ಸ.ದಾ. ಜೋಶಿ
ಬೀದರ್:ಲಾಕ್​ಡೌನ್​ನಿಂದಾಗಿ ರಾಜ್ಯದಲ್ಲಿ 10,825 ಹೆಕ್ಟೇರ್​ನಲ್ಲಿ ಬೆಳೆದಿದ್ದ ಹೂವುಗಳು ಹಾನಿಗೀಡಾಗಿವೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಹೂ ಬೆಳೆಗಾರರಿಗೆ ಸರ್ಕಾರ ಪರಿಹಾರ ಧನ ಘೊಷಿಸಿದ್ದು, ಸಮೀಕ್ಷೆ ಪ್ರಕಾರ 27.06 ಕೋಟಿ ರೂ. ಪರಿಹಾರ ಕೈಸೇರುವ ಬಗ್ಗೆ ಅಂದಾಜಿಸಲಾಗಿದೆ. ಲಾಕ್​ಡೌನ್ ಹಿನ್ನೆಲೆ ಎಲ್ಲ ದೇವಾಲಯಗಳು ಬಂದ್ ಆಗಿವೆ. ಮದುವೆ, ಸಭೆ- ಸಮಾರಂಭ ಮತ್ತಿತರ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದರಿಂದ ಹೂವಿಗೆ ಬೇಡಿಕೆ ಇರಲಿಲ್ಲ. ಅನೇಕ ಬೆಳೆಗಾರರು ಕಟಾವು ಮಾಡದ್ದರಿಂದ ಹೊಲ್ಲದಲ್ಲೇ ಹಾಳಾಗಿವೆ. ಹೀಗಾಗಿ ಸರ್ಕಾರ ರೈತರಿಗೆ ಗರಿಷ್ಠ ಒಂದು ಹೆಕ್ಟೇರ್​ಗೆ (ಎರಡೂವರೆ ಎಕರೆ) 25 ಸಾವಿರ ರೂ. ಪರಿಹಾರ ಘೊಷಿಸಿ, 31.83 ಕೋಟಿ ರೂ. ಅನುದಾನ ಒದಗಿಸಿದೆ.
ಇದನ್ನೂ ಓದಿ:ಹಾವು ಕಚ್ಚಿ ಮೃತಪಟ್ಟ ಮಹಿಳೆಯ ಸಾವಿನ ಸುತ್ತ ಅನುಮಾನದ ಹುತ್ತ: ಚಿನ್ನಾಭರಣವೂ ನಾಪತ್ತೆ!
ರಾಜ್ಯದಲ್ಲಿ ಬೇಸಿಗೆ ಹಂಗಾಮಿನಲ್ಲಿ 12,735 ಹೆಕ್ಟೇರ್​ನಲ್ಲಿ ಅಲ್ಪಾವಧಿ ಚಂಡು, ಸೇವಂತಿಗೆ, ಆಸ್ಟರ್ ಇತ್ಯಾದಿ ಹೂವು ಮತ್ತು ಬಹುವಾರ್ಷಿಕ ಕನಕಾಂಬರ, ಗುಲಾಬಿ, ಮಲ್ಲಿಗೆ, ಕಾಕಡ, ಬರ್ಡ್ ಆಫ್ ಪ್ಯಾರಡೈಸ್ ಮುಂತಾದ ಹೂವು ಬೆಳೆಯಲಾಗುತ್ತಿದ್ದು, 37,861 ಟನ್ ಉತ್ಪಾದನೆ ನಿರೀಕ್ಷಿಸಲಾಗಿತ್ತು. ಸುಮಾರು 650 ಹೆಕ್ಟೇರ್ ಸಂರಕ್ಷಿತ ಬೇಸಾಯದಲ್ಲಿ ಕಟ್ ಫ್ಲಾವರ್ ಗುಲಾಬಿ, ಜರ್ಬೆರಾ, ಕಾರ್ನೆಷನ್, ಆರ್ಕಿಡ್​ಗಳನ್ನು ಬೆಳೆಯಲಾಗಿತ್ತು. ಸಮೃದ್ಧ ವಾಗಿ ಬಂದಿದ್ದ ಎಲ್ಲ ಬೆಳೆಗಳಿಗೆ ಕರೊನಾ ಕುತ್ತು ತಂದಿದೆ.
ಇದನ್ನೂ ಓದಿ:ಕ್ವಾರಂಟೈನ್​ನಲ್ಲಿದ್ದ ಗೆಳೆಯನಿಗೆ ಹಲ್ವಾ ತಗೊಂಡು ಹೋದವನನ್ನು ಹುಡುಕುತ್ತಿದ್ದಾರೆ ಪೊಲೀಸರು!
