
ವಿಜಯವಾಣಿ ಸುದ್ದಿಜಾಲ, ಬೆಂಗಳೂರು:ರೈತರಿಗೆ ಒಳ್ಳೆಯದಾಗುವ ಕೆಲಸಗಳನ್ನು ಮಾಡಲು ಸರ್ಕಾರ ಸಿದ್ದವಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.ಬಿಜೆಪಿಯ ಎನ್. ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿ,ರಾಜ್ಯದಲ್ಲಿ ಕತ್ತರಿಸಿದ ಹೂವುಗಳಾದ ಗುಲಾಬಿ, ಜರ್ಬೆರಾ, ಕಾರ್ನೆಷನ್, ಜಿಪ್ಸೊಫಿಲಾ, ಸ್ನ್ಯಾಪ್‌ಡ್ರಾಗನ್, ಸಲೋಶಿಯಾ, ಹೈಡ್ರಾಂಜಿಯಾ, ಡೆಲಿಫಿನಿಯಮ್, ಲಿಸಿಯಾಂತಸ್ ಪ್ರೋಟಿಯಾಸ್, ಸೇವಂತಿಗೆ ಹಾಗೂ ಅಂಥೂರಿಯಂ ಮತ್ತು ಬಿಡಿ ಹೂವುಗಳಾದ ಗುಲಾಬಿ, ಕನಕಾಂಬರ, ಸುಗಂಧರಾಜ, ಗ್ಲಾಡಿಯೋಲಸ್, ಚೆಂಡುಹೂವು, ಆಸ್ಟರ್, ಸೇವಂತಿಗೆ ಮತ್ತು ಮಲ್ಲಿಗೆ ಹೂವುಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.ರಾಜ್ಯದಿಂದ 81.44 ಕೋಟಿ ಮೌಲ್ಯದ 2059 ಮೆಟ್ರಿಕ್ ಟನ್ ಹೂವುಗಳನ್ನು ರಪ್ತು ಮಾಡಲಾಗುತ್ತಿದೆ.ವಿವಿಧ ಜಾತಿಯ ಹೂವಿನ ಬೆಳೆಗಳನ್ನು ಬೆಳೆಯಲು ಗರಿಷ್ಟ 1 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನವನ್ನು ನೀಡಲಾಗುತ್ತಿದೆ ಎಂದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − three =
Remember me
