ಬೆಂಗಳೂರು: ಲಾಕ್​ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದವರಿಗೆ ಹಂಚಿಕೆ ಮಾಡಲಾದ ಫುಡ್ಕಿಟ್ ಮತ್ತು ಕಟ್ಟಡ ಕಾರ್ವಿುಕರಿಗೆ ಪರಿಹಾರ ಧನ ವಿತರಣೆಯಲ್ಲಿ ಅನುಮಾನ ವ್ಯಕ್ತಪಡಿಸಿರುವ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಸೂಕ್ತ ಮಾಹಿತಿ ನೀಡುವಂತೆ ಕಾರ್ವಿುಕ ಇಲಾಖೆಗೆ ವಾರದ ಗಡುವು ನೀಡಿದೆ.
ಪರಿಕರ, ಕಿಟ್ ಖರೀದಿಯಲ್ಲಿ ಆರೋಗ್ಯ ಇಲಾಖೆಯ ಕೆಲ ಸಂಶಯಾತ್ಮಕ ನಡೆಗಳು ಇನ್ನೂ ಬಗೆಹರಿದಿಲ್ಲ. ಆಗಲೇ ಕಾರ್ವಿುಕ ಇಲಾಖೆ ವಿರುದ್ಧ ಪಕ್ಷಾತೀತವಾಗಿ ಶಾಸಕರು ತಿರುಗಿಬಿದ್ದಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆ ನಡೆದಿದ್ದು, ಕಾರ್ವಿುಕ ಇಲಾಖೆ ನೀಡಿದ ಕರೊನಾ ನಿರ್ವಹಣೆ ಲೆಕ್ಕಾಚಾರದ ಮೇಲೆ ಶಾಸಕರು ಅನುಮಾನ ವ್ಯಕ್ತಪಡಿಸಿದ್ದಲ್ಲದೆ ಅಧಿಕಾರಿಗಳ ಮೇಲೆ ಏರಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಲಾಕ್​ಡೌನ್ ವೇಳೆ ಕಾರ್ವಿುಕ ಇಲಾಖೆಯಿಂದ 900 ಕೋಟಿ ರೂ. ವೆಚ್ಚ ಮಾಡಿದ್ದರೂ ಸ್ಪಷ್ಟತೆ ಇಲ್ಲ. ಆಹಾರ ಕಿಟ್ ವಿತರಣೆ ಮತ್ತು ಕಾರ್ವಿುಕರಿಗೆ ಐದು ಸಾವಿರ ರೂ. ಪರಿಹಾರ ನೀಡಿಕೆಯಲ್ಲೂ ಪಾರದರ್ಶಕತೆ ಕಾಣುತ್ತಿಲ್ಲ ಎಂದು ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಿಟ್ ಯಾರಿಗೆ ಕೊಟ್ಟಿದ್ದೀರಿ? ಸಂಘಟಿತ, ಅಸಂಘಟಿತರೆಷ್ಟು? ಮಾಹಿತಿ ಕೊಡಿ ಎಂದು ಕೇಳಿದ್ದೆವು. ಅವರು ಕೊಟ್ಟ ಮಾಹಿತಿ ತೃಪ್ತಿ ತಂದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಅಧಿಕಾರಿಗಳು ಮತ್ತೊಮ್ಮೆ ಮಾಹಿತಿ ನೀಡಿದ ಮೇಲೆ ಸತ್ಯಾಂಶ ಗೊತ್ತಾಗಲಿದೆ ಎಂದು ವಿಜಯವಾಣಿಗೆ ತಿಳಿಸಿದರು.
ಸ್ಪೀಕರ್ ಭೇಟಿಗೆ ಕೋರಿಕೆ
ಆರೋಗ್ಯ ಇಲಾಖೆಯ ಪರಿಕರ ಖರೀದಿ ಬಗ್ಗೆ ತನಿಖೆಗೆ ತಡೆ ಹಾಕಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಅವರ ಭೇಟಿಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರು ಸಮಯ ಕೇಳಿದ್ದಾರೆ. ಖರೀದಿ ಬಗ್ಗೆ ಅನುಮಾನವಿದ್ದರಿಂದ ಸಮಿತಿ ತನಿಖೆಗೆ ಮುಂದಾಗಿತ್ತು. ಕರೊನಾ ಹಿನ್ನೆಲೆ ಸ್ಥಳ ತನಿಖೆ, ಕಚೇರಿಗಳ ಭೇಟಿ ಸೂಕ್ತವಲ್ಲ ಎಂದು ಸ್ಪೀಕರ್ ಕಚೇರಿಯಿಂದ ನಿರ್ದೇಶನ ಬಂದಿತ್ತು. ಇದೇವೇಳೆ ಸ್ಪೀಕರ್ ವಿರುದ್ಧವೇ ಸಮಿತಿ ಅಧ್ಯಕ್ಷರು ಸೇರಿ ಕಾಂಗ್ರೆಸ್ ಟೀಕಾಪ್ರಹಾರ ನಡೆಸಿತ್ತು.
