| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಕಳೆದ ಐದು ತಿಂಗಳಿಂದ ಕರೊನಾ ನಿರ್ವಹಣೆಯಲ್ಲಿ ಮುಳುಗಿರುವ ರಾಜ್ಯ ಸರ್ಕಾರಕ್ಕೀಗ ನೆರೆ ಸವಾಲಿನ ದೊಡ್ಡ ಅಲೆ ಎದುರಾಗಿದೆ. ಸಿಎಂ, ಹಲವು ಸಚಿವರು, ಅಧಿಕಾರಿಗಳು ಕರೊನಾದಿಂದ ಕ್ವಾರಂಟೈನ್​ಗೆ ಒಳಗಾಗಿರುವ ಸಂದರ್ಭದಲ್ಲೇ ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿರುವುದರಿಂದ ಜನರನ್ನು ರಕ್ಷಿಸುವ ಎರಡೆರಡು ಸವಾಲು ಏಕಕಾಲಕ್ಕೆ ಆಡಳಿತ ಯಂತ್ರದ ಮೇಲೆ ಬಿದ್ದಂತಾಗಿದೆ.
ಕಳೆದ ಆಗಸ್ಟ್​ನಲ್ಲಿ ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ ಸೇರಿ 22 ಜಿಲ್ಲೆಗಳಲ್ಲಿ ನೆರೆಯಿಂದಾಗಿ ಅಪಾರ ನಷ್ಟದ ಜತೆಗೆ ಜೀವಹಾನಿಯೂ ಆಗಿತ್ತು. ಈ ನೆನಪು ಮಾಸುವ ಮೊದಲೇ ಈ ವರ್ಷವೂ ಆಗಸ್ಟ್​ನಲ್ಲೇ ಮಳೆ ಚುರುಕುಗೊಂಡು ನೆರೆ ಕಾಣಿಸಿಕೊಂಡಿರುವುದು ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ. ಮಲೆನಾಡು, ಕರಾವಳಿಯಲ್ಲಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.
ಪ್ರಮುಖ ಸಂಗತಿ ಎಂದರೆ ಕಳೆದ ಬಾರಿ ಅತಿವೃಷ್ಟಿ ಸಂದರ್ಭದಲ್ಲಿ ಸಚಿವರು ಇಲ್ಲದ ಸರ್ಕಾರ ಇದ್ದರೂ ಅಧಿಕಾರಿ ವೃಂದ ಜನರ ನೆರವಿಗೆ ನಿಂತಿತ್ತು. ತಾವೊಬ್ಬರೇ ಸಂಪುಟದಲ್ಲಿದ್ದರೂ ಸಿಎಂ ಬಿ.ಎಸ್.ಯಡಿಯೂರಪ್ಪ ನೆರೆ ಪೀಡಿತ ಪ್ರದೇಶಕ್ಕೆ ತೆರಳಿ ಪರಿಹಾರ ಕಾರ್ಯಕ್ಕೆ ಮಾರ್ಗದರ್ಶನ ಮಾಡಿ, ತುರ್ತು ಪರಿಹಾರ ಕಾರ್ಯಕ್ಕೆ ಹಣಕಾಸಿನ ಸಮಸ್ಯೆಯಾಗದಂತೆ ನೋಡಿಕೊಂಡಿದ್ದರು. ಆದರೆ, ಈ ಬಾರಿ ಸಿಎಂ ಕರೊನಾ ಸೋಂಕಿತರಾಗಿ ಆಸ್ಪತ್ರೆಯಲ್ಲಿದ್ದಾರೆ. ಅವರು ಇನ್ನೂ ಒಂದು ವಾರ ಖುದ್ದು ಸ್ಥಳಕ್ಕೆ ಭೇಟಿ ನೀಡುವುದು ಅಸಾಧ್ಯ. ಅಧಿಕಾರಿಗಳು ಹಾಗೂ ಸಚಿವರನ್ನು ಕರೆದು ಮಾತನಾಡುವುದಕ್ಕೂ ಸಾಧ್ಯವಿಲ್ಲದ ಸ್ಥಿತಿ ಇದೆ. ಹೀಗಾಗಿ ದೂರವಾಣಿ ಮೂಲಕವಷ್ಟೇ ಮಾಹಿತಿ ಪಡೆದು ನಿರ್ದೇಶನ ಕೊಡಬಹುದಾಗಿದೆ.
ಸಿಎಂ ಅಷ್ಟೇ ಅಲ್ಲದೆ ಐದಕ್ಕೂ ಹೆಚ್ಚು ಸಚಿವರೂ ಹೋಂ ಕ್ವಾರಂಟೈನ್​ನಲ್ಲಿದ್ದಾರೆ. ಮೂವರು ಸಚಿವರು ಕರೊನಾ ನಿರ್ವಹಣೆಯಲ್ಲಿದ್ದಾರೆ. ಇನ್ನು ಕೆಲವರು ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಹೀಗಾಗಿ ಪರಿಸ್ಥಿತಿ ನಿಭಾಯಿಸುವುದು ಆಡಳಿತ ಯಂತ್ರಕ್ಕೆ ಕಷ್ಟವಾಗಿದೆ.
