ಬೆಂಗಳೂರು:ರಾಜಧಾನಿಯಲ್ಲಿ ಬಿರುಗಾಳಿ ಮಳೆಗೆ ಮರ, ಕೊಂಬೆಗಳು ಮುರಿದು ಬಿದ್ದಿರುವ ಸಂಬಂಧಪಟ್ಟಂತೆ ಬಿಬಿಎಂಪಿ ಸಹಾಯವಾಣಿಗೆ ಸಾರ್ವಜನಿಕರಿಂದ ದೂರುಗಳ ಮಹಾಪೂರವೇ ಹರಿದು ಬಂದಿದೆ. ಜೂ 2ರಿಂದ ಜೂ 7ರವರೆಗೆ ಮರಗಳ ಧರಾಶಾಹಿ ಬಗ್ಗೆ 447, ಕೊಂಬೆಗಳ ಮುರಿದಿರುವ ಕುರಿತು 1,126 ಸೇರಿ ಒಟ್ಟು 1573 ದೂರುಗಳು ದಾಖಲಾಗಿವೆ. ಭಾರಿ ಮಳೆಯಿಂದಾಗಿ ರಸ್ತೆಗಳ ಮೇಲೆ ತ್ಯಾಜ್ಯ ಹರಿದಿರುವ ಸಂಬಂಧ ನಗರದ ವಿವಿಧ ಭಾಗಗಳಿಂದ 1,573 ದೂರುಗಳು ಸ್ವೀಕೃತವಾಗಿವೆ.
ಕಳೆದ ಭಾನುವಾರ ಸುರಿದ ಧಾರಾಕಾರ ಮಳೆಗೆ ಒಂದೇ ದಿನದಂದು 574 ಮರ,ಟೊಂಗೆಗಳು ಧರೆಗುರುಳಿ ಭಾರೀ ಅನಾಹುತ ಉಂಟಾಗಿತ್ತು. ಬುಧವಾರದಿಂದ ಶುಕ್ರವಾರದವರೆಗೆ ನಗರದಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹತ್ತಾರು ಮರ, ಕೊಂಬೆಗಳು ಮುರಿದಿವೆ. ಮುಂಗಾರು ಮುನ್ನ ಒಣಗಿದ, ಬೀಳುವ ಹಂತದಲ್ಲಿರುವ ಮರಗಳನ್ನು ಗುರುತಿಸಿ ಅವುಗಳನ್ನು ತೆರವು ಮಾಡುವಲ್ಲಿ ನಿರ್ಲಕ್ಷ್ಯವಹಿಸಿದ ಪರಿಣಾಮ ಸಾರ್ವಜನಿಕರ ಆಸ್ತಿ,ಪಾಸ್ತಿ ಸೇರಿ ಮರಗಳು ಧರೆಗುರುಳಿದ ಸಂದರ್ಭದಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ ಕಾರು, ಬೈಕ್​, ಆಟೋ ರಿಕ್ಷಾಗಳಿಗೂ ಹಾನಿಯಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ರಸ್ತೆಬದಿ ವಾಹನ ನಿಲ್ಲಿಸಿ ಮಳಿಗೆ ಬಳಿಗೆ ತೆರಳಿದ್ದವರ ವಾಹನಗಳು ಮರ ಬಿದ್ದ ರಭಸಕ್ಕೆ ಜಖಂಗೊಂಡಿವೆ. ಹೀಗಾಗಿ, ಮಳೆ ಬೀಳುವ ಸಂದರ್ಭದಲ್ಲಿ ವಾಹನ ಸವಾರರು, ಪಾದಚಾರಿಗಳು ಪ್ರಾಣ ಭಯದಲ್ಲೇ ಸಂಚರಿಸುವಂತಾಗಿದೆ.
