ಬೆಂಗಳೂರು:ಮನಷ್ಯ ಸೌಂದರ್ಯ ಪ್ರಿಯ ಜೀವಿ.ತಾನು ಧರಿಸುವ ಉಡುಗೆ–ತೊಡುಗೆ,ಹಾಕುವ ಪಾದರಕ್ಷೆ,ಬಳಸುವ ವಿವಿಧ ವಸ್ತುಗಳು ಎಲ್ಲವುಗಳಲ್ಲಿಯೂ ಅಲಂಕಾರವನ್ನು ಬಯಸುತ್ತಾನೆ.ಅದರಲ್ಲೂ ವಿಶೇಷವಾಗಿ ಜೀವನದಲ್ಲಿ ಒಮ್ಮೆ ನಿರ್ಮಿಸುವ ವಾಸದ ಮನೆಯ ಅಲಂಕಾರದಲ್ಲಿ ವಿಶೇಷ ಒಲವು ತೋರಿಸುತ್ತಾರೆ.
ಚಾವಣಿ,ಗೋಡೆ,ಸೀಲಿಂಗ್ ಎಲ್ಲವುಗಳಲ್ಲೂ ಅಲಂಕಾರದ ಅಂಶವಿದೆ.ಚರ ಅಲಂಕಾರವಾಗಿ ರ್ನಿಚರ್,ಕಾರ್ಪೆಟ್,ಆ್ಯಂಟಿಕ್ ವಸ್ತುಗಳನ್ನು ಬಳಕೆ ಮಾಡಿದರೆ;ಸ್ಥಿರ ಅಲಂಕಾರದಲ್ಲಿ ಗೋಡೆಯ ಬಣ್ಣ,ನೆಲಕ್ಕೆ ಹಾಕುವ ಮಾರ್ಬಲ್ಸ್,ಸೀಲಿಂಗ್ ಡಿಸೈನ್,ವಿದ್ಯುತ್ ದೀಪಾಲಂಕಾರಗಳು ಮುಖ್ಯವಾಗಿರುತ್ತವೆ.ವಿಶೇಷವಾಗಿ ಗೋಡೆಯ ಅಲಂಕಾರದಲ್ಲಿ ಟೈಲ್ಸ್‌ಗಳ ಬಳಕೆ ಪ್ರಮುಖವಾಗಿದೆ.
ಟೈಲ್ಸ್ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಕೇವಲ ಸದಾ–ಸೀದಾ ಪ್ಲೈನ್ ಟೈಲ್ಸ್‌ಗಳ ಬಳಕೆ ಬಗ್ಗೆ.ಆದರೆ ಟೈಲ್ಸ್‌ಗಳಲ್ಲಿ ಲೆಕ್ಕವಿಲ್ಲದಷ್ಟು ಬಗೆಗಳಿವೆ.ವರ್ಣರಂಚಿತ,ಚಿತ್ತಾರಯುಕ್ತ,ಹಲವು ನಮೂನೆಯ ಕಲರ್‌ುಲ್ ಟೈಲ್ಸ್‌ಗಳು ಗೋಡೆಯ ಅಲಂಕಾರಕ್ಕೆ ಬಳಕೆಯಾಗುತ್ತವೆ.ಗುಣಮಟ್ಟ ಮತ್ತು ಬೆಲೆಯಲ್ಲೂ ಕೂಡಾ ಹಲವು ಬಗೆಗಳಿದ್ದು,ಅವರವರ ಅಭಿರುಚಿ ಮತ್ತು ಆರ್ಥಿಕ ಸಾಮರ್ಥ್ಯಕ್ಕನುಗುಣವಾದ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.
ಟೈಲ್ಸ್‌ಗಳನ್ನು ಗೋಡೆಗಳಿಗೆ ಅಳವಡಿಸುವುದರಿಂದ ಮನೆಯ ಸೌಂದರ್ಯ ಹೆಚ್ಚುವುದಲ್ಲದೆ,ನಿರ್ವಹಣೆ ಸುಲಭವಾಗಿರುತ್ತದೆ.ಚಿಕ್ಕಮಕ್ಕಳು ಗೋಡೆಯ ಮೇಲ್ ಬರೆಯುತ್ತಾರೆಂಬ ಭಯ ಇರುವುದಿಲ್ಲ.ಒಂದು ವೇಳೆ ಬರೆದರೂ ಅದನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
ಟೈಲ್ಸ್‌ಗಳನ್ನು ಬಳಸುವುದರಿಂದ ಮನೆಯ ಬ್ರೈಟ್‌ನೆಸ್ ಹೆಚ್ಚಾಗಿರುತ್ತದೆ.ಹಗಲಿನಲ್ಲಿ ಸೂರ್ಯನ ಬೆಳಕು ಹಾಗೂ ರಾತ್ರಿ ವೇಳೆ ಲೈಟ್ ಬೆಳಕು ಗೋಡೆಯ ಮೇಲಿನಿಂದ ಪ್ರತಿಲನವಾಗುವುದರಿಂದ ಮನೆಯ ಅಂದ ಹೆಚ್ಚಾಗುತ್ತದೆ.
