ಬೆಂಗಳೂರು:ಕನ್ನಡದಲ್ಲಿ ಚಲನಚಿತ್ರ ನಿರ್ಮಾಣ ಸಂಖ್ಯೆಗೆ ಪೂರಕವಾಗಿ ಗುಣಮಟ್ಟದಲ್ಲೂ ಸುಧಾರಣೆಯಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ನೆಗೆಟಿವ್ ರೋಲ್​ನಿಂದ ಡಿಜಿಟಲ್ ಚಿತ್ರೀಕರಣ ಮಾಡುವವರೆಗೆ ಸಿನಿಮಾ ರಂಗ ಬೆಳೆದಿದೆ. ಕನ್ನಡದಲ್ಲಿ 2018ರಲ್ಲಿ 370 ಚಿತ್ರಗಳು ನಿರ್ಮಾಣವಾದರೆ, 2019ರಲ್ಲಿ 450 ಚಿತ್ರಗಳು ಬಿಡುಗಡೆಗೊಂಡಿವೆ. ವರ್ಷದಿಂದ ವರ್ಷಕ್ಕೆ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಕಥಾವಸ್ತು ಹಾಗೂ ನಿರೂಪಣಾ ವಿಧಾನಗಳ ಗುಣಮಟ್ಟದಲ್ಲೂ ಸುಧಾರಣೆಯಾಗಬೇಕಿದೆ. ವಾಸ್ತವ ಸಮಾಜಕ್ಕೆ ಕನ್ನಡಿ ಹಿಡಿಯುವಂತಹ ಚಿತ್ರಗಳು ಹೆಚ್ಚಾಗಿ ನಿರ್ವಣವಾಗಬೇಕಿದೆ ಎಂದರು.
ಚಿತ್ರರಂಗದ ಅಭಿವೃದ್ಧಿಗೆ ಸರ್ಕಾರ ಸಕಲ ಸಹಕಾರ ನೀಡಲಿದೆ. ‘ಭಾರತೀಯ ಚಿತ್ರರಂಗದ ಭವಿಷ್ಯ ಕನ್ನಡ ಚಿತ್ರರಂಗದಲ್ಲಿದೆ’ ಎಂಬಂತೆ ಕನ್ನಡದಲ್ಲಿ ಸಿನಿಮಾಗಳು ಮೂಡಿಬರಬೇಕಿದೆ. ಪ್ರೇಕ್ಷಕರ ವ್ಯಕ್ತಿತ್ವ ಬದಲಿಸಿ, ಸಮಾಜದ ಹುಳುಕುಗಳನ್ನು ಸರಿಪಡಿಸುವ ಶಕ್ತಿಯನ್ನು ಸಿನಿಮಾ ಮಾಧ್ಯಮ ಹೊಂದಿವೆ. ಹೀಗಾಗಿ ಮೌಲ್ಯಾಧಾರಿತ ಚಲನಚಿತ್ರಗಳು ಹೆಚ್ಚಾಗಿ ಬರಬೇಕು ಎಂದು ಹೇಳಿದರು.
ಅಶಕ್ತರಿಗೆ ಪಿಂಚಣಿ ನೀಡಿ:ಕನ್ನಡ ಚಿತ್ರರಂಗದ ಇತಿಹಾಸವನ್ನು ತಿಳಿಸಲು ಆಯ್ದ ನಗರಗಳಲ್ಲಿ ವಸ್ತು ಸಂಗ್ರಹಾಲಯ ತೆರೆಯುವ ಉದ್ದೇಶ ಹೊಂದಲಾಗಿದೆ. ಅದರ ಜತೆಗೆ ಸ್ಟೋರಿ ಬ್ಯಾಂಕ್, ಪ್ರದೇಶಿಕ ಚಲನಚಿತ್ರೋತ್ಸವ, ಸಿನಿಮಾ ಕಾಂಪ್ಲೆಕ್ಸ್ ನಿರ್ಮಾಣ ದಂತಹ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅದರ ಜತೆಗೆ ಹಿರಿಯ ಮತ್ತು ಅಶಕ್ತ ಕಲಾವಿದರಿಗೆ ಪಿಂಚಣಿ ನೀಡುವುದಕ್ಕೆ ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ತಿಳಿಸಿದರು.
ನಟ ಯಶ್, ನಟಿ ಅದಿತಿ ಪ್ರಭುದೇವ, ಗಾಯಕ ಸೋನು ನಿಗಮ್ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜಯರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಕ್ಯಾ. ಪಿ. ಮಣಿವಣ್ಣನ್, ಆಯುಕ್ತ ಎಸ್.ಎನ್. ಸಿದ್ಧರಾಮಪ್ಪ ಇನ್ನಿತರರಿದ್ದರು.