ಬೆಂಗಳೂರು ಗ್ರಾಮಾಂತರದಲ್ಲಿ ಅಧಿಕ ಹಾನಿ:ರಾಜ್ಯದಲ್ಲಿ ಹೂವು ಬೆಳೆ ಹಾನಿ ಅನುಭವಿಸಿರುವ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಈ ಜಿಲ್ಲೆಯಲ್ಲಿ 1821 ಹೆಕ್ಟೇರ್ ಭೂಪ್ರದೇಶ ದಲ್ಲಿ ಹೂವು ಬೆಳೆಯಲಾಗಿದ್ದು, 4.55 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ. ನಂತರದ ಸ್ಥಾನದಲ್ಲಿ ಚಿಕ್ಕಬಳ್ಳಾಪುರ (1673 ಹೆಕ್ಟೇರ್), ಚಿತ್ರದುರ್ಗ (966), ಬೆಂಗಳೂರು ನಗರ (938), ಕೋಲಾರ ಜಿಲ್ಲೆಯಲ್ಲಿ 860 ಹೆಕ್ಟೇರ್ ಭೂಪ್ರದೇಶ ಗುರುತಿಸಲಾಗಿದೆ. ಕೊಡುಗೆ ಜಿಲ್ಲೆ ರಾಜ್ಯದಲ್ಲೇ ಕಮ್ಮಿ ಹಾನಿ ಕ್ಷೇತ್ರ ಹೊಂದಿದ್ದು, ಕೇವಲ 8 ಹೆಕ್ಟೇರ್ ಅಷ್ಟೇ. ಕಲಬುರಗಿ ಜಿಲ್ಲೆಯಲ್ಲಿ 170 ಹೆಕ್ಟೇರ್, ಬಳ್ಳಾರಿ 390, ಕೊಪ್ಪಳ 137, ರಾಯಚೂರು 33 ಹಾಗೂ ಯಾದಗಿರಿ ಜಿಲ್ಲೆಯ 20 ಹೆಕ್ಟೇರ್ ಹಾನಿಯಾದ ಬಗ್ಗೆ ಗುರುತಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ 82 ಹೆಕ್ಟೇರ್ ಹಾನಿಗೀಡಾಗಿದೆ. ಇದರ ಪರಿಹಾರ ಧನ ಕೇವಲ 20.39 ಲಕ್ಷ ರೂ. ಅಂದಾಜಿಸಲಾಗಿದೆ.
ಇದನ್ನೂ ಓದಿ:‘ಮಹಾ’ ಪ್ರವಾಹ: 24 ಗಂಟೆಗಳ ಅವಧಿಯಲ್ಲಿ ಖಚಿತವಾಯಿತು ಕೋವಿಡ್19ರ 216 ಕೇಸ್
ಲಾಕ್​ಡೌನ್ ನಂತರ ನಾಟಿ ಪರಿಗಣಿಸಲ್ಲ:ಲಾಕ್​ಡೌನ್​ಗೆ ಮುನ್ನ ನಾಟಿ ಮಾಡಿದ ಹೂ ಬೇಸಾಯಗಾರರಿಗೆ ಮಾತ್ರ ಸರ್ಕಾರದ ಪರಿಹಾರ ಧನ ಸಿಗಲಿದೆ. ಲಾಕ್​ಡೌನ್ ನಂತರ (ಮಾ.24) ನಾಟಿ ಮಾಡಿರುವ ಬೆಳೆಗಾರರಿಗೆ ನಷ್ಟ ಪರಿಹಾರಕ್ಕೆ ಪರಿಗಣಿಸುವುದಿಲ್ಲ ಎಂದು ತೋಟಗಾರಿಕೆ ನಿರ್ದೇಶಕರು ಕಳೆದ ವಾರ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:#TTDForSale ಟ್ವಿಟರ್​ನಲ್ಲಿ ಟ್ರೆಂಡಿಂಗ್​: ಅನುಪಯುಕ್ತ ಆಸ್ತಿ ಮಾರಾಟಕ್ಕೆ ಟಿಟಿಡಿ ತೀರ್ಮಾನ
28ರವರೆಗೆ ಕಾಲಾವಕಾಶ:2019-20ರ ಮುಂಗಾರು, ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ರೈತರು ಯಾವುದೇ ದಾಖಲಾತಿ ಕೊಡುವ ಅಗತ್ಯವಿಲ್ಲ. ಸಮೀಕ್ಷೆಯಲ್ಲಿ ದಾಖಲಾಗದ ಹೂ ಬೆಳೆಗಾರರು ಅರ್ಜಿ ಸಲ್ಲಿಸಬೇಕು. ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್​ಬುಕ್ ಜೆರಾಕ್ಸ್ ಪ್ರತಿ, ಸ್ವಯಂ ದೃಢೀಕೃತ ಘೊಷಣಾ ಪತ್ರದೊಂದಿಗೆ ಅರ್ಜಿ ಸಲ್ಲಿಸಲು ಮೇ 28ರವರೆಗೆ ಕಾಲಾವಕಾಶ ಇದೆ. ಹೀಗಾಗಿ ಈಗ ಗುರುತಿಸಿರುವ 10,825 ಹೆಕ್ಟೇರ್​ನಲ್ಲಿ ಸ್ವಲ್ಪ ಹೆಚ್ಚಾಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವಗೆ ತಿಳಿಸಿದ್ದಾರೆ.
PHOTOS/VIDEO| ಯುವತಿಯರ ಹೃದಯಚೋರ ಈ ಲಿಪ್​ಸ್ಟಿಕ್​ ಕಿಂಗ್​- ಈತನ ಸಿಂಗಲ್ಸ್​ ವಹಿವಾಟು 1,100 ಕೋಟಿ ರೂಪಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + four =
Remember me
