ಬೆಂಗಳೂರು:ಗಣರಾಜ್ಯೋತ್ಸವ ಪ್ರಯುಕ್ತ ಲಾಲ್​ಬಾಗ್​ ಸಸ್ಯೋದ್ಯಾನದಲ್ಲಿ ಜ.20ರಿಂದ 30ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಇದು 213ನೇ ಫಲಪುಷ್ಪ ಪ್ರದರ್ಶನವಾಗಿದ್ದು, ಈ ಬಾರಿ ಬೆಂಗಳೂರು ನಗರದ ಚಿತ್ರಣ ಕಂಗೊಳಿಸಲಿದೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ತೋಟಗಾರಿಕಾ ಸಚಿವ ಮುನಿರತ್ನ, ಈ ವರ್ಷ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಥೀಮ್ ಬೆಂಗಳೂರು ನಗರದ ಇತಿಹಾಸ. ಜ.20ರಿಂದ 30ರವರೆಗೆ ನಡೆಯಲಿದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. 10-12 ಲಕ್ಷ ಜನರು ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದರು.
ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ 360 ಸ್ಪರ್ಧೆಗಳಿವೆ. ಜಪಾನೀಸ್ ಕಲೆಗಳ ಪ್ರದರ್ಶನ, 65ಕ್ಕೂ ಹೆಚ್ಚು ವಾರ್ಷಿಕ ಸಸ್ಯಗಳ ಪ್ರದರ್ಶನ, ವಿದೇಶದಿಂದ ಬರುವ ಹೂವುಗಳ ಪ್ರದರ್ಶನವೂ ಇರಲಿದೆ. 11 ದೇಶಗಳಿಂದ 69 ಬಗೆಯ ಹೂವುಗಳ ಪ್ರದರ್ಶನ ನಡೆಯಲಿದೆ. ಡಾರ್ಜಲಿಂಗ್​ನ ಹೂವುಗಳೂ ಇರಲಿದೆ. ಸುಮಾರು ಒಂದು ಲಕ್ಷ ಹೂವಿನ ಕುಂಡಗಳನ್ನ ಬಳಸಲಾಗಿದೆ. ಲಾಲ್​ಬಾಗ್​ ನಾಲ್ಕು ಗೇಟ್​ಗಳಿಂದಲೂ ಜನರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು.
ವರ್ಟಿಕಲ್ ಗಾರ್ಡನ್ ರೂಪದಲ್ಲಿ ಐತಿಹಾಸಿಕ ಬೆಂಗಳೂರು ಗಡಿಗೋಪುರ ಅನಾವರಣಗೊಳ್ಳಲಿದೆ. ಮೆಗಾ ಫ್ಲೋರಲ್ ಫ್ಲೋ ಪರಿಕಲ್ಪನೆ ಪುಷ್ಪ ಪಿರಾಮಿಡ್​ಗಳು ಕಂಗೊಳಿಸಲಿದೆ. 1,500 ವರ್ಷಗಳ ಬೆಂಗಳೂರು ಇತಿಹಾಸ ಸಾರಲಿದೆ ಎಂದು ವಿವರಿಸಲಿದೆ.
9ನೇ ತರಗತಿ ವಿದ್ಯಾರ್ಥಿನಿ ಜತೆ ಬೆಳಗಾವಿಯಲ್ಲಿ ಶಿಕ್ಷಕನ ಪ್ರೇಮದಾಟ: ಖಾಸಗಿ ವಿಡಿಯೋ ವೈರಲ್​

‘ನಾ ನಾಯಕಿ’ ಸಮಾವೇಶಕ್ಕೆ ಖಡಕ್​ ಎಂಟ್ರಿ ಕೊಟ್ಟ ಪ್ರಿಯಾಂಕಾ! ವಿಶೇಷ ಯೋಜನೆ ಘೋಷಿಸುತ್ತಲೇ ರಾಜಕೀಯದಲ್ಲಿ ಸ್ತ್ರೀಶಕ್ತಿಯ ಮಹತ್ವ ಸಾರಿದ ನಾಯಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