ರಾಜಧಾನಿಯಲ್ಲಿ ಪ್ರವಾಹ ಸಾಮಾನ್ಯಬಿಬಿಎಂಪಿ ಇತಿಹಾಸದಲ್ಲಿ ಒಂದೇ ದಿನ ಇಷ್ಟೊಂದು ಸಂಖ್ಯೆಯ ಮರಗಳು ಧರೆಗುರುಳಿದ ಉದಾಹರಣೆ ಇಲ್ಲ. ಮಳೆ ಜತೆಗೆ ಬಿರುಗಾಳಿ ಬೀಸಿದರೂ ಇಷ್ಟು ಸಂಖ್ಯೆಯಲ್ಲಿ ಮರಗಳು ಉರುಳುವುದು ಅಪರೂಪ. ಮಳೆಗಾಲದ ಮುನ್ನ ಶಿಥಿಲವಾದ, ಗೆದ್ದಲು ಹಿಡಿದ, ರಸ್ತೆಗೆ ಬಾಗಿ ಜನ, ವಾಹನ ಸಂಚಾರಕ್ಕೆ ಅಡ್ಡಿಯಾಗುವ ಮರ, ಟೊಂಗೆಗಳನ್ನು ತೆರವು ಮಾಡುವುದು ಅರಣ್ಯ ವಿಭಾಗಕ್ಕೆ ಕರ್ತವ್ಯ. ಆದರೆ, ಕೆಲ ವರ್ಷದಿಂದೀಚಿಗೆ ಈ ವಿಭಾಗದ ಅಧಿಕಾರಿಗಳು ನಾಗರಿಕರ ದೂರುಗಳಿಗೆ ಸ್ಪಂದಿಸುತ್ತಿಲ್ಲ. ಸ್ವತ: ಹಿರಿಯ ಅಧಿಕಾರಿಗಳು ಸೂಚಿಸಿದರೂ, ನಿಯಮ ನೆಪಮಾಡಿ ಶಿಥಿಲ ಮರಗಳನ್ನು ತೆರವು ಮಾಡುತ್ತಿಲ್ಲ ಎಂಬ ಆಕ್ಷೇಪ ನಾಗರಿಕ ವಲಯದಿಂದ ಕೇಳಿಬಂದಿದೆ. ಭಾನುವಾರ ಒಂದೇ ದಿನ ಸುರಿದ ಭಾರೀ ಮಳೆ ವೇಳೆ ಪ್ರವಾಹ, ಅಂಡರ್​ಪಾಸ್​ಗಳಲ್ಲಿ ನೀರು ನಿಂತಿರುವುದು, ಮರ/ಟೊಂಗೆ ಹಾಗೂ ವಿದ್ಯುತ್​ ಕಂಬಗಳು ನೆಲಕ್ಕುರುಳಿರುವುದು ಸೇರಿ ಒಟ್ಟು 926 ದೂರುಗಳು ದಾಖಲಾಗಿವೆ. ಇತ್ತೀಚಿನ ದಶಕದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ದೂರು ದಾಖಲಾಗಿರಲಿಲ್ಲ ಎಂದು ಬಿಬಿಎಂಪಿ ತಿಳಿಸಿದೆ. ಅಲ್ಲದೆ, ಸಣ್ಣ ಮಳೆಗೆ ರಾಜಧಾನಿಯಲ್ಲಿ ಪ್ರವಾಹ ಉಂಟಾಗುವುದು, ಅಂಡರ್​ಪಾಸ್​ಗಳಲ್ಲಿ ನೀರು ನಿಲ್ಲುವುದು ಸಾಮಾನ್ಯವಾಗಿದೆ.
ನಿವೇದಿತಾ ಗೌಡ – ಚಂದನ್​ ಶೆಟ್ಟಿ ಡಿವೋರ್ಸ್​ ಪಡೆದಿದ್ದು ಇದೇ ಕಾರಣಕ್ಕೆ ಅಂತೆ!
