ಬೆಂಗಳೂರು:ಸ್ಯಾಂಡಲ್​ವುಡ್​ನ ಸ್ಟಾರ್​ ನಟ ಕಿಚ್ಚ ಸುದೀಪ್​ ನೆರೆ ಸಂತ್ರಸ್ಥರ ನೆರವಿಗೆ ಧಾವಿಸಿದ್ದಾರೆ.
ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ನಿರಂತರವಾಗಿ ಸಾಮಾಜಿಕ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ಸುದೀಪ್​, ರಣಭೀಕರ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಉತ್ತರ ಕರ್ನಾಟಕದ ಜನರಿಗೆ ನೆರವಿನ ಹಸ್ತಚಾಚಿದ್ದಾರೆ. ಸಹಾಯವಾಣಿ ನಂಬರ್ ಹಂಚಿಕೊಂಡಿರುವ ಸುದೀಪ್, ಅಗತ್ಯ ಸಾಮಗ್ರಿ ಯಾವ ಗ್ರಾಮಗಳಿಗೆ ಬೇಕು ಎಂದು ಆ ಊರಿನ ಯಾರಾದರೂ ಫೋನ್​ ಮಾಡಿ ತಿಳಿಸಿದರೆ ಕೂಡಲೇ ವ್ಯವಸ್ಥೆ ಮಾಡುವುದಾಗಿ ಮನವಿ ಮಾಡಿದ್ದಾರೆ.
‘ನಮಸ್ಕಾರ ಮಿತ್ರರೇ, ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಜೋರಾಗಿದೆ. ಕಳೆದ ವರ್ಷವೇ ಉತ್ತರ ಕರ್ನಾಟಕ ದೊಡ್ಡ ಪ್ರಮಾಣದ ಪ್ರವಾಹಕ್ಕೆ ಸಿಲುಕಿ ತತ್ತರಿಸಿತ್ತು. ಆ ನೋವಿನಿಂದ ಹೊರಬಂದು ಸಾಮಾನ್ಯ ಸ್ಥಿತಿಗೆ ತಲುಪುವಷ್ಟರಲ್ಲೇ ಕರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಇಡೀ ವಿಶ್ವವೇ ಸಿಲುಕಿತು. ಈಗ ಕರೊನಾ ಸೋಂಕಿನ ಭೀತಿಯಲ್ಲೇ ನಾವೆಲ್ಲ ಹಳೇ ದಿನಗಳ ದಿನಚರಿಯ ಪಟ್ಟಿಯನ್ನು ಅನುಸರಿಸೋಕೆ ಶುರು ಮಾಡಿದ್ದೀವಿ. ಅಷ್ಟರಲ್ಲೇ ಮತ್ತೆ ವರುಣನ ಆರ್ಭಟ ಜೋರಾಗಿದ್ದು, ಉತ್ತರ ಕರ್ನಾಟಕ ಪ್ರವಾಹದ ಸುಳಿಗೆ ಸಿಲುಕಿದೆ’ ಎಂದು ಕಿಚ್ಚ ಸುದೀಪ ಚಾರಿಟಬಲ್​ ಸೊಸೈಟಿ ಮರುಕ ವ್ಯಕ್ತಪಡಿಸಿದೆ.
‘ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವ ನಮ್ಮವರೊಂದಿಗೆ ಜೊತೆಯಾಗೋ ಸಮಯ ಇದು. ಕಲಬುರಗಿ, ರಾಯಚೂರು, ಯಾದಗಿರಿ, ಹುಬ್ಬಳ್ಳಿ, ಧಾರವಾಡ… ಸೇರಿದಂತೆ ಹಲವು ಜಿಲ್ಲೆಯ ಗ್ರಾಮಗಳು ಮಳೆಯಿಂದಾಗಿ ತೊಂದರೆ ಅನುಭವಿಸುತ್ತಿವೆ. ದಯವಿಟ್ಟು ಆ ಗ್ರಾಮಗಳ ಯಾರಾದರೂ ಒಂದಿಬ್ಬರು ನಮ್ಮ ಕಿಚ್ಚ ಸುದೀಪ ಚಾರಿಟಬಲ್​ ಸೊಸೈಟಿ ಸಹಾಯವಣಿ ಸಂಖ್ಯೆ 63603 34455 ಕ್ಕೆ ಕರೆ ಮಾಡಿ. ಅಗತ್ಯವಾಗಿ ಬೇಕಿರುವ ಸಾಮಗ್ರಿ ಎಲ್ಲಿಗೆ ಅತ್ಯಂತ ಅವಶ್ಯಕವಾಗಿದೆ ಎಂಬುದರ ಮಾಹಿತಿ ನೀಡಿ. ಕಷ್ಟದಲ್ಲಿರುವ ನಿಮ್ಮೊಂದಿಗೆ ಕಿಚ್ಚ ಸುದೀಪ ಚಾರಿಟಬಲ್​ ಸೊಸೈಟಿ ಸದಾ ಜೊತೆಯಲ್ಲಿರುತ್ತದೆ. ಆದಷ್ಟು ಬೇಗ ನಿಮ್ಮನ್ನು ನಾವು ಸೇರಲಿದ್ದೇವೆ’ ಎಂದು ಅಭಯ ನೀಡಿದೆ.
ಉತ್ತರ ಕರ್ನಾಟಕ.."ಮಹಾ ಸೇವಕ‌"#ಕಿಚ್ಚ_ಸುದೀಪ‌ಸರ್ ಸದಾ ನಿಮ್ಮೊಂದಿಗೆ.
"ಸಹಾಯವಾಣಿ ಸಂಖ್ಯೆ : 6360334455"
ಹೆಚ್ಚೆನು ಹೇಳೊಲ್ಲ.. ತಡಮಾಡದೆ ಆದಷ್ಟು ಹೆಚ್ಚು ಶೇರ್ ಮಾಡಿ.#ಮೊದಲು_ಮಾನವನಾಗು#KichchaSudeepaCharitableSociety@KicchaSudeep@iampriya06@Kitty_R7@KSCS_Officialpic.twitter.com/zhfdVbDfsT
— Ramesh Kitty (@Kitty_R7)October 15, 2020

ಹೌದು, ಸುದೀಪ್​ರ ಸಹಾಯವಾಣಿಗೆ ಕರೆ ಮಾಡಿ ಪ್ರವಾಹ ಪ್ರದೇಶಗಳ ಸ್ಥಿತಿಯನ್ನ ವಿವರಿಸಿದರೆ ನೆರವು ಸಿಗಲಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರಸ್ಟ್​ ಮಾಹಿತಿ ಹಂಚಿಕೊಂಡಿದೆ. ಈಗಾಗಲೇ ಸುದೀಪ್​ರ ಟ್ರಸ್ಟ್‌, ಹಲವು ಶಾಲೆಗಳ ದತ್ತು, ತುಮಕೂರಿನ ವೃದ್ಧರೊಬ್ಬರ ಮನೆಗೆ ವಿದ್ಯುತ್‌ ವ್ಯವಸ್ಥೆ ಸೇರಿದಂತೆ ಅನೇಕ ಜನಪರ ಕೆಲಸಗಳನ್ನು ಮಾಡಿದೆ.
ಪ್ರಾಣಭೀತಿಯಲ್ಲಿ ರಾತ್ರಿಯಿಡೀ ಮರದ ಮೇಲೆ ಕುಳಿತ್ತಿದ್ದ 110ರ ವೃದ್ಧೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − three =
Remember me
