| ಮೃತ್ಯುಂಜಯ ಕಪಗಲ್ ಬೆಂಗಳೂರುಯೋಜಿತ ಗುರಿ ಪ್ರಕಾರ ಅನುಷ್ಠಾನಕ್ಕೆ ಬಂದರೆ ಉತ್ತರ ಕನ್ನಡ ಜಿಲ್ಲೆಯ ಕದ್ರಾ ಅಣೆಕಟ್ಟೆ ಹಿನ್ನೀರಿನಲ್ಲಿ ರಾಜ್ಯದ ಮೊದಲ ತೇಲುವ ಸೌರಶಕ್ತಿ ವಿದ್ಯುತ್ ಘಟಕ ತಲೆ ಎತ್ತಲಿದೆ.
ತಾಪಮಾನ ವ್ಯತಿರಿಕ್ತ ಪರಿಣಾಮ ತಡೆಯಲು ‘ಹಸಿರು ಇಂಧನ’ ಉತ್ಪಾದನೆಗೆ ಕೇಂದ್ರ ಸರ್ಕಾರ ಉತ್ತೇಜಿಸುತ್ತಿದ್ದು, ಪ್ರೋತ್ಸಾಹಕದ ಲಾಭ ಪಡೆಯಲು ರಾಜ್ಯ ಸರ್ಕಾರಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಕೇಂದ್ರದ ನೆರವು ಶಕ್ತ್ಯಾನುಸಾರ ಬಳಸಿಕೊಳ್ಳಲು ರಾಜ್ಯ ಸರ್ಕಾರ ಉತ್ಸುಕವಾಗಿದೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ‘ಹಸಿರು ಇಂಧನ’ ಉತ್ಪಾದನೆ ಕುರಿತು ಚರ್ಚೆಯಾಗಿದೆ. ಇದೇ ವೇಳೆ ತೇಲುವ ಸೌರಶಕ್ತಿ ಆಧಾರಿತ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸಲು ಅಸ್ತು ಎಂದಿದ್ದಾರೆ. ಪ್ರಸ್ತಾವನೆ ಸಲ್ಲಿಸಿದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತಕ್ಕೆ (ಕೆಪಿಸಿಎಲ್) ಯೋಜನೆಯ ಹೊಣೆ ಒಪ್ಪಿಸಲಾಗಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ. ಒಟ್ಟು 270 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸೌರಶಕ್ತಿ ಯೋಜನೆ ಉದ್ದೇಶವಾಗಿದ್ದು, ಈ ಪೈಕಿ 100 ಮೆ.ವಾ. ಸಾಮರ್ಥ್ಯದ ತೇಲುವ ಸೌರಶಕ್ತಿ ಘಟಕ ಸ್ಥಾಪನೆಯೂ ಸೇರಿದೆ.
ದೊಡ್ಡ ಜವಾಬ್ದಾರಿ: ಪವನ, ಸೌರ ಸೇರಿ ಅಸಂಪ್ರದಾಯಿಕ ಇಂಧನ ಮೂಲದಿಂದ ವಿದ್ಯುತ್ ಉತ್ಪಾದನೆಯಲ್ಲಿ ಖಾಸಗಿ ಕಂಪನಿಗಳದ್ದೇ ಪಾರಮ್ಯ. ಪ್ರಸ್ತಾವಿತ ಸೌರಶಕ್ತಿ ಯೋಜನೆಗಳಲ್ಲಿ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗೂ ಒಂದಿಷ್ಟು ಪಾಲು ಕೊಡಿ ಎಂದು ಕೆಪಿಸಿಎಲ್ ದುಂಬಾಲು ಬಿದ್ದಿತ್ತು. ಬೃಹತ್ ಯರಮರಸ್ ಶಾಖೋತ್ಪನ್ನ ನೆಲೆಯ ವಿದ್ಯುತ್ ಉತ್ಪಾದನಾ ಸ್ಥಾವರವೇ ಕೆಪಿಸಿಎಲ್​ನ ಕೊನೆಯ ಯೋಜನೆಯಾಗಿದೆ. ಒಂದು ದಶಕದ ಬಳಿಕ 270 ಮೆ.ವಾ. ಸೌರಶಕ್ತಿ ಆಧಾರಿತ ವಿದ್ಯುತ್ ಉತ್ಪಾದನೆ ಯೋಜನೆ ನಿಗಮದ ಹೆಗಲೇರಿದೆ.