ಕನ್ನಡದಿಂದ ವೃತ್ತಿಜೀವನಕ್ಕೆ ಮೆರುಗು:ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಿತ್ರ ನಿರ್ವಪಕ ಬೋನಿ ಕಪೂರ್, ಬಹುಭಾಷಾ ನಟಿ ಜಯಪ್ರದಾ, ಕನ್ನಡದಲ್ಲಿ ಮಾತನಾಡಿ ಕನ್ನಡದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಬೋನಿ ಕಪೂರ್, ತಮ್ಮ ನಿರ್ವಣದ ‘ಹಮ್ ಪಾಂಚ್’ ಸಿನಿಮಾವನ್ನು ಮೇಲುಕೋಟೆಯಲ್ಲಿ ಚಿತ್ರೀಕರಿಸಿದ್ದಾಗಿನ ಅನುಭವಗಳನ್ನು ಹಂಚಿಕೊಂಡರು. ‘ಕನ್ನಡ ಜನ, ಕನ್ನಡ ಭಾಷೆ, ಕನ್ನಡ ಚಿತ್ರ ನನ್ನ ಜೀವನದ ಅತ್ಯಂತ ಪ್ರೀತಿಯ ವಿಷಯಗಳು. ಡಾ. ರಾಜ್, ವಿಷ್ಣುವರ್ಧನ್, ಅಂಬರೀಷ್​ರಂತಹ ಮೇರುನಟರು ನನ್ನ ವೃತ್ತಿ ಜೀವನಕ್ಕೆ ಮೆರುಗು ತಂದರು’ ಎಂದು ಜಯಪ್ರದಾ ಹೇಳಿದರು.
ಜಯಂತಿಯಿಂದ ಮೀನಾವರೆಗೆ…:ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಭಾರತೀಯ ಚಲನಚಿತ್ರ ನಟಿಯರಿಗೆ ಗೌರವ ಸೂಚಿಸುವ ನೃತ್ಯ ಪ್ರದರ್ಶಿಸಲಾಯಿತು. ಜಯಂತಿ, ಬಿ. ಸರೋಜಾದೇವಿ, ಮಧುಬಾಲಾ, ರೇಖಾ, ಶ್ರೀದೇವಿ, ಮೀನಾ ಅವರು ನಟಿಸಿದ ಚಲನಚಿತ್ರಗಳ ಗೀತೆಗೆ ಕಲಾವಿದರು ಆಕರ್ಷಕ ನೃತ್ಯ ಪ್ರದರ್ಶಿಸಿದರು.
ಸಭಿಕರ ಮನಗೆದ್ದ ನೃತ್ಯ ರೂಪಕಗಳು:ಜಾಗತಿವಾಗಿ ಚಲನಚಿತ್ರ ಮಾಧ್ಯಮಕ್ಕೆ 125 ವರ್ಷಗಳಾದ ಹಿನ್ನೆಲೆಯಲ್ಲಿ, ಆ ಕುರಿತ ವಿಡಿಯೋವನ್ನು ಪ್ರದರ್ಶಿಸಲಾಯಿತು. ಭಾರತೀಯ ಚಲನಚಿತ್ರದ ಶ್ರೀಮಂತಿಕೆಯನ್ನು ತೋರಿಸುವಂತಹ ಗೀತೆಗಳಿಗೆ ಕಲಾವಿದರು ನೃತ್ಯ ಮಾಡಿ ನೆರೆದ ಸಭಿಕರಿಗೆ ಖುಷಿ ಉಣಬಡಿಸಿದರು. ಜಾನಪದ, ರೈತರಿಗೆ ಗೌರವ ಸೂಚಿಸುವಂತಹ ನೃತ್ಯರೂಪಕಗಳು ಸಭಿಕರ ಮನಸೆಳೆದವು.
60 ದೇಶಗಳ 225 ಚಿತ್ರ ಪ್ರದರ್ಶನ:ಬುಧವಾರ ಆರಂಭವಾಗಿರುವ ಚಲನಚಿತ್ರೋತ್ಸವ ಮಾ. 4ರವರೆಗೆ ನಡೆಯಲಿದೆ. ಈ ಬಾರಿಯ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದ ‘ಪ್ಯಾರಸೈಟ್’ ಸೇರಿ 60 ದೇಶಗಳ 225 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಉದ್ಘಾಟನಾ ಚಿತ್ರವಾಗಿ ಇರಾನಿ ಚಲನಚಿತ್ರ ನಿರ್ದೇಶಕ ಶಾಹಿದ್ ಅಹಮಡೇಲು ನಿರ್ದೇಶನದ ‘ಸಿನಿಮಾ ಖಾರ್’ ಪ್ರದರ್ಶನಗೊಂಡಿತು. ಒರಾಯನ್ ಮಾಲ್, ನವರಂಗ್ ಚಿತ್ರಮಂದಿರ, ಕನ್ನಡ ಕಲಾವಿದರ ಸಂಘದ ಡಾ.ರಾಜ್ ಭವನ, ಸುಚಿತ್ರ ಫಿಲಂ ಸೊಸೈಟಿಗಳಲ್ಲಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − ten =
Remember me
