|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಆರ್ಥಿಕ ಬೆಳವಣಿಗೆ ವಿಚಾರದಲ್ಲಿ ರಾಜಧಾನಿ ಬೆಂಗಳೂರು ಹಾಗೂ ಇತರ ಜಿಲ್ಲೆಗಳ ನಡುವಿನ ಅಂತರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅರ್ಧದಷ್ಟು ಜಿಲ್ಲೆಗಳು ಬೆಂಗಳೂರಿನ ತಲಾ ಆದಾಯದ ಶೇ.25ರಷ್ಟನ್ನೂ ಹೊಂದಿಲ್ಲ. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹೊರತಂದಿರುವ ವರದಿಯಲ್ಲಿ ಈ ಅಂಶ ಗೋಚರವಾಗಿದೆ. ತಲಾದಾಯದಲ್ಲಿ ಕಲಬುರಗಿ, ಬೀದರ್ ಕೊನೆಯ ಸ್ಥಾನದಲ್ಲಿವೆ. ಬೆಂಗಳೂರು ಹೊರತುಪಡಿಸಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ ಜಿಲ್ಲೆಗಳ ಸ್ಥಿತಿ ಇತರ ಜಿಲ್ಲೆಗೆ ಹೋಲಿಸಿದರೆ ಉತ್ತಮವಾಗಿದೆ. ಕಂದಾಯ ವಿಭಾಗಗಳಲ್ಲಿನ ಜಿಲ್ಲಾದಾಯ ಮತ್ತು ತಲಾದಾಯದಲ್ಲಿನ ವ್ಯತ್ಯಾಸ ಗಮನಿಸುವುದಾದರೆ ಬೆಂಗಳೂರು ವಿಭಾಗ ಉತ್ತಮ ಸ್ಥಿತಿಯಲ್ಲಿದೆ. ನಂತರದ ಸ್ಥಾನದಲ್ಲಿ ಮೈಸೂರು ವಿಭಾಗ, ಬೆಳಗಾವಿ ಹಾಗೂ ಕೊನೆಯದಾಗಿ ಕಲಬುರಗಿಯಿದೆ. ಇಲ್ಲಿನ ಕಂದಾಯ ವಿಭಾಗದಲ್ಲಿ ಬರುವ ಜಿಲ್ಲೆಗಳ ತಲಾ ಆದಾಯ ಬಹಳ ಕಡಿಮೆ.
ರಾಜ್ಯದ ನಿವ್ವಳ ಆಂತರಿಕ ಉತ್ಪನ್ನ ವನ್ನು (ಎಸ್​ಜಿಡಿಪಿ) ವಿತ್ತೀಯ ವರ್ಷದ ನಡುವಿನ ಅಂದಾಜು ಜನಸಂಖ್ಯೆಯಿಂದ ಅಂದರೆ ಪ್ರತಿವರ್ಷದ ಅ. 1ರಂದು ಇರಬಹುದಾದ ಜನಸಂಖ್ಯೆಯಿಂದ ಭಾಗಿಸಿ ತಲಾದಾಯವನ್ನು ಲೆಕ್ಕ ಹಾಕಲಾಗುತ್ತದೆ. 2021-22ನೇ ಸಾಲಿನಲ್ಲಿ ರಾಜ್ಯದ ನಿವ್ವಳ ತಲಾದಾಯವು 2,65,623 ರೂಪಾಯಿಗಳಷ್ಟಿದ್ದು, ಇದು 2023-24ನೇ ಸಾಲಿಗೆ ಶೇ.13.6 ರಷ್ಟು ಹೆಚ್ಚಳದೊಂದಿಗೆ 3,01,673 ರೂಪಾಯಿ ಗಳಷ್ಟಾಗುವುದೆಂದು ಅಂದಾಜಿಸಲಾಗಿದೆ. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯವು ಪ್ರತಿವರ್ಷವೂ ರಾಜ್ಯದ ಅಂಕಿ-ಅಂಶಗಳ ನೋಟ ಮತ್ತು ಜಿಲ್ಲಾ ಅಂಕಿ-ಅಂಶಗಳ ನೋಟ ಎಂಬ ಪ್ರಮುಖ ಪ್ರಕಟಣೆಗಳನ್ನು ಹೊರತರುತ್ತದೆ. ಈ ಪ್ರಕಟಣೆಯು ಜನಗಣತಿ, ಕೃಷಿ ಗಣತಿ ಮತ್ತು ಜಾನುವಾರು ಗಣತಿ ಮತ್ತು ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳ ಮಾಹಿತಿಯೊಂದಿಗೆ ಜಿಲ್ಲಾ, ತಾಲೂಕುವಾರು ಸಾಮಾಜಿಕ ಮತ್ತು ಆರ್ಥಿಕ ಸೂಚಕಗಳು ಸೇರಿ ಅಂದಾಜು 2000 ಅಂಶಗಳ ಮಾಹಿತಿಯನ್ನು ಒದಗಿಸುತ್ತದೆ. ಈ ಮಾಹಿತಿಯನ್ನು ಜಿಲ್ಲಾ ಮತ್ತು ತಾಲೂಕು ಆಂತರಿಕ ಉತ್ಪನ್ನದ ಅಂದಾಜುಗಳ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ.