ಹೀಗಾಗಿ ತಕ್ಷಣ ಪರಿಹಾರ ವಿತರಣೆಗೆ ಸರ್ಕಾರ ಅವಕಾಶ ಮಾಡಿಕೊಳ್ಳಬೇಕಿದೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ, ಕೆಲವು ಕಡೆ ಸಂಪರ್ಕ ಕಡಿತವಾಗಿದೆ. ಮಳೆ ಇನ್ನೂ ಮುಂದುವರಿದರೆ ಸಮಸ್ಯೆ ವ್ಯಾಪಕವಾಗಬಹುದೆಂಬ ಅಂದಾಜು ಸಹ ಅಧಿಕಾರಿಗಳಲ್ಲಿದೆ.
ಸವಾಲುಗಳೇನು?
* ಕರೊನಾ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆ ಕಷ್ಟ
* ಆಶ್ರಯತಾಣದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸುವುದು
* ಅಧಿಕಾರಿ, ಸಿಬ್ಬಂದಿ ಕರೊನಾ ನಿರ್ವಹಣೆಯಲ್ಲಿರುವುದರಿಂದ ಕಾರ್ಯಾಚರಣೆ ಕಷ್ಟ
* ಶೀತ, ಜ್ವರ ಇದ್ದವರನ್ನು ರಕ್ಷಿಸಿ ಆಶ್ರಯ ತಾಣದಲ್ಲಿ ಬಿಡುವುದು ಹೇಗೆ ಎಂಬ ಪ್ರಶ್ನೆ
ಪೂರ್ವ ತಯಾರಿ ಏನು?
ರಾಜ್ಯ ವಿಪತ್ತು ನಿರ್ವಹಣೆ ಕೇಂದ್ರ ಸವಾಲನ್ನು ಗಮನಿಸಿ ಮಾರ್ಚ್, ಏಪ್ರಿಲ್​ನಲ್ಲೇ ಒಂದಷ್ಟು ತಯಾರಿ ಮಾಡಿಕೊಂಡಿತ್ತು. ಸಂಬಂಧಪಟ್ಟ ಜಿಲ್ಲಾಡಳಿತಗಳೊಂದಿಗೆ ಮಾತನಾಡಿ ಅಪಾಯ ಎದುರಾಗುವ ಪ್ರದೇಶದಲ್ಲಿ ಜನವಸತಿ ಮತ್ತು ಅವರು ಅಪಾಯದಲ್ಲಿ ಸಿಲುಕಿದರೆ ರಕ್ಷಣೆ ಹೇಗೆ ಎಂಬುದರ ಬಗ್ಗೆ ನೀಲಿನಕ್ಷೆ ಸಿದ್ಧಪಡಿಸಿತ್ತು. ರಕ್ಷಣಾ ತಂಡಗಳಿಗೂ ಮೂರು ತಿಂಗಳ ಹಿಂದೆಯೇ ಸ್ಥಳ ಗುರುತಿಸಿ ತಯಾರಾಗಿರುವಂತೆ ಸೂಚಿಸಿತ್ತು. ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಹೊರಬಿಡುವುದರಿಂದ ಉಂಟಾಗುವ ಪ್ರವಾಹ ನಿಯಂತ್ರಿಸಲು ಸರ್ಕಾರದ ಮಟ್ಟದಲ್ಲಿ ಮಾತುಕತೆಯೂ ನಡೆದಿದೆ. ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕಾರ್ಯದರ್ಶಿ ಹಂತದ ಅಧಿಕಾರಿಗಳು ಮಹಾರಾಷ್ಟ್ರದ ಜತೆ ರ್ಚಚಿಸಿದ್ದ ಜಲಾಶಯದಿಂದ ಏಕಾಏಕಿ ನೀರು ಹೊರಬಿಡದೆ ನೀರು ಸಂಗ್ರಹ ಸಮತೋಲನ ಕಾಯ್ದುಕೊಳ್ಳಲು ಮುಂಚಿತವಾಗಿ ಸಮ ಪ್ರಮಾಣದಲ್ಲಿ ನೀರು ಬಿಡಲು ಕರ್ನಾಟಕದಿಂದ ಸಲಹೆ ನೀಡಲಾಗಿದೆ. ಇದಕ್ಕೆ ಅಲ್ಲಿನ ಸರ್ಕಾರ ಒಪ್ಪಿದೆ. ಹಾಗೆಯೇ ಕರೊನಾ ವಿಚಾರವಾಗಿ ಸಿಎಂ ಯಡಿಯೂರಪ್ಪ ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಸಂದರ್ಭದಲ್ಲಿ ನೆರೆ ಎದುರಿಸಲು ಸಜ್ಜಾಗುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಎಲ್ಲೆಲ್ಲಿ ಸಮಸ್ಯೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 7 =
Remember me