14 ಲಕ್ಷ ಜನರಿಗೆ ಹಣ ಕಳಿಸಿದ್ದಾಗಿ ಇಲಾಖೆಯವರು ಹೇಳಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಹಣ ನೀಡಿದ ಖಾತೆಯ ವಿವರವೇ ಇಲ್ಲ. ನಿರ್ವಹಣಾ ವ್ಯವಸ್ಥೆ ಸರಿಯಾಗಿಲ್ಲ. ಇನ್ನೂ ಚೆನ್ನಾಗಿ ಮಾಡಬಹುದಿತ್ತೆಂದು ಸದಸ್ಯರು ಅಭಿಪ್ರಾಯ ವ್ಯಕ್ತಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ನಮ್ಮ ಕ್ಷೇತ್ರಕ್ಕೆ ಒಂದೇ ಒಂದು ಕಿಟ್ ಬಂದಿಲ್ಲ ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ಹೇಳಿದರೆ, ನಾಲ್ಕು ಸಾವಿರ ಕಿಟ್ ಪಡೆದುಕೊಳ್ಳಲು ಆಡಳಿತ ಪಕ್ಷದ ಶಾಸಕನಾಗಿ ಹರಸಾಹಸಪಡ ಬೇಕಾಯಿತು ಎಂದು ರವಿಸುಬ್ರಹ್ಮಣ್ಯ ಹೇಳಿದರು ಎನ್ನಲಾಗಿದೆ.
ವರದಿಯಲ್ಲೇನಿತ್ತು?1 ಕಾರ್ವಿುಕ ಮಂಡಳಿಯಲ್ಲಿ ನೋಂದಣಿಯಾಗಿದ್ದ 21,78,019 ಕಾರ್ವಿುಕರ ಪೈಕಿ 14,78,388 ಕಾರ್ವಿುಕರಿಗೆ 739.19 ಕೋಟಿ ರೂ. ಪರಿಹಾರ ನೀಡಲಾಗಿದೆ.2 2007ರಿಂದ 2016ರವರೆಗೆ ನೋಂದಣಿಯಾದ ಕಾರ್ವಿುಕರ ಬ್ಯಾಂಕ್ ಖಾತೆಗಳ ವಿವರ ಲಭ್ಯವಿರಲಿಲ್ಲ. ಅಂತಹ ಕಾರ್ವಿುಕರಿಂದ ಬ್ಯಾಂಕ್ ಖಾತೆಯ ವಿವರ ಪಡೆದು ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.3 ಕಟ್ಟಡ ಕಾರ್ವಿುಕರಿಗೆ ಅರಿವು ಮೂಡಿಸಲು, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಉಚಿತವಾಗಿ ಸೋಪ್, ಸ್ಯಾನಿಟೈಸರ್, ಮಾಸ್ಕ್ ವಿತರಣೆಗಾಗಿ 4.10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.4 ಮಾರ್ಚ್ 30ರಿಂದ ಕಟ್ಟಡ ಮತ್ತು ವಲಸೆ ಕಾರ್ವಿುಕರಿಗೆ ಸಿದ್ಧಪಡಿಸಿದ ಆಹಾರ ಪ್ಯಾಕೆಟ್​ಗಳನ್ನು ವಿತರಿಸಲಾಗುತ್ತಿದ್ದು, ಒಟ್ಟಾರೆ 83.39 ಲಕ್ಷ ಕಿಟ್ ವಿತರಿಸಲಾಗಿದೆ.5 ಕಟ್ಟಡ ಮತ್ತು ವಲಸೆ ಕಾರ್ವಿುಕರಿಗೆ ಒಟ್ಟು 5,58,000 ಆಹಾರ ಸಾಮಾಗ್ರಿ ಕಿಟ್​ಗಳನ್ನು ತಯಾರಿಸಿದ್ದು, ಇದುವರೆಗೂ 5,08,000 ಕಿಟ್ ರಾಜ್ಯಾದ್ಯಂತ ವಿತರಿಸಲಾಗಿದೆ.6 ಆಹಾರ ಪ್ಯಾಕೆಟ್ ಮತ್ತು ಆಹಾರ ಸಾಮಗ್ರಿಗಳ ಕಿಟ್ ಖರೀದಿಗೆ 69.90 ಕೋಟಿ ರೂ. ವೆಚ್ಚ ಮಾಡಲಾಗಿದೆ.7 ರಾಜ್ಯದಿಂದ ಇತರ ರಾಜ್ಯಗಳಿಗೆ ಕಾರ್ವಿುಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ. ಜೂನ್ 14ರವರೆಗೆ ಒಟ್ಟು 3,38,837 ಕಾರ್ವಿುಕರನ್ನು ರೈಲುಗಳ ಮೂಲಕ ಅವರವರ ರಾಜ್ಯಗಳಿಗೆ ಕಳಿಸಿಕೊಡಲಾಗಿದೆ.
ಚೀನಾ-ಭಾರತ ಸಂಘರ್ಷ: ಭಾರತದ 20 ಯೋಧರು ಹುತಾತ್ಮ, 40ಕ್ಕೂ ಹೆಚ್ಚು ಚೀನಾ ಯೋಧರೂ ಹತರಾಗಿರುವ ಶಂಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 17 =
Remember me
