ಬಾಗಲಕೋಟೆ:ಹೈನೋದ್ಯಮದ ಮೇಲೆ ಪ್ರವಾಹದ ಕರಿನೆರಳು ಬಿದ್ದಿದೆ. ಹಸಿ ಮೇವಿನ ಕೊರತೆ ಹಾಗೂ ಸ್ಥಳ ಬದಲಾವಣೆಯ ಮೇಲೂ ಪರಿಣಾಮ ಬೀರಿದೆ. ಬಾಗಲಕೋಟೆಯ ಕೃಷ್ಣಾ ಮತ್ತು ಘಟಪ್ರಭಾ ನದಿಯಿಂದ ಪ್ರವಾಹ ಭೀತಿ ಎದುರಾಗುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ನುಗ್ಗಿ, ಅವಾಂತರ ಸೃಷ್ಟಿಯಾಗಿದೆ. ಪ್ರಕೃತಿ ವಿಕೋಪದ ಮುನ್ಸೂಚನೆ ಪಡೆಯುವ ಪ್ರಾಣಿಗಳು, ಮನುಷ್ಯನಿಗಿಂತ ಮೊದಲು ಪ್ರತಿಕ್ರಿಯಿಸಲು ಪ್ರಾರಂಭಿಸುತ್ತವೆ ಎಂಬ ಮಾತು ಸತ್ಯ ಎಂದು ಇಲ್ಲಿನ ರೈತರು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ:ನಿವೇಶನಗಳನ್ನು ಮುಡಾಗೆ ಹಿಂದಿರುಗಿಸಿ: ಸಿಎಂಗೆ ಎಚ್.ವಿಶ್ವನಾಥ್ ಒತ್ತಾಯ
ಜಾನುವಾರುಗಳನ್ನು ಬಯಲು ಜಾಗಗಳಲ್ಲಿ ಕಟ್ಟಿರುವ ಜನರು, ಬಯಲಿನಲ್ಲಿ ಆಕಳು, ಎಮ್ಮೆಗಳನ್ನು ಕಟ್ಟಿಹಾಕುತ್ತಿದ್ದಾರೆ. ಪ್ರವಾಹಕ್ಕೂ ಮೊದಲು ಜಾನುವಾರುಗಳು ಕೊಡ್ತಿದ್ದ ಅರ್ಧದಷ್ಟು ಹಾಲು ಈಗ ಕೊಡ್ತಿಲ್ಲ ಎಂದು ಹೈನುಗಾರಿಕೆಯನ್ನೇ ನಂಬಿ, ಜೀವನ ಸಾಗಿಸುತ್ತಿರುವ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಮುಧೋಳ, ಜಮಖಂಡಿ ತಾಲೂಕಿನಲ್ಲಿ ಹೆಚ್ಚಿನ ಜನರು ಹೈನುಗಾರಿಕೆ ಅವಲಂಬಿಸಿದ್ದು, ಹಸುಗಳು ಹಾಲು ಕೊಡುವುದನ್ನು ಕಡಿಮೆ ಮಾಡಿದೆ ಎಂದಿದ್ದಾರೆ.
ಒಂದೊತ್ತಿಗೆ 3ರಿಂದ4 ಲೀಟರ್ ಹಾಲು ಕೊಡ್ತಿದ್ದ ಎಮ್ಮೆಗಳು ಈಗ ದಿನಕ್ಕೆ ಒಂದೆರಡು ಲೀಟರ್ ಮಾತ್ರ ಕೊಡ್ತಿವೆ. ಜಿಲ್ಲಾಡಳಿತ ಕಬ್ಬಿನ‌ ಸ್ವಾಗಿ ಕೊಡುತ್ತಿದೆ. ಜಮೀನು ಮುಳುಗಿದ್ದರಿಂದ ಹಸಿಮೇವು ತರಲು ಸಾಧ್ಯವಾಗ್ತಿಲ್ಲ. ಇದರಿಂದ ಹಾಲು ಉತ್ಪಾದನೆ ಕುಂಠಿತವಾಗಿದೆ ಎಂದು ಹೈನುಗಾರರು ಅಳಲು ತೋಡಿಕೊಂಡಿದ್ದಾರೆ. ಬೆಳೆ ಮುಳುಗಿವೆ, ಮನೆಗೆ ನೀರು ನುಗ್ಗಿದೆ, ನಾವು ಕಾಳಜಿ ಕೇಂದ್ರದಲ್ಲಿ, ಜಾನುವಾರು ರಸ್ತೆ ಬದಿಯಲ್ಲಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪಾಲಿಕೆ ಆಯುಕ್ತರಿಂದ ನಗರ ಸ್ವಚ್ಛತೆ ಪರಿಶೀಲನೆ
ಹಾಲಿನ ದುಡ್ಡಲ್ಲಿ ವಾರದ ಸಂತೆಯೂ ಆಗ್ತಿತ್ತು. ಈಗ ಅದಕ್ಕೂ ತೊಂದರೆಯಾಗಿದೆ. ಜಿಲ್ಲೆಯಲ್ಲಿ ಪ್ರವಾಹದಿಂದ ಹಾಲು ಉತ್ಪಾದನೆ ಕುಸಿತ ಕಂಡಿದೆ ಎಂದು ತಿಳಿಸಿದ್ದಾರೆ.
ಬಾಂಗ್ಲಾದಲ್ಲಿ ಇಷ್ಟೊಂದು ಹಿಂಸಾಚಾರ ಏಕೆ? 300ಕ್ಕೂ ಅಧಿಕ ಸಾವು, ಇಷ್ಟಕ್ಕೆಲ್ಲ ಕಾರಣ ಇದೇ ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + sixteen =
Remember me