ಉತ್ತರ ಕನ್ನಡ ಜಿಲ್ಲೆಯ ಕದ್ರಾ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ವಿುಸಿರುವ ಜಲಾಶಯದ ಹಿನ್ನೀರಿನಲ್ಲಿ 100 ಮೆ.ವಾ. ವಿದ್ಯುತ್ ಉತ್ಪಾದನೆಗೆ ಸೌರ ಫಲಕ (ಫೋಟೊ ವಾಲ್ಟಿಕ್)ಗಳನ್ನು ಅಳವಡಿಸಲು ಚಿಂತನೆ ನಡೆದಿದೆ. ಉಳಿದ 170 ಮೆ.ವಾ. ಸೌರಶಕ್ತಿ ಘಟಕವು ಭೂಮೇಲ್ಮೈ ಮೇಲೆ ನಿರ್ವಿುಸಲಾಗುತ್ತದೆ. ತುಮಕೂರು ಜಿಲ್ಲೆಯ ಪಾವಗಡ ಸೋಲಾರ್ ಪಾರ್ಕ್ ಬಳಿಕ ಎರಡನೇ ದೊಡ್ಡ ಯೋಜನೆಯಾಗಲಿದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರದಿಗೆ ಸಿದ್ಧತೆ:ತೇಲುವ ಸೌರಫಲಕ ಹಾಗೂ ಭೂಮೇಲ್ಮೈ ಸೌರ ವಿದ್ಯುತ್ ಒಳಗೊಂಡು 270 ಮೆ.ವಾ ಉತ್ಪಾದನೆ ಯೋಜನೆಗೆ ತಾಂತ್ರಿಕ ರೂಪರೇಷೆ, ವಿಸõತ ಯೋಜನಾ ವರದಿ ತಯಾರಿಗೆ ಸಿದ್ಧತೆ ನಡೆದಿದೆ. ನಿಗಮದ ಸ್ವಾಮ್ಯದಲ್ಲಿ ದೊಡ್ಡ ಹಾಗೂ ಸಣ್ಣ ಸೇರಿ 10 ಜಲಾಶಯಗಳಿವೆ. 35 ಸಾವಿರ ಎಕರೆ ಜಮೀನು ವಿಸ್ತಾರ ಹೊಂದಿದ್ದು, ಸರ್ಕಾರದ ಮಟ್ಟದಲ್ಲಿ ನಡೆದಿರುವ ಚಿಂತನೆ ಪ್ರಕಾರ 7000 ಮೆ.ವಾ. ಸಾಮರ್ಥ್ಯದ ತೇಲುವ ಸೌರಶಕ್ತಿ ಘಟಕಗಳನ್ನು ಸ್ಥಾಪಿಸುವ ಉದ್ದೇಶವಿದೆ. ಅಲ್ಲದೆ, ಜಲ ಸಂಪನ್ಮೂಲ ಇಲಾಖೆಯಡಿ ವಿವಿಧ ನಿಗಮಗಳ ವ್ಯಾಪ್ತಿಯಲ್ಲಿನ ದೊಡ್ಡ ಕಾಲುವೆಗಳು, ಸಣ್ಣ ನೀರಾವರಿ ಇಲಾಖೆಗಳಿಗೆ ಸೇರಿದ ದೊಡ್ಡ ಕೆರೆಗಳು ಮತ್ತು ಮಧ್ಯಮಗಾತ್ರದ ಹೊಂಡಗಳಲ್ಲೂ ತೇಲುವ ಸೌರಶಕ್ತಿ ಘಟಕಗಳ ಸ್ಥಾಪನೆಗೆ ನವೀನ ತಂತ್ರಜ್ಞಾನ ಅವಕಾಶ ಕಲ್ಪಿಸಿದೆ.