ಟೈಲ್ಸ್‌ಗಳನ್ನು ಮನೆಯ ಅಲಂಕಾರದ ಜೊತೆಗೆ ಅನಿವಾರ್ಯವಾಗಿಯೂ ಬಳಸಲಾಗುತ್ತದೆ!ಅಡುಗೆಮನೆಯಲ್ಲಿ ಒಗ್ಗರಣೆ,ಕರಿದ ತಿಂಡಿ ಮಾಡುವಾಗ ಉತ್ಪತ್ತಿಯಾಗುವ ಜಿಡ್ಡಿನಂಶವು ಸಾದಾ ಗೋಡೆಯ ಮೇಲೆ ಕೂತರೆ ಅದನ್ನು ತೆಗೆಯುವುದು ಅಸಾಧ್ಯ.ಆದರೆ ಗೋಡೆಯ ಮೇಲೆ ಟೈಲ್ಸ್ ಇದ್ದರೆ ಸ್ವಚ್ಛ ಮಾಡುವುದು ಸುಲಭವಾಗುತ್ತದೆ.ಜೊತೆಗೆ ಸ್ನಾನಗೃಹದಲ್ಲಿ ನೀರು ನಿರಂತರವಾಗಿ ಬಳಕೆಯಾಗುವುದರಿಂದ ಮಾಮೂಲಿ ಗೋಡೆಗಳಾದರೆ ನೀರಿನಿಂದ ಹಾಳಾಗುವ ಸಾಧ್ಯತೆ ಇರುತ್ತದೆ.ಹಾಗೂ ಸ್ನಾನ ಮಾಡುವಾಗ ಶಾಂಪು ಮತ್ತು ಸೋಪಿನ ನೊರೆಗಳು ಗೋಡೆಯ ಮೇಲೆ ಕೂತು ಹಾಳಾಗುವ ಸಂಭವ ಇರುತ್ತದೆ.ಟೈಲ್ಸ್ ಆದರೆ ನೀರಿನಿಂದ ಕೂಡಲೇ ಸ್ವಚ್ಛಗೊಳಿಸಬಹುದು.ಈ ಕಾರಣದಿಂದ ಅಡುಗೆಮನೆ ಮತ್ತು ಸ್ನಾನಗೃಹದಲ್ಲಿ ಅಲಂಕಾರಕ್ಕಿಂತ ಅನಿವಾರ್ಯವಾಗಿ ಟೈಲ್ಸ್ ಬಳಸುತ್ತಾರೆ.
ಟೈಲ್ಸ್‌ಗಳು ಅತಿಹೆಚ್ಚು ಬಳಕೆಯಾಗುವ ಸ್ಥಳವೇ ಪೂಜಾಮಂದಿರ.ಎಷ್ಟೇ ಬಡವರಾದರೂ,ಮನೆಯ ಬೇರಾವುದೇ ಭಾಗಕ್ಕೆ ಟೈಲ್ಸ್ ಬಳಸದೇ ಇದ್ದರೂ,ಪೂಜಾ ಮಂದಿರಕ್ಕೆ ಮಾತ್ರ ಟೈಲ್ಸ್ ಬಳಸುತ್ತಾರೆ.ಪೂಜಾ ಮಂದಿರಕ್ಕಾಗಿ ವಿಶೇಷ ಟೈಲ್ಸ್‌ಗಳು ಲಭ್ಯ ಇದ್ದು,ತಮಗಿಷ್ಟವಾದ ದೇವರ ಚಿತ್ರವುಳ್ಳ ಟೈಲ್ಸ್‌ಗಳು,ಮಂಗಳಕರವಾದ ದೀಪ,ಕಳಸ,ಹಾರ,ತೋರಣ ಮಾದರಿಯ ಟೈಲ್ಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು,ಇವುಗಳ ಬಳಕೆಯಿಂದ ಪೂಜಾ ಮಂದಿರದ ಅಲಂಕಾರದ ಜೊತೆಗೆ ಭಕ್ತಿಯ ವಾತಾವರಣವನ್ನು ನಿರ್ಮಿಸಲು ಪೂರಕವಾಗಿದೆ.ಜೊತೆಗೆ ಪೂಜಾ ಮಂದಿರದಲ್ಲಿ ನಿರಂತರವಾಗಿ ದೀಪವನ್ನು ಬೆಳಗುವುದರಿಂದ ಎಣ್ಣೆಯ ಜಿಡ್ಡು ಹಾಗೂ ದೀಪದ ಕಾರ್ಬನ್ ಸ್ವಚ್ಛಗೊಳಿಸುವುದು ಕೂಡಾ ಸುಲಭ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − nine =
Remember me