ಅರಣ್ಯ ವಿಭಾಗದ ವೈಫಲ್ಯ:ಧರೆಗುರುಳಿದ ಬಹುತೇಕ ಮರಗಳು ವಿದೇಶಿ ಪ್ರಭೇದಗಳಾಗಿದ್ದು, ನೆಲದಾಳಕ್ಕೆ ಬೇರುಗಳು ಇಳಿಯದೆ ಮೇಲ್ಭಾಗದಲ್ಲೇ ಹರಡಿಕೊಂಡಿರುತ್ತದೆ. ಜತೆಗೆ ರಸ್ತೆ, ಫುಟ್​​ಪಾತ್​ ಬದಿಯಲ್ಲಿ ಮರಗಳು ಬೆಳವಣಿಗೆ ಹೊಂದಲು ಮಣ್ಣಿನ ಆಸರೆ ಇರುವುದಿಲ್ಲ. ಇಂತಹ ಸ್ಥಳಗಳಲ್ಲಿ ಬಾಗಿದ ಮರಗಳನ್ನು ತೆರವುಗೊಳಿಸುವಂತೆ ಜನರು ಅರಣ್ಯ ವಿಭಾಗದ ಅಧಿಕಾರಿಗಳಿಗೆ ತಿಳಿಹೇಳಿದರೂ, ತೆರವು ಮಾಡುವ ಗೋಜಿಗೆ ಹೋಗುವುದಿಲ್ಲ.ಸುಸ್ಥಿತಿಯಲ್ಲಿರುವ ಮರಗಳ ತೆರವು ಮಾಡಬಾರದೆಂಬ ನಿಯಮವನ್ನು ಶಿಥಿಲ ಮರಗಳಿಗೂ ಅನ್ವಯಿಸುತ್ತಿರುವ ಕಾರಣ ಭಾರೀ ಮಳೆ ವೇಳೆ ಮರಗಳು ನೆಲಕ್ಕುರುಳುತ್ತಿವೆ. ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಕೈಗೊಂಡಿದ್ದ ವೇಳೆ ಮುಂಗಾರು ಸಂದರ್ಭದಲ್ಲಿ ಮಳೆ ಅನಾಹುತ ತಡೆಗಟ್ಟಲು ಹಳೆಯ ಹಾಗೂ ಶಿಥಿಲ ಮರಗಳನ್ನು ತೆರವು ಮಾಡಬೇಕು. ಈ ಕೆಲಸವನ್ನು ಆಯಾ ವಿಭಾಗ, ವಲಯದ ಅಧಿಕಾರಿಗಳು ಆದ್ಯತೆ ಮೇಲೆ ಪರಿಗಣಿಸಿ ತೆರವುಗೊಳಿಸಬೇಕು ಎಂದು ಸೂಚಿಸಿದ್ದರು. ಆದರೆ, ಈ ಸೂಚನೆ ನೀಡಿ ಮೂರು ವಾರ ಸಮೀಪಿಸುತ್ತಿದ್ದರೂ ಅರಣ್ಯ ವಿಭಾಗ ಮರಗಳ ತೆರವು ಮಾಡಲು ನಿರ್ಲಕ್ಷ್ಯವಹಿಸಿರುವುದು ಅನಾಹುತದಿಂದ ದೃಢಪಟ್ಟಿದೆ.
ಹತ್ತಾರು ಕೋಟಿ ನಷ್ಟ:ಭಾರೀ ಮಳೆಯಿಂದ ಮರ, ಟೊಂಗೆಗಳು ಧರೆಗುರುಳಿದ ವೇಳೆ ಹಲವು ವಿದ್ಯುತ್​ ಕಂಬಗಳ ಮೇಲೆ ಬಿದ್ದಿವೆ. ಇದರಿಂದ ಆ ಭಾಗದಲ್ಲಿ ಬಡಾವಣೆಗಳಲ್ಲಿ ವಿದ್ಯುತ್​ ಸಂಪರ್ಕ ಕಡಿತವಾಗಿದ್ದಲ್ಲದೆ ಬರೋಬರಿ 261 ಕಂಬಗಳು ನೆಲಕ್ಕುರುಳಿವೆ. ದಣ ವಲಯ 137, ದಾಸರಹಳ್ಳಿ 50, ಆರ್​ಆರ್​ ನಗರ 44, ಪಶ್ಚಿಮ ವಲಯದಲ್ಲಿ 21 ಕಂಬಗಳಿಗೆ ಹಾನಿಯಾಗಿದ್ದು, ಹತ್ತಾರು ಕೋಟಿ ರೂ. ನಷ್ಟವಾಗಿದೆ.
ದೂರುಗಳ ವಿವರವಲಯ                     ಮರ             ಕೊಂಬೆ            ತ್ಯಾಜ್ಯದಕ್ಷಿಣ                     136             415               551ಪಶ್ಚಿಮ                    132             324               456ದಾಸರಹಳ್ಳಿ                47              45                  92ಬೊಮ್ಮನಹಳ್ಳಿ             32              43                   75ಯಲಹಂಕ                 29             83                   112ಆರ್​.ಆರ್​.ನಗರ          27             67                     94ಪೂರ್ವ                  25             113                   138ಮಹದೇವಪುರ          19            36                         55ಒಟ್ಟು                 447            1,126                 1,573
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − four =
Remember me
