ಬೆಂಗಳೂರು: ಕೃಷ್ಣಾ ಕಣಿವೆಯಲ್ಲಿ ಮತ್ತೆ ಪ್ರವಾಹದ ಆತಂಕ ಸೃಷ್ಟಿಯಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಶುಕ್ರವಾರವೂ ಭಾರಿ ಪ್ರಮಾಣದಲ್ಲಿ ಮಳೆ ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿಯಲ್ಲಿ ಅಪಾಯದ ಮಟ್ಟದಲ್ಲಿ ನೀರು ಹರಿಯತೊಡಗಿದೆ. ಇದರಿಂದಾಗಿ ತಟ ವಾಸಿಗಳಿಗೆ ಪ್ರವಾಹದ ಆತಂಕ ಕಾಡುತ್ತಿದೆ. ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯಲ್ಲಿನ ಕೆಳ ಹಂತದ 6 ಬ್ರಿಡ್ಜ್ ಕಂ ಬಾಂದಾರಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ. ‘ಮಹಾ’ ಮಳೆಯಿಂದಲೇ ಇಲ್ಲಿನ ನದಿಗಳ ನೀರಿನ ಹರಿವು ಹೆಚ್ಚಳವಾಗತೊಡಗಿದೆ. ಮಹಾರಾಷ್ಟ್ರದ ಕೋಯ್ನಾದಲ್ಲಿ 108 ಮಿ.ಮೀ., ವಾರಣಾದಲ್ಲಿ 58 ಮೀ.ಮೀ, ಸಾಂಗಲಿ-12 ಮಿ.ಮೀ. ಮಳೆಯಾಗಿದೆ. ಅಲ್ಲದೆ, ಕಲ್ಲೋಳ ಬಳಿ ಕೃಷ್ಣಾ ನದಿಗೆ ದೂಧಗಂಗಾ ನದಿಯಿಂದ 15,160 ಕ್ಯೂಸೆಕ್ ಹಾಗೂ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಮೂಲಕ 48,250 ಕ್ಯೂಸೆಕ್ ನೀರು ಸೇರಿ 63,410 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ಕೆಳ ಹಂತದ ಬ್ರಿಡ್ಜ್ ಕಂ ಬ್ಯಾರೇಜ್​ಗಳು ಜಲಾವೃತಗೊಂಡಿದೆ.
ಮಲೆನಾಡಿನಲ್ಲಿ ತುಂತುರು ಮಳೆ:ಮಲೆನಾಡಿನಲ್ಲಿ ಮುಂಗಾರು ಶುಕ್ರವಾರವೂ ಮುಂದುವರಿದರೂ ಬಿಸಿಲೂ ಇತ್ತು. 24 ಗಂಟೆಯಲ್ಲಿ 80.86 ಮಿಮೀ ಮಳೆ ಬಿದ್ದಿದೆ. ಲಿಂಗನಮಕ್ಕಿ ಜಲಾಶಯಕ್ಕೆ 6,331 ಕ್ಯೂಸೆಕ್, ಭದ್ರಾ ಜಲಾಶಯಕ್ಕೆ 4,419 ಕ್ಯೂ. ನೀರು ಬರುತ್ತಿದೆ. ತುಂಗಾ ಡ್ಯಾಂಗೆ 7,253 ಕ್ಯೂ.ಒಳಹರಿವಿದ್ದು 6,871 ಕ್ಯೂ. ನೀರನ್ನು ನದಿಗೆ ಬಿಡಲಾಗುತ್ತಿದೆ. ಶರಾವತಿ ಕಣಿವೆ, ಘಟ್ಟ ಪ್ರದೇಶ ಹಾಗೂ ಬಾಗಲಕೋಟೆಯಲ್ಲಿ ಉತ್ತಮ ಮಳೆ ಬೀಳುತ್ತಿದ್ದರೆ ರಾಜ್ಯದ ವಿವಿಧೆಡೆ ಚದುರಿದಂತೆ ಮಳೆಯಾಗಿದೆ. ಕರಾವಳಿ ಯಲ್ಲಿ ಮುಂಗಾರು ಚುರುಕುಗೊಂಡಿದ್ದು, 3 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕೃಷ್ಣೆಗೆ 55800 ಕ್ಯೂಸೆಕ್ ನೀರು:ವಿಜಯಪುರದ ಆಲಮಟ್ಟಿ ಜಲಾಶಯದ ಒಳಹರಿವಿನಲ್ಲಿ ಒಂದೇ ದಿನ 27,300 ಕ್ಯೂಸೆಕ್ ನೀರು ಹೆಚ್ಚಳವಾಗಿದೆ. ಶುಕ್ರವಾರ ಬೆಳಗ್ಗೆ 42,691 ಕ್ಯೂಸೆಕ್​ಗೆ ಏರಿಕೆಯಾಗಿದ್ದು, 519.60 ಮೀ.ಎತ್ತರದ ಜಲಾಶಯದಲ್ಲಿ 511.85 ಮೀ. ವರೆಗೆ 39.985 ಟಿಎಂಸಿ ನೀರು ಸಂಗ್ರಹವಾಗಿದೆ. 530 ಕ್ಯೂಸೆಕ್ ನೀರು ನಾರಾಯಣಪುರ ಜಲಾಶಯಕ್ಕೆ ಹರಿದು ಹೋಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್​ಗೆ ಶುಕ್ರವಾರ 55800ಕ್ಯೂಸೆಕ್ ನೀರು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ.
ಕರೊನಾ ಅಟ್ಯಾಕ್ ಆದ್ರೂ ಗೆದ್ದೆ ನಾನು: ಅಮ್ಮನನ್ನು ರಿಸ್ಕ್​​ಗೆ ತಳ್ಳೋಕೆ ರೆಡಿ ಇರಲಿಲ್ಲ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + eleven =
Remember me