ಜಿಲ್ಲಾವಾರು ತಲಾದಾಯ ಎಂಬುದು ಸರಾಸರಿಯಷ್ಟೇ. ಎಲ್ಲರಿಗೂ ಅಷ್ಟೇ ಆದಾಯ ಇದೆ ಎಂದರ್ಥವಲ್ಲ. ಒಂದು ಜಿಲ್ಲೆ ಅಥವಾ ಒಂದು ರಾಜ್ಯದ ಜನಸಂಖ್ಯೆ ಏರಿಕೆಗಿಂತ ಜನರ ಆದಾಯ ಪ್ರಮಾಣ ಹೆಚ್ಚಾದಾಗ ತಲಾದಾಯ ಏರಿಕೆಯಾಗುತ್ತದೆ. ತಲಾದಾಯದಿಂದ ಜನರ ಜೀವನಮಟ್ಟವನ್ನು ಅಳೆಯಲಾಗುತ್ತದೆ. ತಲಾದಾಯ ಹೆಚ್ಚಾಗುತ್ತಿದೆ ಎಂದರೆ ಜೀವನಮಟ್ಟ ಸುಧಾರಣೆ ಆಗುತ್ತಿದೆ ಎಂದು ಹೇಳಬಹುದು.
|ಪ್ರೊ. ಬಿ.ಎಂ. ಕುಮಾರಸ್ವಾಮಿಅರ್ಥಶಾಸ್ತ್ರಜ್ಞ
ರಾಷ್ಟ್ರೀಯ ಮಟ್ಟಕ್ಕಿಂತ ಹೆಚ್ಚಳ:ರಾಜ್ಯದ ತಲಾದಾಯವು ರಾಷ್ಟ್ರೀಯ ತಲಾದಾಯಕ್ಕಿಂತ ಹೆಚ್ಚಳವಾಗಿದೆ. ಹಿಂದಿನ ಸಾಲಿಗೆ ಹೋಲಿಸಿದಾಗ, 2021-22ರಿಂದ ತಲಾದಾಯದಲ್ಲಿ ಉತ್ತಮ ಬೆಳವಣಿಗೆಯಾಗಿರುವುದು ಗಮನಾರ್ಹವಾಗಿದ್ದು, ಇದು ಕೋವಿಡ್ ಸಾಂಕ್ರಾಮಿಕದಿಂದ ಹಿಂಜರಿತಕ್ಕೆ ಒಳಗಾಗಿದ್ದ ರಾಜ್ಯದ ಆರ್ಥಿಕತೆ ಕ್ರಮೇಣ ಚೇತರಿಕೆಯಾಗಿರುವುದನ್ನು ಸೂಚಿಸುತ್ತದೆ ಎಂಬುದು ಅಧಿಕಾರಿಗಳ ವಿವರಣೆ.