ಕೆಪಿಸಿಎಲ್ ಸದ್ಯಕ್ಕೆ 34 ಮೆ.ವಾ. ಸೌರ ವಿದ್ಯುತ್ ಉತ್ಪಾದಿಸುತ್ತಿದೆ. ಸರ್ಕಾರದ ಯೋಚನೆಯು ಅನುಷ್ಠಾನಕ್ಕೆ ಬಂದರೆ ಜಲ, ಶಾಖ ಮತ್ತು ಸೌರವಲಯದಲ್ಲಿ ಸಾರ್ವಜನಿಕ ಸ್ವಾಮ್ಯದ ನಿಗಮ ಮೇಲುಗೈ ಸಾಧಿಸಲಿದೆ ಎಂದು ಮೂಲಗಳು ಹೇಳಿವೆ.
ಚಾಲ್ತಿ ಸಾಮರ್ಥ್ಯ (ಮೆ.ವಾ.ಗಳಲ್ಲಿ): ಸೌರಶಕ್ತಿ: ಕೆಪಿಸಿಎಲ್-34, ಖಾಸಗಿ- 8181. ಪವನ: ಖಾಸಗಿ-5,269, ಸಹಶಕ್ತಿ (ಕೋಜನ್): ಖಾಸಗಿ-1,731. ಬಯೋಮಾಸ್: ಖಾಸಗಿ-139, ಕಿರುಜಲ: ಖಾಸಗಿ- 903.
ತೆಲಂಗಾಣದಲ್ಲಿ ಮೊದಲ ತೇಲುವ ಘಟಕ:ತೆಲಂಗಾಣದ ರಾಮಗುಂಡಂ ಬಳಿ ದೇಶದ ಮೊದಲ ತೇಲುವ ಸೌರ ಘಟಕವನ್ನು ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ (ಎನ್​ಟಿಪಿಸಿ) ನಿರ್ವಿುಸಿದೆ. 100 ಮೆ.ವಾ. ಸಾಮರ್ಥ್ಯದ ಈ ಘಟಕ ಕಳೆದ ವರ್ಷವೇ ಕಾರ್ಯಾರಂಭಿಸಿದೆ.
ದೇಶದ ಎರಡನೇ ತೇಲುವ ಸೌರಶಕ್ತಿ ಘಟಕ (92 ಮೆ.ವಾ.)ವನ್ನು ಕೇರಳದ ಕಯಂಕುಲಂ ಬಳಿ ಎನ್​ಟಿಪಿಸಿಯಿಂದಲೇ ನಿರ್ವಣವಾಗುತ್ತಿದೆ. ಮಧ್ಯಪ್ರದೇಶದ ಖಾಂಡ್ವ ಜಿಲ್ಲೆಯಲ್ಲಿ ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಿರುವ ಓಂಕಾರೇಶ್ವರ ಡ್ಯಾಂ ಹಿನ್ನೀರಿನಲ್ಲಿ ವಿಶ್ವದ ಅತಿದೊಡ್ಡ ತೇಲುವ ಸೌರಶಕ್ತಿ ಘಟಕ (600 ಮೆ.ವಾ.) ನಿರ್ವಿುಸಲಾಗುತ್ತಿದೆ.
ದೇಶದ ಹೆಸರನ್ನೂ ಬದಲಾಯಿಸುವ ವಿದೂಷಕ ಯಾರು?: ನಟ ಪ್ರಕಾಶ್ ರಾಜ್​

ಶಾರುಖ್​ ಖಾನ್ ಮನೆ ಮುಂದೆ ಚಹಾ ಮಾರಲೂ ಬಿಡದ ‘ಜವಾನ’; ಟೀ ರಸ್ತೆಗೆ ಚೆಲ್ಲಿದ ಭದ್ರತಾ ಸಿಬ್ಬಂದಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 5 =
Remember me
