ಬೆಂಗಳೂರು:ಯುವಕರಿಗೆ ಆದರ್ಶವಾಗಿರುವ ಸ್ವಾಮಿ ವಿವೇಕಾನಂದರಿಗೆ ಪುಪ್ಪನಮನ ಸಲ್ಲಿಸಲು ಸಸ್ಯಕಾಶಿ ಲಾಲ್​ಬಾಗ್ ಸಜ್ಜಾಗಿದ್ದು, ಶುಕ್ರವಾರ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಅಧಿಕೃತವಾಗಿ ಚಾಲನೆ ದೊರೆಯಲಿದೆ.
ಸ್ವಾಮಿ ವಿವೇಕಾನಂದರ 157ನೇ ಜನ್ಮದಿನಾಚರಣೆ ಸಂಭ್ರಮಾರ್ಥ ಉದ್ಯಾನದೆಲ್ಲೆಡೆ ವಿವೇಕ ಸ್ಮರಣೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಲಾಲ್​ಬಾಗ್ ಗಾಜಿನ ಮನೆ ಆವರಣದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಸವನಗುಡಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ವಿ. ಸೋಮಣ್ಣ, ಶಾಸಕ ಉದಯ್ ಗರುಡಾಚಾರ್, ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಗಣರಾಜ್ಯೋತ್ಸವ ಅಂಗವಾಗಿ ಜ.26ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಸ್ವಾಮಿ ವಿವೇಕಾನಂದರ ಸಾಧನೆ ಅನಾವರಣಗೊಳಿಸಲಾಗುತ್ತಿದೆ. ಲಕ್ಷಾಂತರ ಹೂವುಗಳನ್ನು ಬಳಸಿ ವಿವೇಕಾನಂದರ 16 ಅಡಿ ಎತ್ತರದ ಪ್ರತಿಮೆ, ಚಿಕಾಗೋದಲ್ಲಿರುವ ವಿವೇಕಾನಂದ ಸ್ಮಾರಕ, ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಸ್ಮಾರಕ ಸೇರಿ ವಿವಿಧ ಪ್ರತಿಕೃತಿಗಳನ್ನು ಹೂವಿನಿಂದ ನಿರ್ವಿುಸಲಾಗುತ್ತಿದೆ. 1.6 ಕೋಟಿ ರೂ. ವೆಚ್ಚದಲ್ಲಿ 6 ಲಕ್ಷ ಹೂಗಳನ್ನು ಬಳಕೆ ಮಾಡಲಾಗುತ್ತಿದೆ.
ಇತರೆ ಲಗೇಜ್​ಗೆ ನಿರ್ಬಂಧ:ಮೊಬೈಲ್ ಹಾಗೂ ಕ್ಯಾಮರಾಗಳಿಗೆ ಮಾತ್ರ ಲಾಲ್​ಬಾಗ್ ಒಳಗೆ ತರಲು ಅವಕಾಶಗಳಿರುತ್ತದೆ. ಇತರೆ ಲಗೇಜ್​ಗೆ ಪ್ರವೇಶ ನಿರ್ಬಂಧಿಸಲಾಗಿದೆ. ಲಾಲ್​ಬಾಗ್ ಒಳಗಿನ ಮಳಿಗೆದಾರರು ಹಾಗೂ ಸಾರ್ವಜನಿಕರು ಪ್ಲಾಸ್ಟಿಕ್ ಬಳಸುವುದನ್ನು ನಿಷೇಧಿಸಲಾಗಿದೆ. ಒಂದು ಅಗ್ನಿಶಾಮಕದಳ, ಪ್ಯಾರಾ ಮೆಡಿಕಲ್​ಫೋರ್ಸ್ ಒಳಗೊಂಡು ಐದು ಆಂಬುಲೆನ್ಸ್, 37 ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕ್ಲಾಕ್ ರೂಂ ಸೌಲಭ್ಯವಿರಲಿದೆ.
ಲಾಲ್​ಬಾಗ್​ನಲ್ಲಿಯೇ ಪೊಲೀಸ್ ಔಟ್​ಪೋಸ್ಟ್ ತೆರೆಯಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಟಿಕೆಟ್ ದರದ ವಿವರ
ವಯಸ್ಕರಿಗೆ 70 ರೂ. ಹಾಗೂ ಮಕ್ಕಳಿಗೆ 20 ರೂ. ಟಿಕೆಟ್ ನಿಗದಿಪಡಿಸಲಾಗಿದ್ದು, ಉದ್ಯಾನದ ಎಲ್ಲ ಪ್ರವೇಶ ದ್ವಾರಗಳಲ್ಲಿ ಟಿಕೆಟ್ ಲಭ್ಯವಿರಲಿದೆ. ಬೆಳಗ್ಗೆ 9ರಿಂದ 6.30ರ ವರೆಗೆ ಮಾತ್ರ ಟಿಕೆಟ್ ಖರೀದಿಸಬಹುದು.
ಶಾಲಾಮಕ್ಕಳಿಗೆ ಉಚಿತ ಪ್ರವೇಶ
ಶಾಲಾಮಕ್ಕಳು ಪ್ರದರ್ಶನವನ್ನು ಉಚಿತವಾಗಿ ವೀಕ್ಷಿಸಲು ತೋಟಗಾರಿಕೆ ಇಲಾಖೆ ಅನುವು ಮಾಡಿಕೊಟ್ಟಿದೆ. ಜ.18, 20, 21, 22, 23, 24ರಂದು ಖಾಸಗಿ ಮತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಆಯಾ ಶಾಲೆಯ ಗುರುತಿನ ಚೀಟಿಯೊಂದಿಗೆ ಆಗಮಿಸಿ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಪ್ರದರ್ಶನ ಕಣ್ತುಂಬಿಕೊಳ್ಳಬಹುದು.
ವಾಹನ ನಿಲುಗಡೆ ನಿಷೇಧ
ಫಲಪುಷ್ಪ ಪ್ರದರ್ಶನದ ವೇಳೆ ಲಾಲ್​ಬಾಗ್​ನಲ್ಲಿ ವಾಹನ ಪ್ರವೇಶ, ನಿಲುಗಡೆ ನಿಷೇಧಿಸಲಾಗಿದೆ. ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಮತ್ತು ಪ್ರವಾಸಿಗರು ವಾಹನಗಳನ್ನು ಶಾಂತಿನಗರ ಬಸ್​ನಿಲ್ದಾಣದಲ್ಲಿರುವ ಬಹುಮಹಡಿ ವಾಹನ ನಿಲ್ದಾಣ, ಜೆ.ಸಿ. ರಸ್ತೆಯ ಮಯೂರ ಹೋಟೆಲ್ ಬಳಿ ನಿಲುಗಡೆ ಮಾಡಬಹುದು.ಅಲ್-ಅಮೀನ್ ಕಾಲೇಜು ಮೈದಾನದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲಾ ಮಕ್ಕಳ ವಾಹನ ಹಾಗೂ ಅಂಗವಿಕಲರ ವಾಹನಗಳಿಗೆ ಮಾತ್ರ ಲಾಲ್​ಬಾಗ್​ನ ಜೋಡಿರಸ್ತೆಯಿಂದ ಒಳ ಪ್ರವೇಶಿಸಿ, ಬಂಡೆಯ ಎಡ ಪ್ರದೇಶದಲ್ಲಿರುವ ವಾಹನ ನಿಲ್ದಾಣದಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
