ಮೈಸೂರು:ಹಾರುವ ಹಾವಿನ ಬಗ್ಗೆ ವೈಲ್ಡ್​ಲೈಫ್ ಕುರಿತ ಚಾನೆಲ್​ಗಳಲ್ಲಿ, ಎಲ್ಲೋ ಅವು ಹಾರುತ್ತಿರುವ ಕುರಿತು ಪತ್ರಿಕೆ, ಟಿವಿಗಳಲ್ಲಿ ಬಹಳಷ್ಟು ಮಂದಿ ಕೇಳಿರುತ್ತಾರೆ. ಆದರೆ ಮೈಸೂರಿನ ಜನರಿಗೆ ಅದನ್ನು ಕಣ್ಣಾರೆ ನೋಡುವ ಅವಕಾಶ ಸಿಕ್ಕಿದೆ.
ಹಾರುವ ಹಾವನ್ನು ಕಂಡು ಕೆಲವರು ಬೆರಗಾಗಿದ್ದು ಒಂದೆಡೆಯಾದರೆ ಮತ್ತೆ ಕೆಲವರು ಭಯಭೀತರಾಗಿದ್ದರು. ಮೈಸೂರಿನ ಆರ್​ಬಿಐ ವಸತಿ ಗೃಹದಲ್ಲಿ ಒಂದು ವಾರದ ಹಿಂದೆ ಕಾಣಿಸಿಕೊಂಡಿದ್ದ ಹಾರುವ ಹಾವು ಇಲ್ಲಿನ ಜನರಲ್ಲಿ ಆತಂಕ ಮೂಡಿಸಿತ್ತು.
ಪಶ್ಚಿಮಘಟ್ಟ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಹಾವು ಮರದಿಂದ ಮರಕ್ಕೆ ಹಾರುತ್ತದೆ. ಹಸಿರು ಮಿಶ್ರಿತ ಕೆಂಪು ಬಣ್ಣದ ಈ ಹಾವು ಸಾಮಾನ್ಯವಾಗಿ ಮೂರು ಅಡಿ ಉದ್ದ ಇರುತ್ತದೆ. ಉರಗ ಸಂರಕ್ಷಕ ಕೆಂಪರಾಜು ಅವರು ಮಂಗಳವಾರ ಈ ಹಾವನ್ನು ಹಿಡಿದಿದ್ದಾರೆ. ಹೀಗೆ ಸಂರಕ್ಷಿಸಲಾಗಿರುವ ಈ ಹಾರುವ ಹಾವನ್ನು ಮೈಸೂರು ವಸ್ತು ಸಂಗ್ರಹಾಲಯಕ್ಕೆ ನೀಡುವುದಾಗಿ ಅವರು ಹೇಳಿದ್ದಾರೆ.
https://www.facebook.com/VVani4U/videos/1761589770686881
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − four =
Remember me
