ಬೆಂಗಳೂರು:ಅಕಾಡೆಮಿಗಳ ಅಧ್ಯಕ್ಷ ಮತ್ತು ಸದಸ್ಯರ ನೇಮಕ ಪ್ರಕ್ರಿಯೆಗೆ ತೆರೆ ಮರೆಯಲ್ಲಿ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲಿಯೇ ಅದಕ್ಕಾಗಿ ಲಾಬಿಯೂ ಶುರುವಾಗಿದೆ.
ಸಾಹಿತ್ಯ, ನಾಟಕ, ಜಾನಪದ, ಯಕ್ಷಗಾನ, ಶಿಲ್ಪಕಲಾ, ಲಲಿತ ಕಲಾ, ಬಯಲಾಟ, ನೃತ್ಯ ಮತ್ತು ಸಂಗೀತ, ಪ್ರಕಾಶನ ಹಾಗೂ ಭಾಷಾ ಅಕಾಡೆಮಿಗಳು ಸೇರಿದಂತೆ ಹಲವು ಅಕಾಡೆಮಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಕಾರಣ ಸಚಿವ ಶಿವರಾಜ್ ತಂಗಡಗಿ ಅವರ ವಿಧಾನಸೌಧದ ಕಚೇರಿ ಬ್ಯುಸಿ ಕೇಂದ್ರವಾಗಿ ಮಾರ್ಪಟ್ಟಿದೆ.
ಪ್ರತಿ ನಿತ್ಯ ಬಯೋಡೇಟ ಸಹಿತ ಅರ್ಜಿ ಹಿಡಿದು ಬರುವವರ ಸಂಖ್ಯೆ ಒಂದೆಡೆಯಾದರೆ, ಶಾಸಕರು, ಸಚಿವರಿಂದ ಶಿಾರಸ್ಸು ಪತ್ರ ಹಿಡಿದು ವಿಧಾನಸೌಧ ಎಡ ತಾಕುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಇನ್ನು ಕೆಲ ಆಕಾಂಕ್ಷಿಗಳು ಶಾಸಕರು ಮತ್ತು ಮುಖಂಡರನ್ನು ಕರೆದುಕೊಂಡು ಬಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರ ಮೇಲೆ ಒತ್ತಡ ಹಾಕುವ ಪ್ರಯತ್ನವನ್ನು ಮಾಡುತ್ತಿರುವುದು ವಿಶೇಷ.ಯಾವ್ಯಾವ ಅಕಾಡೆಮಿಗೆ ಯಾರ‌್ಯಾರು ಅರ್ಜಿ ಹಾಕುತ್ತಿದ್ದಾರೆ ಎನ್ನುವುದನ್ನು ನೋಡಿ ಪ್ರತ್ಯೇಕ ೈಲ್ ಮಾಡಲಾಗುತ್ತಿದೆ. ಇನ್ನು ಶಿಾರಸ್ಸು ಸಹಿತ ಬಂದವರನ್ನು ಪ್ರತ್ಯೇಕವಾಗಿ ಇಡಲಾಗುತ್ತಿದೆ. ಆಯಾ ಕ್ಷೇತ್ರಗಳಲ್ಲಿ ಅರ್ಹತೆಯ ಆಧಾರದ ಮೇಲೆ ಇರುವವರ ಪಟ್ಟಿಯನ್ನು ಇಲಾಖೆಯೇ ಗುರುತಿಸಿ ನೀಡುವಂತೆ ಸಚಿವರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಷ್ಟೆ ಅಲ್ಲದೆ, ರಂಗಾಯಣಕ್ಕೂ ನೇಮಕ ಇದೇ ಸಂದರ್ಭದಲ್ಲಿ ನಡೆಯಲಿದೆ. ಹಾಗಾಗಿ ಮೈಸೂರು, ಕಲಬುರ್ಗಿ, ಧಾರವಾಡ, ಶಿವಮೊಗ್ಗ ರಂಗಾಯಣಕ್ಕೂ ಡಿಮ್ಯಾಂಡ್ ಬಂದಿದೆ.
ಬಲಪಂಥೀಯ ಧೋರಣೆ ಹೊಂದಿರುವ ಮತ್ತು ಕಳೆದ ಸರ್ಕಾರದ ಅವಧಿಯಲ್ಲಿ ಸ್ಥಾನ ಮಾನಗಳನ್ನು ಹೊಂದಿದ್ದವನ್ನು ದೂರವೇ ಇಡಬೇಕು ಎಂದು ಮೌಖಿಕ ಸೂಚನೆ ನೀಡಲಾಗಿದೆ. ಅಕಾಡೆಮಿ ಅಧ್ಯಕ್ಷ ಮತ್ತು ಸದಸ್ಯರ ನೇಮಕ ಸಂದರ್ಭದಲ್ಲಿ ಎಡಪಂಥೀಯ ಧೋರಣೆ ಹೊಂದಿದವರಿಗೆ ಆದ್ಯತೆ ನೀಡಬೇಕು ಎನ್ನುವ ಆಶಯದಂತೆಯೇ ಸಾಂಭವ್ಯ ಪಟ್ಟಿಯನ್ನು ಸಿದ್ಧಪಡಿಸಿ ಮುಖ್ಯಮಂತ್ರಿಗಳ ಬಳಿಗೆ ತೆಗೆದುಕೊಂಡು ಹೋಗಲಾಗುವುದು. ಸಿಎಂ ಹಂತದಲ್ಲಿ ನಡೆಯುವ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
