈ, ಮೈಸೂರು, ನಾಂದೇಡ್, ನಾಸಿಕ್, ಪೋರ್​ಬಂದರ್, ರಾಜಮಂಡ್ರಿ, ಸೇಲಂ, ತಿರುಪತಿ, ವಿದ್ಯಾನಗರ ಮತ್ತು ವಿಜಯವಾಡಗಳಲ್ಲಿ ವೈಮಾನಿಕ ಸಂಪರ್ಕ ಜಾಲ ಹೊಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
