ಹೊಸೂರು:ಕರ್ನಾಟಕ ರಾಜ್ಯದ ದಕ್ಷಿಣ ಪಿನಾಕಿನಿ ನದಿಯ ಜಲಾನಯನ ಪ್ರದೇಶಗಳಲ್ಲಿ ಮಳೆಯಿಂದಾಗಿ ಹೊಸೂರು ಕೆಲವರಪಲ್ಲಿ ಅಣೆಕಟ್ಟಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಹೆಚ್ಚಾದ ನೀರನ್ನು ಹೊರಬಿಡಲಾಗುತ್ತಿದೆ. ಇದೀಗ ಹೊರಬಿಡಲಾದ ನೀರು ರಾಸಾಯನಿಕ ಸೇರ್ಪಡೆಯಾಗಿದೆ. ಇದರಿಂದ ನೀರು ನೊರೆಗಳಿಂದ ತುಂಬಿ ತುಳುಕುತ್ತಿದೆ.
ಸತತ ಮಳೆಯಿಂದಾಗಿ ಕೆಲವರಪಲ್ಲಿ ತೆನ್ಪೆನ್ನಾ ನದಿ ನೀರಿನ ಹರಿವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹೊಸೂರಿನ ಕೆಲವರಪಲ್ಲಿ ಅಣೆಕಟ್ಟಿನಿಂದ ನೀರು ಹೊರ ಬಿಡಲಾಗಿದೆ. ಹೊರಬಿಡಲಾದ ನೀರಿನಲ್ಲಿ ರಾಸಾಯನಿಕ ನೊರೆ ತುಂಬಿಕೊಂಡಿದೆ. ಕೆಮಿಕಲ್​ ನೀರಿನಿಂದಾಗಿ ನದಿ ಹತ್ತಿಯ ಹೊದಿಕೆಯಂತಾಗಿದ್ದು, ನೊರೆಗಳು ಅಣೆಕಟ್ಟಿನಿಂದ ಉಕ್ಕುತ್ತಿವೆ. ಗಡಿ ಪ್ರದೇಶದ ಕೈಗಾರಿಕೆಗಳ ಕೆಮಿಕಲ್ ನೀರು ನದಿಗೆ ಹರಿಯುತ್ತಿರುವ ಕಾರಣ, ಅಣೆಕಟ್ಟಿನಿಂದ ಹೊರಬಿಡಲಾದ ನೀರಿನಲ್ಲಿ ನೊರೆಗಳು ಕಾಣಿಸಿಕೊಂಡಿವೆ.
ಅಣೆಕಟ್ಟಿನ ಒಟ್ಟು ಸಾಮರ್ಥ್ಯ 44.28 ಅಡಿಗಳಾಗಿದ್ದು, ಪ್ರಸ್ತುತ ಅಣೆಕಟ್ಟಿನಲ್ಲಿ 40.34 ಘನ ಅಡಿ ನೀರು ತುಂಬಿದೆ. ನೀರಿನ ಹರಿವು ಹೆಚ್ಚಾಗುತ್ತಿರುವುದರಿಂದ ಸುರಕ್ಷತೆ ಹಿನ್ನೆಲೆ, ಕೆಲವರಪಲ್ಲಿ ಅಣೆಕಟ್ಟಿನಿಂದ 1148 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ. ಪರಿಣಾಮ ದಕ್ಷಿಣ ಪಿನಾಕಿನಿ ನದಿಯ ದಡದಲ್ಲಿ ಹೆಚ್ಚಿನ ಪ್ರಮಾಣದ ನೀರು ಉಕ್ಕಿ ಹರಿಯುತ್ತದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × two =
Remember me
