ಬೆಂಗಳೂರು:ರಾಜ್ಯದಲ್ಲಿ ಅತಿವೃಷ್ಟಿಯಿಂದ ಆ.1ರಿಂದ ಈವರೆಗೆ ಸಾವಿರ ಕೋಟಿ ರೂ. ನಷ್ಟವಾಗಿರುವ ಅಂದಾಜು ಮಾಡಲಾಗಿದೆ. ಬೆಳೆ, ಭೂ ಕುಸಿತ ಸೇರಿ ನಾನಾ ವಿಭಾಗದಲ್ಲಿ ದೊಡ್ಡ ಪ್ರಮಾಣದ ನಷ್ಟವಾಗಿದ್ದು, ಎಲ್ಲವನ್ನೂ ಈಗಲೇ ನಿಖರವಾಗಿ ಹೇಳಲು ಬರುವುದಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
18 ಜೀವ ಹಾನಿ, ಮೂವರು ನಾಪತ್ತೆ, 53 ಪ್ರಾಣಿಗಳು ಮೃತಪಟ್ಟಿವೆ. 3797 ಮನೆ ಬಾಗಶಃ ಹಾನಿಗೀಡಾದರೆ, 173 ಮನೆಗಳು ಸಂಪೂರ್ಣ ಜಖಂಗೊಂಡಿವೆ. 43,827 ಹೆ. ಕೃಷಿ ಬೆಳೆ, 48,773 ಹೆ. ತೋಟಗಾರಿಕೆ ಬೆಳೆ ನಷ್ಟವಾಗಿದೆ. ಸಂತ್ರಸ್ತರಿಗೆ 107 ಕಾಳಜಿ ಕೇಂದ್ರ ಆರಂಭಿಸಲಾಗಿದ್ದು, 3,239 ಮಂದಿ ಆಶ್ರಯ ಪಡೆದಿದ್ದಾರೆ.
ಇದನ್ನೂ ಓದಿ:ಹೆದರಿ ಸೋಂಕಿತನ ಶವವನ್ನು ಮಳೆಯಲ್ಲೇ ಇಟ್ಟರು: ಮಗನ ಸ್ಥಿತಿ ಕಂಡು ತಾಯಿಯ ಸಾವು!
ನಷ್ಟ ಈಗ ಹೇಳಲು ಬರುವುದಿಲ್ಲ:ಆ.7 ರಂದು ಕೆಲವೇ ಕೆಲವು ವಿಭಾಗಗಳಲ್ಲಿ ನಷ್ಟ ಲೆಕ್ಕಹಾಕಿ 170 ಕೋಟಿ ರೂ. ಅಂದಾಜಿಸಲಾಗಿತ್ತು. ಮಾರ್ಗಸೂಚಿ ಅನ್ವಯ 50-60 ವಿಭಾಗಗಳಲ್ಲಿ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅವರಿಂದ ನಷ್ಟದ ವರದಿ ಬರಲು ಇನ್ನೂ ಮೂರ್ನಾಲ್ಕು ದಿನ ಬೇಕಾಗಬಹುದು. ಅಲ್ಲಿಯವರೆಗೆ ನಷ್ಟವನ್ನು ನಿಖರವಾಗಿ ಹೇಳಲು ಬರುವುದಿಲ್ಲ ಎಂದು ವಿಪತ್ತು ನಿರ್ವಹಣಾ ವಿಭಾಗದ ಉನ್ನತ ಅಧಿಕಾರಿ ಹೇಳಿದ್ದಾರೆ.
ರಷ್ಯಾ ಕರೊನಾ ಲಸಿಕೆ ನೋಂದಣಿಯಲ್ಲಿ ನಡೆದಿದೆಯಾ ಗೋಲ್​ಮಾಲ್​? ಸಮಿತಿಯಲ್ಲಿದ್ದ ಖ್ಯಾತ ವೈದ್ಯ ರಾಜೀನಾಮೆ….!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × five =
Remember me