ಎಚ್ಚರಿಕೆ ಗಂಟೆ:ಜಿಲ್ಲಾದಾಯವು ಜಿಲ್ಲಾಮಟ್ಟದಲ್ಲಿನ ಆರ್ಥಿಕ ಬೆಳವಣಿಗೆಯ ಅಳತೆಗೋಲಾ ಗಿದೆ. ರಾಜ್ಯಮಟ್ಟದ ಆರ್ಥಿಕ ಪ್ರಗತಿಯ ಪ್ರಕ್ರಿಯೆಯಲ್ಲಿ ಅಂತರಜಿಲ್ಲಾ ವ್ಯತ್ಯಾಸಗಳ ಹಾಗೂ ಅಸಮತೋಲನದ ಗುಣಲಕ್ಷಣಗಳ ಬಗ್ಗೆ ಗಮನ ಹರಿಸಲು ಇದೊಂದು ಉಪಯುಕ್ತ ನೀತಿ ಸೂಚಕವಾಗಿರುತ್ತದೆ. ಕಲಬುರಗಿ ವಿಭಾಗದ (ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಂತೆ) ತಲಾ ಆದಾಯವು ಕಡೆಯ ಸ್ಥಾನದಲ್ಲಿ ಮತ್ತು ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಬೆಳಗಾವಿ ಮತ್ತು ಮೈಸೂರು ವಿಭಾಗಗಳು ಇವೆ. ಈ ವಿಭಾಗಗಳಲ್ಲಿ ಕೈಗಾರಿಕೆ ಮತ್ತು ಸೇವಾವಲಯದ ಉದ್ಯಮಗಳು ಕಡಿಮೆ ಇರುವುದು ಈ ಪ್ರವೃತ್ತಿಗೆ ಪ್ರಮುಖ ಕಾರಣವೆನ್ನಬಹುದು. ಆದ್ದರಿಂದ ಈ ಪ್ರದೇಶಗಳಲ್ಲಿ್ಲ ಕೈಗಾರಿಕೆ ಮತ್ತು ಸೇವಾವಲಯದ ಉದ್ಯಮಗಳ ಸ್ಥಾಪನೆಯಲ್ಲಿ ಖಾಸಗಿ ವಲಯದವರನ್ನು ಪೊ›ತ್ಸಾಹಿಸಬೇಕಾಗಿದೆ ಎಂದು ಶಿಫಾರಸು ಮಾಡಲಾಗಿದೆ.
2018-19ರ ಸ್ಥಿತಿಗತಿ:ಬೆಂಗಳೂರು ತಲಾದಾಯ 4,96,208 ರೂ. ಇದ್ದರೆ, ದಕ್ಷಿಣ ಕನ್ನಡದ್ದು 3,51,271 ರೂ., ಉಡುಪಿ- 2,84,521, ಚಿಕ್ಕಮಗಳೂರು- 2,50,119, ಶಿವಮೊಗ್ಗ-2,05,368 ರೂ. ಇತ್ತು. 97,353 ರೂ.ನೊಂದಿಗೆ ಯಾದಗಿರಿ ಕೊನೆಯ ಸ್ಥಾನದಲ್ಲಿತ್ತು. ಉಳಿದಂತೆ ಕಲಬುರಗಿ- 99,322, ಬೀದರ್ 1,00,234, ಕೊಪ್ಪಳ-1,00,497 ರೂ. ಇತ್ತು.
ಬರ್ತ್​ಡೇ ಪಾರ್ಟಿಯಲ್ಲಿ ಚಿತ್ರನಟನ ಮೇಲೆ ಹಲ್ಲೆ; ಆಡಿ ಕಾರಿನ ಗಾಜುಗಳು ಧ್ವಂಸ

ಹಠಾತ್ ಹೃದಯಾಘಾತಕ್ಕೆ ಮತ್ತೆರಡು ಬಲಿ; ಕ್ರಿಕೆಟ್​ ಆಡುತ್ತಲೇ ಕುಸಿದು ಬಿದ್ದ ಆಟಗಾರರ ಸಾವು

ಗಂಡ-ಅತ್ತೆಯನ್ನು ಕೊಂದು ಪೀಸ್​ ಮಾಡಿ ಪಕ್ಕದ ರಾಜ್ಯದಲ್ಲಿ ಎಸೆದ್ಲು; ಟ್ಯಾಕ್ಸಿ ಡ್ರೈವರ್, ತರಕಾರಿ ವ್ಯಾಪಾರಿ ನೆರವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
